South Cinema
Adipurush Trailer: ಆದಿಪುರುಷ್ ಟ್ರೈಲರ್ ಔಟ್; ಪ್ರಭಾಸ್ ರಾಮನ ಅವತಾರಕ್ಕೆ ಫ್ಯಾನ್ಸ್ ಫುಲ್ ಖುಷ್
ಜೂನ್ 16ರಂದು ಸಿನಿಮಾ ತೆರೆ ಕಾಣುತ್ತಿದು, ದೊಡ್ಡ ಪರದೆಯಲ್ಲಿ ‘ಆದಿಪುರುಷ್’ (Adipurush) ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ.
ಬೆಂಗಳೂರು: ಪ್ರಭಾಸ್ ಅಭಿನಯದ ʻಆದಿಪುರುಷʼ ಚಿತ್ರದ ಟ್ರೈಲರ್ (Adipurush Trailer) ಬಿಡುಗಡೆಗೊಂಡಿದೆ. ಪ್ರಭಾಸ್ ರಾಮನಾಗಿ ನಟಿಸಿದ್ದಾರೆ, ಕೃತಿ ಸನೂನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿಭಾಯಿಸಿದ್ದಾರೆ. ಆದಿಪುರುಷದ ಟೀಸರ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಆದರೆ ವಿಎಫ್‌ಎಕ್ಸ್ ಕುರಿತಾಗಿ ನೆಗೆಟಿವ್ ಪ್ರತಿಕ್ರಿಯೆಯನ್ನು ಪಡೆಯಿತು. ಜೂನ್ 16ರಂದು ಸಿನಿಮಾ ತೆರೆ ಕಾಣುತ್ತಿದು, ದೊಡ್ಡ ಪರದೆಯಲ್ಲಿ ‘ಆದಿಪುರುಷ್’ (Adipurush) ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ. ಅದೆಷ್ಟೋ ನೆಟ್ಟಿಗರು ಟ್ರೈಲರ್‌ನಲ್ಲಿ ಸೈಫ್ ಅಲಿ ಖಾನ್‌ರನ್ನು ಕಡಿಮೆ ತೊರಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಸಿನಿಮಾದ ಟೀಸರ್ ಬಿಡುಗಡೆಯಾದ ಕೂಡಲೇ ಹಲವು ಚರ್ಚೆಗಳು ಆದವು. ಅಷ್ಟೇ ಅಲ್ಲದೇ ಕಳಪೆ ಗುಣಮಟ್ಟದ ವಿಎಫ್‌ಎಕ್ಸ್‌ಗಾಗಿ ವಿರೋಧವು ವ್ಯಕ್ತವಾಗಿತ್ತು. ಬಳಿಕ ಚಿತ್ರತಂಡ ಸಮಯ ತೆಗೆದುಕೊಂಡು ಒಳ್ಳೆಯ ಗುಣಮಟ್ಟದ ದೃಶ್ಯಗಳನ್ನು ನೀಡುವುದಾಗಿ ಭರವಸೆ ನೀಡಿ ಬಿಡುಗಡೆಯ ದಿನಾಂಕವನ್ನು ಮುಂದೂಡಿತ್ತು. ಇದೀಗ ಟ್ರೈಲರ್ ಬಿಡುಗಡೆಗೊಂಡಿದೆ. ಪ್ರೇಕ್ಷಕರು ಟ್ರೈಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲಿಯೂ ಪ್ರಭಾಸ್ ಅವರ ರಾವಣನ ಅವತಾರಕ್ಕೆ ಹಾಡಿ ಹೊಗಳಿದ್ದಾರೆ ನಟನ ಫ್ಯಾನ್ಸ್.
ಟ್ರೈಲರ್ ಹೇಗಿದೆ?
