ಬೆಂಗಳೂರು : ನಟ ಪಿ. ಸಾಯಿ ಕುಮಾರ್ (P saikumar) ಅವರಿಗೆ (ಜು.27) ಬುಧವಾರ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು. ಸಾಯಿಕುಮಾರ್ ಶರ್ಮಾ ಪುಡಿಪಡ್ಡಿ ಅವರ ತಾಯಿ ಕೂಡ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತಂದೆ ಪಿ.ಜೆ.ಶರ್ಮಾ ನಟ ಮತ್ತು ಕಂಠದಾನ ಕಲಾವಿದರು.
ಬಾಲ್ಯದಲ್ಲಿ ಕಂಠದಾನ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ಸಾಯಿಕುಮಾರ್ ಅವರು ಸುಮನ್, ರಾಜಶೇಖರ್ ಮುಂತಾದ ಕಲಾವಿದರಿಗೆ ಕಂಠದಾನ ನೀಡುತ್ತಿದ್ದರು.
ಪ್ರಶಸ್ತಿಗಳು
ಅವರ ಇತ್ತೀಚಿನ ಕನ್ನಡ ಬ್ಲಾಕ್‌ಬಸ್ಟರ್ ಹಿಟ್ ಚಿತ್ರ ರಂಗಿತರಂಗ. ಇದು 2016ರಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು ಅರ್ಹವಾದ ಅಗ್ರ 300 ಚಲನಚಿತ್ರಗಳಲ್ಲಿ ಒಂದಾಗಿತ್ತು. ಚಿತ್ರದಲ್ಲಿನ ಅವರ ಅಭಿನಯವು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿತು. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿನ ಅವರ ಕೆಲಸಕ್ಕಾಗಿ ಅವರು ಎರಡು ರಾಜ್ಯ ನಂದಿ ಪ್ರಶಸ್ತಿಗಳನ್ನು ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಪ್ರಸ್ಥಾನಂ’ (2010) ನಲ್ಲಿನ ಅವರ ಅಭಿನಯಕ್ಕಾಗಿ ಫಿಲ್ಮ್ ಕಂಪ್ಯಾನಿಯನ್ ಅವರ ” ಶ್ರೇಷ್ಠ ಪ್ರದರ್ಶನಗಳ” ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ | ಜನುಮದಿನದ ಸಂಭ್ರಮದಲ್ಲಿ Suriya
ಚಲನಚಿತ್ರಗಳ ಜತೆಗೆ ಜೆಮಿನಿ ಟಿವಿ ಮತ್ತು Etv ಕನ್ನಡದಲ್ಲಿ ಹಲವಾರು ಶೋಗಳನ್ನು ಆಯೋಜಿಸಿದ್ದಾರೆ. ʻಸಾಮಾನ್ಯುಡುʼ (2006) ಅತ್ಯುತ್ತಮ ಖಳನಾಯಕನ ನಂದಿ ಪ್ರಶಸ್ತಿ, ʻಪ್ರಸ್ಥಾನಂʼ (2010) ಅತ್ಯುತ್ತಮ ಪೋಷಕ ಪ್ರಶಸ್ತಿ ದೊರೆತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ
ಕನ್ನಡ ಚಿತ್ರಗಳಾದ ʻಅಗ್ನಿ ಐಪಿಎಸ್ʼ, ʻಕುಂಕುಮ ಭಾಗ್ಯʼ, ʻಪೊಲೀಸ್ ಸ್ಟೋರಿ 2ʼ, ʻಲಾಕಪ್ ಡೆತ್ʼ, ʻಸರ್ಕಲ್ ಇನ್ಸ್‌ಪೆಕ್ಟರ್ʼ, ʻಸೆಂಟ್ರಲ್ ಜೈಲ್ʼ, ʻಪೊಲೀಸ್ ಬೇಟೆʼ ಮತ್ತು ʻಮನೆ ಮನೆ ರಾಮಾಯಣʼ ಇವೆಲ್ಲವೂ ಪ್ರಮುಖ ಹಿಟ್ ಆಗಿದ್ದವು. ಸಾಯಿಕುಮಾರ್ ಅವರು ತಮ್ಮ ಎಲ್ಲಾ ಸಂದರ್ಶನಗಳಲ್ಲಿ, ‘ನನ್ನ ಕಷ್ಟದ ದಿನಗಳಲ್ಲಿ ನನ್ನನ್ನು ಸ್ಟಾರ್ ಮಾಡಿದ ಮತ್ತು ಪೊಲೀಸ್ ಕಥೆಯನ್ನು ನೀಡಿದ ಕರ್ನಾಟಕಕ್ಕೆ ನಾನು ಋಣಿಯಾಗಿದ್ದೇನೆʼ ಎಂದು ಹೇಳಿಕೊಂಡಿದ್ದರು.
ಸಾಯಿ ಕುಮಾರ್ ನಟನೆಯ ʻರಾಕ್ಷಸರುʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಿಂಹಾದ್ರಿ ಪ್ರೊಡಕ್ಷನ್ಸ್ ಮೂಲಕ ಉತ್ತಮ ಚಿತ್ರಗಳನ್ನು ನೀಡಿರುವ ರಮೇಶ್ ಕಶ್ಯಪ್ ನಿರ್ಮಿಸಿರುವ “ರಾಕ್ಷಸರು” ಚಿತ್ರ ಆಗಸ್ಟ್‌ನಲ್ಲಿ ದೇಶದಾದ್ಯಂತ ತೆರೆ ಕಾಣುತ್ತಿದೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.“ರಾಕ್ಷಸರು”. ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಸಾಯಿ ಕುಮಾರ್ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ.
ಇದನ್ನೂ ಓದಿ | Shivaraj Kumar Birthday | ಜನುಮದಿನದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್