Site icon Vistara News

Actor Suriya: ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ ನಟ ಸೂರ್ಯ!

Actor Suriya

ಬೆಂಗಳೂರು: ಕಾಲಿವುಡ್‌ ಸೂಪರ್‌ಸ್ಟಾರ್‌ ಸೂರ್ಯ (Actor Suriya) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅಷ್ಟೇ ಅಲ್ಲದೇ ಫ್ಯಾನ್ಸ್‌ ಜತೆ ನಟ ಆಗಾಗ ಕಾಲ ಕಳೆಯುತ್ತಿರುತ್ತಾರೆ. ಇತ್ತೀಚೆಗಷ್ಟೇ ಸೂರ್ಯ ಅವರ ಕಟ್ಟಾ ಅಭಿಮಾನಿ ಅರವಿಂದ್ ಎಂಬಾತ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಸುದ್ದಿ ತಿಳಿದ ನಂತರ ಸೂರ್ಯ ಅವರು ಚೆನ್ನೈ ಸಮೀಪದ ಎನ್ನೂರಿನ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸೂರ್ಯ ಅವರು ತಮ್ಮ ಅಭಿಮಾನಿ ಅರವಿಂದ್‌ ಪೋಷಕರು ಮತ್ತು ಸ್ನೇಹಿತರ ಜತೆ ಮಾತನಾಡಿ ( Ennore near Chennai) ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು. ಸೂರ್ಯ ಅವರ ಈ ನಡೆಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಅಂತಿಮ ನಮನ ಸಲ್ಲಿಸಲು ಅಭಿಮಾನಿಯ ಮನೆಗೆ ಭೇಟಿ ಕೊಟ್ಟ ಸೂರ್ಯ

ಇತ್ತೀಚೆಗೆ ಸೂರ್ಯ ಅವರ ಅಭಿಮಾನಿ ಅರವಿಂದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅರವಿಂದ್ ಅವರು ಸೂರ್ಯ ಅವರ ಕಟ್ಟಾ ಅಭಿಮಾನಿ. ಅಷ್ಟೇ ಅಲ್ಲದೇ ಸೂರ್ಯ ಅವರ ಅಭಿಮಾನಿ ಸಂಘದ ಸದಸ್ಯರೂ ಆಗಿದ್ದಾರೆ. ಅರವಿಂದ್‌ ಅವರ ಸುದ್ದಿ ತಿಳಿದ ನಂತರ ಸೂರ್ಯ ಅವರು ಚೆನ್ನೈ ಸಮೀಪದ ಎನ್ನೂರಿನ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸೂರ್ಯ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳನ್ನು ಹೆಚ್ಚು ಗೌರವಿಸುವಂತಹ ನಟರಲ್ಲಿ ಅವರು ಕೂಡ ಒಬ್ಬರು. ಸೂರ್ಯ ಅವರು ಭೇಟಿ ಕೊಟ್ಟದ್ದು ಇದೇನು ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಅಭಿಮಾನಿಗಳಿಗೆ ನೆರವಾಗಿದ್ದಾರೆ. ಅಭಿಮಾನಿಗಳ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುತ್ತಾರೆ. ಅಷ್ಟೇ ಅಲ್ಲದೇ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಿರುವ ಎಷ್ಟೋ ಉದಾಹರಣೆಗಳೂ ಇವೆ.

ಇದನ್ನೂ ಓದಿ; Actor Suriya: ನಟ ಸೂರ್ಯ ಜತೆ ನಜ್ರಿಯಾ ನಾಜಿಮ್ ಫಹಾದ್ ರೊಮ್ಯಾನ್ಸ್‌!

ʻಕಂಗುವʼ ಸಿನಿಮಾ ಮೂಲಕ ಹೊಸ ಅವತಾರದಲ್ಲಿ ಸೂರ್ಯ

ಸೂರ್ಯ ಕೊನೆಯದಾಗಿ ಕಮಲ್ ಹಾಸನ್ ಅವರ ‘ವಿಕ್ರಮ್’ ಮತ್ತು ಮಾಧವನ್ ಅವರ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2023ರ ಅತಿದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾದ ‘ಸೂರ್ಯ 42’ ಸಿನಿಮಾ ಚಿತ್ರತಂಡ ಅಂತಿಮವಾಗಿ ಶೀರ್ಷಿಕೆಯನ್ನು ಟೀಸರ್‌ನೊಂದಿಗೆ ಬಿಡುಗಡೆಗೊಳಿಸಿತ್ತು. ಚಿತ್ರಕ್ಕೆ ʻಕಂಗುವʼ ಎಂದು ಹೆಸರಿಡಲಾಗಿದೆ. ಕೆ ಜ್ಞಾನವೇಲ್ ರಾಜಾ ನಿರ್ಮಿಸಿರುವ ಕಂಗುವ ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸೂರ್ಯ ಸೂರರೈ ಪೊಟ್ರು (Actor Suriya) ಸಿನಿಮಾದ ಭಾರೀ ಯಶಸ್ಸಿನ ನಂತರ ಖ್ಯಾತ ಚಲನಚಿತ್ರ ನಿರ್ಮಾಪಕಿ ಸುಧಾ ಕೊಂಗರ (Sudha Kongara) ಅವರೊಂದಿಗೆ ಮತ್ತೊಮ್ಮೆ ಕೈ ಜೋಡಿಸಲು ಮುಂದಾಗಿದ್ದಾರೆ. ಹೆಸರಿಡದ ʻಸೂರ್ಯ 43ʼ ಸಿನಿಮಾಗೆ (Suriya 43) ಮಲಯಾಳಂನ ನಟಿ ನಜ್ರಿಯಾ ನಜೀಮ್ ಫಹಾದ್ ನಾಯಕಿಯಾಗಿ (Nazriya Nazim Fahadh) ಸೂರ್ಯ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ಇತ್ತೀಚಿನ ವರದಿಗಳ ಪ್ರಕಾರ, ಸುಧಾ ಕೊಂಗರ ಅವರ ಮುಂಬರುವ ನಿರ್ದೇಶನದ ಸೂರ್ಯ 43 ಸಿನಿಮಾಗೆ ಸೂರ್ಯ ಎದುರು ನಾಯಕಿಯಾಗಿ ನಜ್ರಿಯಾ ನಾಜಿಮ್ ಫಹಾದ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

Exit mobile version