Site icon Vistara News

Actor Siddharth | ʻಹೃದಯದ ರಾಜಕುಮಾರಿʼ ಅದಿತಿ ಎಂದು ವಿಶ್‌ ಮಾಡಿದ ನಟ ಸಿದ್ಧಾರ್ಥ್‌: ವೈರಲ್‌ ಆಯ್ತು ಪೋಸ್ಟ್‌!

Actor Siddharth

ಬೆಂಗಳೂರು: ಅದಿತಿ ರಾವ್ ಹೈದರಿ ಅವರಿಗೆ ಅಕ್ಟೋಬರ್‌ 29ರಂದು ಹುಟ್ಟು ಹಬ್ಬದ ಸಂಭ್ರಮ. ಅದಿತಿ (Actor Siddharth) ಹುಟ್ಟು ಹಬ್ಬಕ್ಕೆ ಕಾಲಿವುಡ್‌ ನಟ ಸಿದ್ಧಾರ್ಥ್‌ ವಿಶೇಷವಾಗಿ ವಿಶ್‌ ಮಾಡಿದ್ದಾರೆ. ಸಿದ್ಧಾರ್ಥ್‌ ಪೊಸ್ಟ್‌ ಮೂಲಕ ʻʻನನ್ನ ಹೃದಯದ ರಾಣಿʼʼಎಂದು ಬರೆದುಕೊಂಡಿದ್ದಾರೆ. ಇದೀಗ ಕಾಲಿವುಡ್‌ ಅಂಗಳದಲ್ಲಿ ಗಾಸಿಪ್‌ ಮಾತುಗಳು ಕೇಳಿ ಬರುತ್ತಿವೆ.

ತಮಿಳು ನಟ ಸಿದ್ಧಾರ್ಥ್‌ ಹಾಗೂ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಈ ಮೊದಲಿನಿಂದಲೂ ಸುದ್ದಿ ಹರಿದಾಡುತ್ತಿತ್ತು. ಅದಿತಿ ಜನುಮದಿನಕ್ಕೆ ಸಿದ್ದಾರ್ಥ್ ಅವರು ಬರ್ತ್​ಡೇ ವಿಶ್ ಮಾಡಿದ್ದಾರೆ. ‘ಹೃದಯದ ರಾಜಕುಮಾರಿ ಜನ್ಮದಿನದ ಶುಭಾಶಯಗಳು’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಈ ಪೋಸ್ಟ್‌ ಸಾಕಷ್ಟು ಕುತೂಹಲಕ್ಕೆ ಎಡ ಮಾಡಿಕೊಟ್ಟಿದೆ. ʻಮಹಾ ಸಮುದ್ರಮ್‌ʼ ಚಿತ್ರದಲ್ಲಿ ಸಿದ್ಧಾರ್ಥ್‌ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು.

ಇದನ್ನೂ ಓದಿ | Karthikeya 2 | ನಿಖಿಲ್ ಸಿದ್ಧಾರ್ಥ್ ನಟನೆಯ ಕಾರ್ತಿಕೇಯ-2 ಸಿನಿಮಾದ ಟೀಸರ್ ರಿಲೀಸ್

ಈ ಹಿಂದೆ ರಾಜಕುಮಾರ್‌ ರಾವ್‌ ಅವರ ಮದುವೆಯಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್‌ ಹುಟ್ಟುಹಬ್ಬಕ್ಕೆ ಅತ್ಯಂತ ಪ್ರೀತಿಯಿಂದ ಹಾರೈಸಿದರು ಅದಿತಿ. ನಟಿ ಅದಿತಿ ರಾವ್ ಹೈದರಿ ಅವರು ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಬೈನ ಬಾಂದ್ರಾ ಅವರ ತವರು ಮನೆ. ಆಗಾಗ ಅದಿತಿ ಮನೆಗೆ ಸಿದ್ಧಾರ್ಥ್‌ ತೆರಳುತ್ತಿರುತ್ತಾರೆ ಎಂಬುದು ಸುದ್ದಿ ಹರಿದಾಡುತ್ತಿದೆ. ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ | ಸಿದ್ದಾರ್ಥ್​-ಕಿಯಾರಾ ಜೊತೆ ಜೊತೆಯಲಿ

Exit mobile version