ಟ್ರೈಲರ್‌ನಲ್ಲಿ ಹನುಮಾನ್ ಪಾತ್ರದಿಂದ ನಿರೂಪಣೆ ಶುರುವಾಗಿ, ರಾಘವನ ವನವಾಸ, ಸೀತೆಯ ಅಪಹರಣ ಮತ್ತು ಲಂಕೆಗೆ ಸೇತುವೆಯ ನಿರ್ಮಾಣ ಹಲವು ವಿಚಾರಗಳನ್ನು ತೋರಿಸಿದ್ದಾರೆ. ಮೇ 8ರಂದು ಹೈದರಾಬಾದ್‌ನಲ್ಲಿ ಟ್ರೈಲರ್ ಅನಾವರಣಗೊಳಿಸಿದೆ ಚಿತ್ರತಂಡ. ಪ್ರಭಾಸ್, ಕೃತಿ ಸನೋನ್ ಮತ್ತು ನಿರ್ದೇಶಕ ಓಂ ರಾವುತ್ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ‘ಜೈ ಶ್ರೀ ರಾಮ್’ ಘೋಷಣೆಗಳ ನಡುವೆ ಅಭಿಮಾನಿಗಳು ಸ್ಕ್ರೀನಿಂಗ್‌ಗೆ ಹಾಜರಾಗಿದ್ದರು.
ಪ್ರಭಾಸ್ ಅಭಿಮಾನಿಗಳನ್ನು ಉದ್ದೇಶಿಸಿ, “ಜೈ ಶ್ರೀ ರಾಮ್! ಟ್ರೈಲರ್ ಹೇಗಿದೆ? ಸಿಜಿ ಹೇಗಿದೆ? ಎಂದು ಮಾತು ಶುರು ಮಾಡಿದರು. ʻʻಇಡೀ ತಂಡ, ಕೃತಿ ಸನೂನ್, ಭೂಷಣ್ ಕುಮಾರ್ ಮೊದಲು ಹೈದರಾಬಾದ್‌ನಲ್ಲಿ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಆದಿಪುರುಷನಿಗೆ ಇಲ್ಲಿಂದ ಬಂದ ಪ್ರತಿಕ್ರಿಯೆ ಯಾವಾಗಲೂ ಅಸಾಧಾರಣವಾಗಿದೆ. ನಿಮ್ಮ ಪ್ರತಿಕ್ರಿಯೆಯನ್ನು ನೋಡಲು ನಾವೆಲ್ರೂ ಇಲ್ಲಿಗೆ ಬಂದಿದ್ದೇವೆ. ಏಕೆಂದರೆ ನಿಮಗೆ ಇಷ್ಟವಾದರೆ ಎಲ್ಲರಿಗೂ ಇಷ್ಟವಾಗುತ್ತದೆ. ಜೈ ಶ್ರೀ ರಾಮ್. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆʼʼಎಂದು ಹೇಳಿದರು.
ಇದನ್ನೂ ಓದಿ: Adipurush Movie: ʻಆದಿಪುರುಷ್ʼ ಸಿನಿಮಾದಿಂದಾಗಿ ʻಜವಾನ್ʼ ರಿಲೀಸ್ ಆಗ್ತಾ ಇಲ್ವಾ? ಪ್ರಭಾಸ್ ಫಿಲ್ಮ್ ರಿಲೀಸ್ ಯಾವಾಗ?
ಜೂನ್ 16ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ
ಜೂನ್ 16ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ವಿದೇಶದ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ನ್ಯೂಯಾರ್ಕ್ನಲ್ಲಿ ಜೂನ್ 7ರಿಂದ ಜೂನ್ 18ರವರೆಗೆ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್’ (Tribeca Film Festival ) ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್’ ಸಿನಿಮಾ ಆಯ್ಕೆ ಆಗಿದೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ.ಇದು ಹಿಂದು ಮಹಾಕಾವ್ಯ ರಾಮಾಯಣ ರೂಪಾಂತರವಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.
South Cinema
V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್
V manohar: ಜೂನ್ 9ರಂದು ಚಿತ್ರಮಂದಿರಗಳಲ್ಲಿ ದರ್ಬಾರ್ ಸಿನಿಮಾ ಬಿಡುಗಡೆಯಾಗಲಿದೆ. 80 ರಿಂದ 100 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.
ಬೆಂಗಳೂರು: 23 ವರ್ಷಗಳ ನಂತರ ವಿ.ಮನೋಹರ್ (V Manohar) ನಿರ್ದೇಶನಕ್ಕೆ ಇಳಿದಿದ್ದಾರೆ. ಜೂನ್ 9ರಂದು ಚಿತ್ರಮಂದಿರಗಳಲ್ಲಿ `ದರ್ಬಾರ್’ ಸಿನಿಮಾ ಬಿಡುಗಡೆಯಾಗಲಿದೆ. 80 ರಿಂದ 100 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.
