ಹೈದರಾಬಾದ್: ಟಾಲಿವುಡ್‌ನ ಖ್ಯಾತ ನಟ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ (Rana Daggubati) ಹಾಗೂ ಅವರ ತಂದೆ ಸುರೇಶ್ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನ ಫಿಲಂ ನಗರದಲ್ಲಿರುವ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರಮೋದ್ ಕುಮಾರ್ ಎಂಬುವರು ಇಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಫಿಲಂ ನಗರ ಕೋಆಪರೇಟಿವ್ ಸೊಸೈಟಿಯಲ್ಲಿರುವ ಜಾಗ ಬಿಟ್ಟುಹೋಗಬೇಕು ಎಂಬುದಾಗಿ ರಾಣಾ ದಗ್ಗುಬಾಟಿ, ಅವರ ತಂದೆ ಸುರೇಶ್ ಬಾಬು ಸೇರಿ ಹಲವು ರೌಡಿಗಳು ಬೆದರಿಕೆ ಹಾಕಿದ್ದಾರೆ ಎಂದು ಪ್ರಮೋದ್ ಕುಮಾರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೇಲ್ ಅಗ್ರಿಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ 2018ರಲ್ಲಿಯೂ ರಾಣಾ ದಗ್ಗುಬಾಟಿ ಹಾಗೂ ಅವರ ತಂದೆ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
Kantara Movie | ಕಾಂತಾರ ʻಮೈಂಡ್ ಬ್ಲೋಯಿಂಗ್ʼಎಂದ ನಟ ಧನುಷ್: ರಿಷಬ್ ಸ್ಫೂರ್ತಿ ಅಂದ್ರು ರಾಣಾ!
ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಇದಕ್ಕೂ ಮೊದಲು ದೂರು ಪ್ರಮೋದ್ ಕುಮಾರ್ ಅವರು ರಾಣಾ ದಗ್ಗುಬಾಟಿ ಹಾಗೂ ಅವರ ತಂದೆ ಸುರೇಶ್ ಬಾಬು ವಿರುದ್ಧ ದೂರು ದಾಖಲಿಸಲು ಹೋಗಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳದ ಕಾರಣ ಉದ್ಯಮಿಯು ನಾಂಪಳ್ಳಿ ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ರಾಣಾ ಹಾಗೂ ಸುರೇಶ್ ಬಾಬು ಅವರು ಮೇ 1ರಂದು ಕೋರ್ಟ್‌ಗೆ ಹಾಜರಿರಬೇಕು ಎಂದು ಸೂಚಿಸಿದೆ.