ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ (Actor Rajinikanth) ಅವರು ತಮ್ಮ ಬಹು ನಿರೀಕ್ಷಿತ ಚಿತ್ರ ಜೈಲರ್‌ನಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪ್ರತಿ ಚಿತ್ರ ಮುಗಿದ ನಂತರ, ರಜನಿಕಾಂತ್ ಹಿಮಾಲಯದ ಪ್ರವಾಸವನ್ನು ಕೈಗೊಳ್ಳುತ್ತಾರೆ. ನಟ ರಜನಿಕಾಂತ್ ಅವರು ಆಗಾಗ ಆಧ್ಯಾತ್ಮಿಕದ ಕಡೆಗೆ ಹೊರಳುವುದನ್ನು ನೋಡಿಯೇ ಇರುತ್ತೀರ. ಭಕ್ತಿ, ದೇವರ ವಿಚಾರದಲ್ಲಿ ಅವರು ಮನಸ್ಸು ಸದಾ ಜಾಗೃತವಾಗಿರುತ್ತದೆ. ಈಗಾಗಲೆ ಹಲವಾರು ಸಲ ಹಿಮಾಲಕ್ಕೆ ಹೋಗಿ ಬಂದಿದ್ದಾರೆ. ಈ ಆಧ್ಯಾತ್ಮಿಕ ಪ್ರವಾಸವನ್ನು ಕೈಗೊಳ್ಳುವ ಸಂಪ್ರದಾಯವನ್ನು ಬಹು ವರ್ಷಗಳಿಂದ ನಟ ಹೊಂದಿದ್ದಾರೆ. ಆಗಸ್ಟ್ 6 ಅಥವಾ 7 ರಂದು “ಜೈಲರ್” ಬಿಡುಗಡೆಯಾದ ನಂತರ ನಟ ಮತ್ತೊಮ್ಮೆ ಈ ಆಧ್ಯಾತ್ಮಿಕ ಪ್ರಯಾಣವನ್ನು ಮಾಡಲಿದ್ದಾರೆ ಎಂದು ವರದಿ ಆಗಿದೆ.
ರಜನಿಕಾಂತ್ ಅವರು ಹಲವಾರು ವರ್ಷಗಳಿಂದ ಅಭ್ಯಾಸವನ್ನು ಅನುಸರಿಸಿಕೊಂಡು ಬಂದಿದ್ದಾರೆ. 2010ರ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಬಳಲಿದ್ದಾಗ ನಟ ಹಿಮಾಲಯಕ್ಕೆ ಹೋಗಿರಲಿಲ್ಲ. 2018ರಲ್ಲಿ, ಕಾಲಾ ಮತ್ತು 2.0 ಚಿತ್ರ ರಿಲೀಸ್ ಆದ ಮೇಲೆ ಹಿಮಾಲಯಕ್ಕೆ ಭೇಟಿ ಕೊಟ್ಟಿದ್ದರು. ಇದೀಗ, ಜೈಲರ್ ಚಿತ್ರದ ಶೂಟಿಂಗ್ ಮುಗಿದಿದ್ದು, ರಜನಿಕಾಂತ್ ಮತ್ತೆ ಹಿಮಾಲಯದ ಕಡೆ ಮುಖ ಮಾಡಿಲಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 10 ರಂದು ಸಿನಿಮಾ ತೆರೆಗೆ
ಇದೀಗ 2 ಗಂಟೆ 48 ನಿಮಿಷ 47 ಸೆಕೆಂಡ್‌ಗಳ ರನ್ನಿಂಗ್ ಟೈಮ್ ಹೊಂದಿರುವ ಚಿತ್ರಕ್ಕೆ ʻಯು ಎʼ ಪ್ರಮಾಣ ಪತ್ರ ನೀಡಲಾಗಿದೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ (Jailer Censor) ಕೂಡ ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಸಿಗರೇಟು ಸೇದುವ ದೃಶ್ಯವಿದೆ ಎಂದು ಹೇಳಲಾಗಿದೆ. ಈ ದೃಶ್ಯದ ಕುರಿತು ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಲೋಸ್‌ಅಪ್‌ನಲ್ಲಿ ದೃಶ್ಯ ತೋರಿಸಬಾರದೆಂದು ಸೂಚಿಸಿದೆ ಎನ್ನಲಾಗಿದೆ. ಸೆನ್ಸಾರ್ ಮಂಡಳಿಯು ಸುಮಾರು 11 ಸೀನ್‌ಗಳನ್ನು ಬದಲಾಯಿಸಲು ಸೂಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Jailer Movie : ಆ. 10ರಂದು ಬಿಡುಗಡೆಯಾಗುವುದು ಒಂದು ಜೈಲರ್ ಅಲ್ಲ, ಎರಡೆರೆಡು ಜೈಲರ್ ಸಿನಿಮಾಗಳು!
ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗಳಲ್ಲಿ ಬರುವ ನಿರೀಕ್ಷೆಯಿದೆ.
ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ. ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ತಮನ್ನಾ ಭಾಟಿಯಾ, ಮೋಹನ್‌ಲಾಲ್, ಜಾಕಿ ಶಾರ್ಫ್ ಕೂಡ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