ಈ ಕುರಿತಂತೆ ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, “ಸುಮಾರು 23 ವರ್ಷಗಳ ನಂತರ ನಾನು ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಕಾರಣ ಈ ಸಿನಿಮಾದ ನಟ ಸತೀಶ್. ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ರಾಜಕೀಯ ವಿಡಂಬನೆಯ ಕಥೆಯನ್ನು “ದರ್ಬಾರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆʼʼ ಎಂದರು.
ʻʻದರ್ಬಾರ್’ ಸಿನಿಮಾ ಶುರುವಾದ ನಂತರ ಕೋವಿಡ್ ಹಚ್ಚಾಯಿತು, ಆ ಭಯದಲ್ಲಿಯೇ ಸಿನಿಮಾದ ಶೂಟಿಂಗ್ ಮುಗಿಸಿದ್ದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಹಲವಾರು ಕಲಾ ಬಳಗ ಹಾಗೂ ರಂಗ ಕಲಾವಿದರ ತಂಡ ಇದೆʼʼಎಂದು ನಿರ್ಮಾಪಕ ಸತೀಶ್ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: Manoj Bajpayee: ಹೊಸ ದಾಖಲೆ ಬರೆದ ಮನೋಜ್ ಬಾಜಪೇಯಿ ಸಿನಿಮಾ!
3.5 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮದ್ದೂರು ತಾಲೂಕಿನ ಮಾರದೇವನಹಳ್ಳಿ, ಚನ್ನಸಂದ್ರ, ಆತಗೂರು ತೈಲೂರು, ನಿಡಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆದಿದೆ.
South Cinema
Keerthy Suresh: ಹೊಂಬಾಳೆ ಫಿಲ್ಮ್ಸ್ ಮೊದಲ ತಮಿಳು ಚಿತ್ರದ ಶೂಟಿಂಗ್ ಮುಕ್ತಾಯ!
Keerthy Suresh: ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಮೊದಲ ತಮಿಳು ಚಿತ್ರ ‘ರಘುತಾತʼ ಚಿತ್ರೀಕರಣ ಪೂರ್ಣಗೊಂಡಿದೆ. ಕೀರ್ತಿ ಸುರೇಶ್ (Keerthy Suresh) ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆಯ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಶ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಈ ಸಿನಿಮಾಗಿದೆ. ‘ರಘುತಾತʼ’ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಹೇಳಿಕೊಂಡಿದೆ.
ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದನ್ನೂ ಓದಿ: Keerthy Suresh: ಮಲ್ಟಿ ಕಲರ್ ಉಡುಗೆಯಲ್ಲಿ ಕೀರ್ತಿ ಸುರೇಶ್ ಹೊಸ ಫೋಟೊಶೂಟ್!
ಹೊಂಬಾಳೆ ಫಿಲ್ಮ್ಸ್ ಟ್ವೀಟ್
🎬 That’s a wrap, folks! 🎉🎥 Raghuthatha, where the revolution finds its home, has completed its fiery shoot! Stay tuned for a revolution that’ll make your heart race! #Raghuthatha@KeerthyOfficial @hombalefilms #VijayKiragandur @sumank #MSBhaskar @yaminiyag @RSeanRoldan… pic.twitter.com/rk4oSw7FyO
— Hombale Films (@hombalefilms) May 26, 2023
ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದೆ ಹೊಂಬಾಳೆ
ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಇದೀಗ ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ತೆಲುಗಿನಲ್ಲಿ ‘ಸಲಾರ್’, ಮಲಯಾಳಂನಲ್ಲಿ ‘ಟೈಸನ್’ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಕೈಗೆತ್ತಿಕೊಂಡಿದೆ. ಕನ್ನಡದಲ್ಲಿ ‘ಕಾಂತಾರ’- 2, ‘ರಿಚರ್ಡ್ ಆಂಟನಿ’, ‘ಯುವ’, ‘ಧೂಮಂ’, ‘ಬಘೀರ’ ಸಿನಿಮಾಗಳು ಶುರುವಾಗಿದ್ದರೆ ಮತ್ತೊಂದಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಮುಂದೆ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲೂ ಸಿನಿಮಾಗಳು ಮೂಡಿ ಬರಲಿವೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ‘ಧೂಮಂ’ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ‘ಸಲಾರ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ.
