ಬೆಂಗಳೂರು: ಈ ಬಾರಿ ಆಸ್ಕರ್ ಮಾರ್ಚ್ 12ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. SS ರಾಜಮೌಳಿ ಅವರ RRR ಹಾಡು ನಾಟು ನಾಟು ಈ ಬಾರಿ ಆಸ್ಕರ್‌ನಲ್ಲಿ ನಾಮನಿರ್ದೇನಗೊಂಡಿದೆ. ಸೌತ್ ಸೂಪರ್ ಸ್ಟಾರ್ ಸೂರ್ಯ (Actor Suriya) ಈಗ ಅಕಾಡೆಮಿ ಪ್ರಶಸ್ತಿಯಲ್ಲೂ ಮತವನ್ನು ಚಲಾಯಿಸಲಿದ್ದಾರೆ. ಆಸ್ಕರ್ ಪ್ರಶಸ್ತಿಯ ಕಮಿಟಿಯಲ್ಲಿ ಸದಸ್ಯತ್ವ ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಎಂಬ ಖ್ಯಾತಿಗೆ ಸೂರ್ಯ ಪಾತ್ರರಾಗಿದ್ದಾರೆ.
ಅಕಾಡೆಮಿ ಪ್ರಶಸ್ತಿಯಲ್ಲಿ ಮತ ಚಲಾಯಿಸಲಿರುವ ಸೂರ್ಯ
ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಚಿತ್ರದಲ್ಲಿ ಸೂರ್ಯ ಕೊನೆಯ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾವು ಆಸ್ಕರ್ ಸ್ಪರ್ಧೆಗೆ ವೋಟ್ ಮಾಡಿರುವ ವಿಷಯವನ್ನು ಟ್ವಿಟರ್ ಮೂಲಕ ಸೂರ್ಯ ಅವರು ಖಚಿತಪಡಿಸಿದ್ದಾರೆ. ಜಿಮ್ಮಿ ಕಿಮ್ಮೆಲ್ 2018ರ ನಂತರ ಈ ಬಾರಿಯ ಆಸ್ಕರ್‌ನ್ನು ಹೋಸ್ಟ್ ಮಾಡಲಿದ್ದಾರೆ. ಕಳೆದ ವರ್ಷ, ರೆಜಿನಾ ಹಾಲ್, ಆಮಿ ಶುಮರ್ ಮತ್ತು ವಂಡಾ ಸೈಕ್ಸ್ ಮೂವರು ಹೋಸ್ಟ್ ಮಾಡಿದರು.
ಇದನ್ನೂ ಓದಿ: Actor Suriya: ಸೂರ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್, ʻಸೂರ್ಯ 42ʼದಿಂದ ಹೊಸ ಅಪ್‌ಡೇಟ್
ಸೂರ್ಯ 42
ಕಾಲಿವುಡ್ ನಟ ಸೂರ್ಯ (Actor Suriya) ಅವರ ಹೆಸರಿಡದ ʻಸೂರ್ಯ 42ʼ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಏಪ್ರಿಲ್ 14ರಂದು ಹೈದರಾಬಾದ್‌ನಲ್ಲಿ ಚಿತ್ರದ ಟೈಟಲ್ ಮತ್ತು ಟೀಸರ್ ಬಿಡುಗಡೆಯಾಗಲಿದೆ. 170 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಸಿರುತೈ ಶಿವಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ದಿಶಾ ಪಟಾನಿ ರಾಜಕುಮಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ..ಚಿತ್ರದಲ್ಲಿ ಸೂರ್ಯ ಅರತಾರ್, ವೆಂಕಟೆಟರ್, ಮಂದಾಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಸೂರ್ಯ 42’ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.