Site icon Vistara News

Prabhu Ganesan: ಬಹುಭಾಷಾ ನಟ ಪ್ರಭು ಗಣೇಶನ್‌ ಆಸ್ಪತ್ರೆಗೆ ದಾಖಲು, ಏನು ಸಮಸ್ಯೆ?

Actor Prabhu Ganesan Gets Admitted To A Hospital

ಬೆಂಗಳೂರು: ಬಹುಭಾಷಾ ನಟ ಪ್ರಭು ಗಣೇಶನ್‌(Prabhu Ganesan) ಚೆನ್ನೈನ ಮೆಡ್‌ ವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪಾಸಣೆ ವೇಳೆ ಅವರಿಗೆ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. ಲೇಸರ್‌ ಎಂಡೋಸ್ಕೋಪಿ ಚಿಕಿತ್ಸೆ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗಿದ್ದು, ಬೇರೆ ಏನೂ ಸಮಸ್ಯೆ ಇಲ್ಲ. ಶೀಘ್ರದಲ್ಲೇ ಅವರು ಡಿಸ್ಚಾರ್ಜ್‌ ಆಗಲಿದ್ದಾರೆ. ಕೆಲವು ದಿನಗಳು ವಿಶ್ರಾಂತಿ ಪಡೆದರೆ ಮೊದಲಿನಂತೆ ಆಗುತ್ತಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಭಯ ಪಡುವ ಅಗತ್ಯ ಇಲ್ಲ ಎಂದು ಪ್ರಭು ಕುಟುಂಬ ಸ್ಪಷ್ಟಪಡಿಸಿದೆ.

ಪ್ರಭು ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾರೈಸಿದ್ದಾರೆ. ದಕ್ಷಿಣದಲ್ಲಿ ಬಹು ಬೇಡಿಕೆಯ ನಟರಲ್ಲಿ ಪ್ರಭು ಕೂಡ ಒಬ್ಬರು. ಅವರು ಪ್ರಸ್ತುತ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯಕೀಯ ಬುಲೆಟಿನ್ ಪ್ರಕಾರ, ಪ್ರಭು ಅವರ ಆರೋಗ್ಯದಲ್ಲಿ ಸುಧಾರಿಸಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆʼʼ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Richard Gere: ಶಿಲ್ಪಾ ಶೆಟ್ಟಿಗೆ ವೇದಿಕೆಯಲ್ಲೇ ಕಿಸ್ ಮಾಡಿ ವಿವಾದಕ್ಕೆ ಕಾರಣವಾಗಿದ್ದ ನಟ ರಿಚರ್ಡ್ ಗೇರ್ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ: Food Poisoning: ಚಿತ್ರಾನ್ನ ಸೇವಿಸಿದ 9 ವಿದ್ಯಾರ್ಥಿಗಳಿಗೆ ವಾಂತಿ, ಭೇದಿ; ಅಸ್ವಸ್ಥಗೊಂಡವರು ಆಸ್ಪತ್ರೆಗೆ ದಾಖಲು

ತಮಿಳಿನ ಖ್ಯಾತ ನಟ, ದಿವಂಗತ ಶಿವಾಜಿ ಗಣೇಶನ್‌ ಅವರ ಎರಡನೇ ಪುತ್ರ ಪ್ರಭು. ಪ್ರಭು ಅವರು 1982ರಲ್ಲಿ ಸಾಂಗಿಲಿ (Sangili) ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ವಂಶಿ ಪೈಡಿಪಲ್ಲಿ ನಿರ್ದೇಶನದ ದಳಪತಿ ವಿಜಯ್ ಅವರ “ವಾರಿಸು” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂದೆ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್-2 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version