ಬೆಂಗಳೂರು: ಕಾಲಿವುಡ್ ನಟ ಸೂರ್ಯ ನಿರ್ದೇಶಕ ಸಿರುತೈ ಶಿವ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದೀಗ ಸೂರ್ಯ (Actor Suriya) ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಚಿತ್ರವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಸೂರ್ಯ ಅವರು ಮುಂಬೈ ಪ್ರವಾಸದ ವೇಳೆ ಈ ಚಿತ್ರ ತೆಗೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸೂರ್ಯ ಅವರು ನಿರ್ದೇಶಕ-ನಟ ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಸಚಿನ್ ಅವರ ಜತೆ ಇರುವ ಫೋಟೊವನ್ನು ಹಂಚಿಕೊಂಡ ಸೂರ್ಯ, “ಗೌರವ ಮತ್ತು ಪ್ರೀತಿʼʼಎಂದು ಕ್ಯಾಪ್ಷನ್ ಜತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೂರ್ಯ ಅವರ ಅಭಿಮಾನಿಗಳು ಕಮೆಂಟ್ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಸೂರ್ಯ ಅವರು ನಿರ್ದೇಶಕ ಸಿರುತೈ ಶಿವನ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೆಸರಿಡದ ಚಿತ್ರಕ್ಕೆ ʻಸೂರ್ಯ42ʼ ಎಂದು ಕರೆಯಲಾಗುತ್ತಿದೆ. ಈ ಚಿತ್ರದಲ್ಲಿ ದಿಶಾ ಪಟಾನಿ ನಾಯಕಿಯಾಗಿ ನಟಿಸಲಿದ್ದಾರೆ. ನಿರ್ದೇಶಕ ವೆಟ್ರಿ ಮಾರನ್ ಅವರ ʻವಾಡಿ ವಾಸಲ್ʼ ಚಿತ್ರವನ್ನೂ ನಟ ಹೊಂದಿದ್ದಾರೆ.