South Cinema
Ram Charan: ರಾಮ್ ಚರಣ್ ಜತೆ ಕೈ ಜೋಡಿಸಿದ ʻದಿ ಕಾಶ್ಮೀರ್ ಫೈಲ್ಸ್ʼ ನಿರ್ಮಾಪಕ
Ram Charan: ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ.
ಬೆಂಗಳೂರು: ಟಾಲಿವುಡ್ ನಟ ರಾಮ್‌ಚರಣ್ (Ram Charan) ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ ಮೆಗಾ ಪಿಕ್ಚರ್ಸ್’ (V Mega Pictures) ನಿರ್ಮಾಣ ಸಂಸ್ಥೆಯ ಜತೆ ಕೈ ಜೋಡಿಸಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿದ್ದಾರೆ.
ಈ ಎರಡು ಸಂಸ್ಥೆಗಳ ಮೂಲಕ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ತಯಾರಿ ನಡೆಯುತ್ತಿದೆ. ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾಗೆ ಯುವ ನಾಯಕ ಹಾಗೂ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶೀಘ್ರದಲ್ಲಿ ಈ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ. ವಿಭಿನ್ನ ಕಂಟೆಂಟ್ ಪ್ರೇಕ್ಷಕರಿಗೆ ಅರ್ಪಿಸಲು ಈ ಎರಡು ಸಂಸ್ಥೆಗಳು ಕೈ ಜೋಡಿಸಿವೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡವುದರಿಂದ ರಾಮ್ ಚರಣ್ ಅವರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾದ ರಾಮ್‌ಚರಣ್
ರಾಮ್‌ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Ram Charan : ಹಾಲಿವುಡ್ ಎಂಟ್ರಿ ಬಗ್ಗೆ ನಟ ರಾಮ್ ಚರಣ್ ಹೇಳಿದ್ದೇನು? ವಿಡಿಯೊ ವೈರಲ್
ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
South Cinema
Ashish Vidyarthi: ಯಾವುದೇ ವಯಸ್ಸಲ್ಲಾದರೂ ಸಂತೋಷವಾಗಿರಬಹುದು; ಮದುವೆ ಬಗ್ಗೆ ಆಶಿಶ್ ವಿದ್ಯಾರ್ಥಿ ಹೇಳಿದ್ದೇನು?
Ashish Vidyarthi: ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನದ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದರು.
ಮುಂಬೈ: ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂನ ರೂಪಾಲಿ ಬರುವಾ (Rupali Barua) ಅವರನ್ನು ಮೇ 25ರಂದು ವಿವಾಹವಾದರು. ಇದೀಗ ತಮ್ಮ ಮದುವೆಯ ಬಗ್ಗೆ ನಟ ವಿಡಿಯೊ ಮೂಲಕ ಮನಬಿಚ್ಚಿ ಮಾತನಾಡಿದ್ದಾರೆ. ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದರು.
“ನಮ್ಮ ಪ್ರತಿಯೊಬ್ಬರ ಜೀವನವು ವಿಭಿನ್ನವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳು, ಹಿನ್ನೆಲೆಗಳು, ಶಿಕ್ಷಣ ಮತ್ತು ನಾವು ಯೋಚಿಸುವ ರೀತಿ ಇದೆ. ನಮ್ಮಲ್ಲಿ ಎಲ್ಲರಿಗೂ ಅವರದ್ದೇ ಆದ ವೃತ್ತಿಗಳಿವೆ. ನಾವೆಲ್ಲರೂ ವಿವಿಧ ದೇಶಗಳು, ಧರ್ಮಗಳು ಮತ್ತು ನಂಬಿಕೆಗಳಿಂದ ಬಂದವರು, ಆದರೆ ಒಂದು ಸಾಮಾನ್ಯ ವಿಷಯವೆಂದರೆ ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆʼʼಎಂದರು.
