Site icon Vistara News

Actor Prabhas | ʻಸಲಾರ್‌ʼ ಬಗ್ಗೆ ಹೊಸ ಅಪ್‌ಡೇಟ್‌: ನಿಜಾನಾ ಅಂತಿದ್ದಾರೆ ಫ್ಯಾನ್ಸ್‌!

Actor Prabhas

ಬೆಂಗಳೂರು : ಪ್ರಶಾಂತ್‌ ನೀಲ್‌ ಅವರು ಪ್ರಭಾಸ್‌ (Actor Prabhas) ಅಭಿನಯದ ‘ಸಲಾರ್‌’ (Salaar) ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಕ್ಟೋಬರ್‌ 23 ಪ್ರಭಾಸ್‌ ಜನುಮದಿನ. ‘ಸಲಾರ್‌’ ಚಿತ್ರದ ಅಪ್‌ಡೇಟ್‌ಗಾಗಿ ಪ್ರಭಾಸ್‌ ಅಭಿಮಾನಿಗಳು ಕಾದಿದ್ದರು. ಒಂದು ಪೋಸ್ಟರ್‌ ಹೊರತಾಗಿ ಯಾವುದೇ ಅಪ್‌ಡೇಟ್‌ ನೀಡದ ಕಾರಣ ಪ್ರಭಾಸ್‌ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ಬೇಸರ ಹೊರಹಾಕುತ್ತಿದ್ದಾರೆ. ಈ ನಡುವೆ ಚಿತ್ರದ ಬಗ್ಗೆ ಒಂದು ಹೊಸ ವಿಚಾರ ಹರಿದಾಡುತ್ತಿದೆ.

ಈಗಾಗಲೇ ಸಲಾರ್‌ ಸಿನಿಮಾ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಟೀಸರ್‌ ಬಿಡುಗಡೆಯಾಗುತ್ತದೆ ಎಂದು ಫ್ಯಾನ್ಸ್‌ ಕಾದಿದ್ದರು. ಏನಾದರೂ ಒಂದು ಅಪ್‌ಡೇಟ್‌ ಕೊಡಿ, ಒಂದು ಪೋಸ್ಟರ್‌ ಆದರೂ ರಿಲೀಸ್‌ ಮಾಡಿ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಕೇಳುತ್ತಿದ್ದಾರೆ. ಇದೀಗ ಸಲಾರ್‌ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ.

ಇದನ್ನೂ ಓದಿ | Actor Prabhas | ಬಯಲಾಯ್ತಾ ಪ್ರಭಾಸ್‌ ವಿಗ್‌ ಸೀಕ್ರೆಟ್‌: ವಿಡಿಯೊ ವೈರಲ್‌!

ನಿರ್ದೇಶಕ ಪ್ರಶಾಂತ್‌ ನೀಲ್‌ ʻಕೆಜಿಎಫ್‌ʼ ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ದೇಶಿಸಿದ್ದರು. ಅಲ್ಲದೆ ‘ಕೆಜಿಎಫ್‌’ ಚಿತ್ರದ ಮಲ್ಟಿವರ್ಸ್‌ ಭಾಗವಾಗಿ ಪ್ರಶಾಂತ್‌ ನೀಲ್‌ ಈ ‘ಸಲಾರ್‌’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಯಶ್‌ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು 10 ನಿಮಿಷ ಬಂದು ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಇದನ್ನು ಅಧಿಕೃತವಾಗಿ ಘೋಷಿಸದೇ ಇದ್ದರೂ, ‘ಸಲಾರ್‌’ ಸಿನಿಮಾ ಎರಡು ಭಾಗಗಳಾಗಿ ಬರುವುದು ಖಚಿತ ಎನ್ನಲಾಗುತ್ತಿದೆ.

ಸಂಕ್ರಾಂತಿ ಹಬ್ಬದ ದಿನ ಸಲಾರ್ ಸಿನಿಮಾದ ಗ್ಲಿಮ್ಸ್
2023ರ ಸೆಪ್ಟೆಂಬರ್ 28ರಂದು ಸಲಾರ್ ತೆರೆ ಮೇಲೆ ಮೂಡಿ ಬರಲಿದೆ. 70%ರಷ್ಟು ಚಿತ್ರೀಕರಣ ಕಂಪ್ಲೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಸಂಕ್ರಾಂತಿ ಹಬ್ಬದ ದಿನ ಸಲಾರ್ ಸಿನಿಮಾದ ಗ್ಲಿಮ್ಸ್ ಬಿಡುಗಡೆ ಮಾಡಲಿದ್ದಾರೆ. ಸಲಾರ್ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಇನ್ನೊಂದೆಡೆ ಪ್ರಭಾಸ್‌ ‘ಆದಿಪುರುಷ್‌’ ಹಾಗೂ ‘ರಾಜಾ ಡಿಲಕ್ಸ್‌’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ | Actor Prabhas | ಪ್ರಭಾಸ್‌ ಚಿತ್ರದಲ್ಲಿ ಸಂಜಯ್‌ ದತ್‌!

Exit mobile version