Site icon Vistara News

Ramana Avatara: ʻರಾಮ ಈಸ್ ಜೆಂಟಲ್ ಮ್ಯಾನ್ʼ ಮೊದಲ ಹಾಡು ರಿಲೀಸ್; ರಾಮನ ಅವತರಾದಲ್ಲಿ ರಿಷಿ!

Actor Rishi Ramana Avatara First song Out

ಬೆಂಗಳೂರು: ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ (Ramana Avatara) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ರಾಮ ಈಸ್ ಜೆಂಟಲ್ ಮ್ಯಾನ್ ಎಂಬ ಹಾಡಿಗೆ ಅಭಿನಂದನ್ ಮಹಿಶಾಲೆ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಟೈಟಲ್ ಕಂ ರೊಮ್ಯಾಂಟಿಕ್ ಹಾಡಾಗಿರುವ ರಾಮ ಈಸ್ ಜೆಂಟಲ್ ಮ್ಯಾನ್‌ ಸಿನಿಮಾದಲ್ಲಿ ರಿಷಿ ತನ್ನ ಪ್ರೀತಿಯನ್ನು ನಾಯಕಿ ಶುಭ್ರಗೆ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ.

ಈ ಹಾಡಿನ ಚಿತ್ರೀಕರಣ ಸಾವನದುರ್ಗ ಮತ್ತು ಶಿವಗಂಗೆ ಸ್ಥಳಗಳಲ್ಲಿ ಮಾಡಿದ್ದ, ವೆಸ್ಟೆರ್ನ್ ಶೈಲಿಯ ಸಂಗೀತಕ್ಕೆ ಪಕ್ಕಾ ದೇಸಿ ಟಚ್ ಕೊಟ್ಟಂತಿದೆ. ಸಾಹಿತ್ಯ ಕೇಳಲು ಇಂಪಾಗಿರುವದರ ಜತೆಗೆ ಪ್ರೇಕ್ಷಕರ ಮುಖದಲ್ಲಿ ನಗುವನ್ನು ತರಿಸುವುದರಲ್ಲಿ ಯಶಸ್ವಿಯಾಗಿದೆ. ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವ ರಿಷಿ ರಾಮ ಐಸ್ ಆ ಜೆಂಟಲ್ ಮ್ಯಾನ್ ಹಾಡಿನಲ್ಲಿ ಕುಣಿದು ಜನರನ್ನು ಮನೋರಂಜಿಸಿದ್ದಾರೆ. ಈ ಹಾಡಿನ ಮುಖಾಂತರ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿರುವ ಚಿತ್ರತಂಡ ಚಿತ್ರದ ಉಳಿದ ಹಾಡುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ.

ಟೀಸರ್ ಮೂಲಕ ಭರಪೂರ ಕಾಮಿಡಿ ಉಣಬಡಿಸಿದ್ದ ರಾಮನ ಅವಾತರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Adipurush Trailer: ಆದಿಪುರುಷ್‌ ಟ್ರೈಲರ್‌ ಔಟ್‌; ಪ್ರಭಾಸ್‌ ರಾಮನ ಅವತಾರಕ್ಕೆ ಫ್ಯಾನ್ಸ್‌ ಫುಲ್‌ ಖುಷ್‌

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ರಾಮನ ಅವತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

Exit mobile version