ಬೆಂಗಳೂರು : ಸ್ಯಾಂಡಲ್ವುಡ್ ಬ್ಲಾಕ್ಬಸ್ಟರ್ ಕಾಂತಾರದ ಸಿನಿಮಾದ ಯಶಸ್ಸಿನಲ್ಲಿರುವ ಹೊಂಬಾಳೆ ಫಿಲ್ಸ್ಮ್ ಸಾಲು ಸಾಲು ಚಿತ್ರಗಳ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ಅಂತೆಯೇ ತಮಿಳಿನ ಪ್ರಖ್ಯಾತ ತಾರೆ, ‘ಜೈ ಭೀಮ್ ಸಿನಿಮಾದ ನಟ ಸೂರ್ಯ (Actor Suriya) ಅವರೊಂದಿಗೆ ಕಾಮಿಕ್ ಸಿನಿಮಾವೊಂದನ್ನು ತೆರೆಗೆ ಮುಂದಾಗಿದೆ. ಹಾಲಿವುಡ್ ಮಾದರಿಯಲ್ಲೇ ಅದ್ಧೂರಿಯಾಗಿ ಚಲನಚಿತ್ರವನ್ನು ತೆರೆಗೆ ತರುವುದು ಹೊಂಬಾಳೆ ಫೀಲ್ಸ್ಮ್ನ ಯೋಜನೆಯಾಗಿದೆ.
೧೯೬೨ರಲ್ಲಿ ‘ದಿ ಸ್ಟೀಲ್ ಕ್ಲಾವ್’ ಎಂಬ ಇಂಗ್ಲಿಷ್ ಸಾಹಮಯ ಕಾಮಿಕ್ಸ್ ಪುಸ್ತಕ ಪ್ರಕಟಗೊಂಡಿತ್ತು. ಅದು ತಮಿಳಿನಲ್ಲಿ ‘ಇರುಂಬುಕೈ ಮಾಯಾವಿ’ ಹಾಗೂ ತೆಲುಗಿನಲ್ಲಿ ‘ಉಕ್ಕು ಕೈ ಮಾಯಾವಿ’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿತ್ತು. ಅದನ್ನು ಬೆಳ್ಳಿ ತೆರೆಗೆ ತರಲು ಮುಂದಾಗಿದ್ದಾರೆ ಸೂರ್ಯ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಲಿದ್ದು, ಹೊಂಬಾಳೆ ನಿರ್ಮಾಣದ ಹೊಣೆ ಹೊತ್ತಿದೆ.
ಇದನ್ನೂ ಓದಿ | Prithviraj Sukumaran | ಪೃಥ್ವಿರಾಜ್ ಲುಕ್ ಹಂಚಿಕೊಂಡ ಹೊಂಬಾಳೆ: ಉಗ್ರಂ ಬಾಲ ಮತ್ತೆ ಬಂದ್ರು ಎಂದ ಫ್ಯಾನ್ಸ್!
ನಿರ್ದೇಶಕ ಲೋಕೇಶ್ ಕನಕರಾಜನ್ ಅವರು ತಮಿಳಿನಲ್ಲಿ ಹಿಟ್ ಸಿನಿಮಾ ನೀಡಿದ ನಿರ್ದೇಶಕ. ಅದೇ ರೀತಿ ಸೂರ್ಯ ಅವರು ವಿಕ್ರಮ್ ಸಿನಿಮಾ ಮುಂದಿನ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಿನಿಮಾ ಯಶಸ್ವಿ ಪ್ರದರ್ಶನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿತ್ತು. ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದ ʻಧೂಮಂʼ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿತ್ತು.
ಇದನ್ನೂ ಓದಿ | National Film Awards | ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸ್ವೀಕರಿಸಿದ ಸೂರ್ಯ, ಅಜಯ್ ದೇವಗನ್, ಅತ್ಯುತ್ತಮ ನಟಿ ಅಪರ್ಣಾ