22 ವರ್ಷಗಳ ತಮ್ಮ ಹಾಗೂ ಮೊದಲ ಪತ್ನಿಯ (ರಾಜೋಶಿ ಬರುವಾ ) ದಾಂಪತ್ಯ ಜೀವನ ಕಳೆದ ಎರಡು ವರ್ಷಗಳಿಂದ ಸರಿ ಇರಲಿಲ್ಲ ಎಂದು ಹೇಳಿಕೊಂಡರು. “22 ವರ್ಷಗಳ ಹಿಂದೆ ಪಿಲೂ (ರಾಜೋಶಿ ಬರುವಾ) ಮತ್ತು ನಾನು ಭೇಟಿಯಾದೆವು. ಬಳಿಕ ಮದುವೆಯಾದೆವು. ಅಲ್ಲದೆ, ಜೀವನ ಚೆನ್ನಾಗಿಯೇ ಇತ್ತು. ಎರಡು ವರ್ಷಗಳಿಂದ ಸರಿ ಇರಲಿಲ್ಲʼʼಎಂದರು.
ʻʻಪಿಲೂ ಮತ್ತು ನಾನು ಸೌಹಾರ್ದಯುತವಾಗಿ ಒಟ್ಟಿಗೆ ನಡೆಯಲು ಸಾಧ್ಯವಾಗದಿದ್ದರೆ, ಪ್ರತ್ಯೇಕವಾಗಿ ನಡೆಯೋಣ ಎಂದು ನಿರ್ಧರಿಸಿದೆವುʼʼ ಎಂದು ಆಶಿಶ್ ಹೇಳಿದರು. “ನಾನು ಯಾರೊಂದಿಗಾದರೂ ಇರಲು ಬಯಸುತ್ತೇನೆಯೋ ಅವರೊಂದಿಗೆ ಮದುವೆಯಾಗಲು ಬಯಸುತ್ತೇನೆ ಎಂದು ನನಗೆ ದೃಢವಾದ ನಂಬಿಕೆ ಇತ್ತು. ನಾನು ರೂಪಾಲಿ ಬರುವಾ ಅವರನ್ನು ಭೇಟಿಯಾದೆ. ನಾವು ಒಂದು ವರ್ಷದ ಹಿಂದೆ ಭೇಟಿಯಾದೆವು. ಪರಸ್ಪರ ಮಾತನಾಡಿದೆವು. ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಬದುಕಬೇಕೆಂದು ನಿರ್ಧರಿಸಿ ರೂಪಾಲಿ ಮತ್ತು ನಾನು ಮದುವೆಯಾದೆವು. ಅವಳ ವಯಸ್ಸು 50 ಮತ್ತು ನನಗೆ 57 ವರ್ಷ, 60 ಅಲ್ಲ, ಆದರೆ ವಯಸ್ಸು ಮುಖ್ಯವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು ”ಎಂದು ನಟ ಹೇಳಿಕೊಂಡರು. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕು ಎಂದು ಹೇಳುವ ಮೂಲಕ ಆಶಿಶ್ ವಿದ್ಯಾರ್ಥಿ ಮಾತಿಗೆ ಪೂರ್ಣ ವಿರಾಮ ಇಟ್ಟರು.
ಇದನ್ನೂ ಓದಿ: Ashish Vidyarthi Marriage: ಆಶಿಶ್ ವಿದ್ಯಾರ್ಥಿ ಮರು ಮದುವೆ ಬಳಿಕ ಮೊದಲ ಪತ್ನಿಯ ಪೋಸ್ಟ್ ವೈರಲ್!
ಆಶಿಶ್ ವಿದ್ಯಾರ್ಥಿ ಪೋಸ್ಟ್
ಆಶಿಶ್ ವಿದ್ಯಾರ್ಥಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಮದುವೆಯಲ್ಲಿ ಕೇರಳ ಮತ್ತು ಅಸ್ಸಾಂ ಸಂಪ್ರದಾಯಗಳನ್ನು ಅನುಸರಿಸಿದ್ದಾರೆ. ʻ ರಾಜೋಶಿ ಬರುವಾ ವೃತ್ತಿಯಲ್ಲಿ ನಟಿ. ಶಕುಂತಲಾ ಬರುವಾ ಅವರ ಮಗಳು. ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು.
ಆಶಿಶ್ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಭಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.
-
ಕರ್ನಾಟಕ16 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ18 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ16 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ14 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ10 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ17 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್19 hours ago
IPL 2023: ಶತಕ ಬಾರಿಸಿ ಸೆಹವಾಗ್ ದಾಖಲೆ ಮುರಿದ ಶುಭಮನ್ ಗಿಲ್
-
ಕರ್ನಾಟಕ14 hours ago
Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