Site icon Vistara News

Actor Suriya: `ರೋಲೆಕ್ಸ್‌’ ಪಾತ್ರದ ಸುಳಿವು ಕೊಟ್ಟ ಸೂರ್ಯ; ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

Actor Suriya in Rolex look

ಬೆಂಗಳೂರು: ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ (Actor Suriya) ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾದ ಪ್ರಮುಖ ಘಟ್ಟ ಎಂದರೆ ಕ್ಲೈಮ್ಯಾಕ್ಸ್‌. ನಟ ಸೂರ್ಯ (Actor Suriya) ಅವರು ವಿಲನ್ ಪಾತ್ರದಲ್ಲಿ ಕ್ಲೈಮ್ಯಾಕ್ಸ್​ನಲ್ಲಿ ಗಮನ ಸೆಳೆದಿದ್ದರು. ಸೂರ್ಯ ಅವರ ರೋಲೆಕ್ಸ್ ಪಾತ್ರ ಎಂಥವರನ್ನೂ ಬೆಚ್ಚಿ ಬೀಳಿಸಿತ್ತು. ಇದು ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಈಗ, ಸೂರ್ಯ ಅವರು ಈ ಕಥೆಯ ಮುಂದುವರಿದ ಭಾಗ ರೋಲೆಕ್ಸ್ ಪಾತ್ರದ ಮೇಲೆ ಸಾಗುತ್ತದೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಸಖತ್ ಪವರ್​​ಫುಲ್ ಆಗಿ ಮೂಡಿ ಬರುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ. ಇತ್ತೀಚೆಗೆ ತಮ್ಮ ಅಭಿಮಾನಿಗಳ ಜತೆಗಿನ ಸಂವಾದದಲ್ಲಿ, ಲೋಕೇಶ್ ಕನಕರಾಜ್ ಅವರು ರೋಲೆಕ್ಸ್ ಪಾತ್ರಕ್ಕಾಗಿ ಒಂದು ಸಾಲಿನ ಕಥೆಯನ್ನು ಹೇಳಿದ್ದಾರೆ ಎಂತಲೂ ನಟ ಬಹಿರಂಗಪಡಿಸಿದ್ದಾರೆ.

ಮೀಟ್‌ ಆಂಡ್‌ ಗ್ರೀಟ್‌ ಇವೆಂಟ್‌ನಲ್ಲಿ ಸೂರ್ಯ ಅವರು ಈ ಬಗ್ಗೆ ಅಭಿಮಾನಿಗಳ ಜತೆ ಮಾಹಿತಿ ಹಂಚಿಕೊಂಡರು. ಈ ಸಿನಿಮಾ ಸಖತ್ ಪವರ್​​ಫುಲ್ ಆಗಿ ಮೂಡಿ ಬರಲಿದೆ ಎಂಬ ಸುಳಿವು ನೀಡಿದ್ದಾರೆ. ನಿರ್ದೇಶಕರ ಕನಸಿನ ಯೋಜನೆಯಾದ ʻಇರುಂಬು ಕೈ ಮಾಯಾವಿʼ (Irumbu Kai Mayavi) ಸಿನಿಮಾಗಾಗಿ ಲೋಕೇಶ್ ಅವರೊಂದಿಗೆ ಕೈಜೋಡಿಸುವುದಾಗಿ ಹೇಳಿದರು. ಸೂರ್ಯ ಅವರು ಇತ್ತೀಚೆಗೆ ರೋಲೆಕ್ಸ್ ಪಾತ್ರದ ಬಗ್ಗೆ ಮಾತನಾಡಿ ಲೋಕೇಶ್ ಕನಗರಾಜ್ ಅವರು ಈಗಾಗಲೇ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರಂತೆ ಎಂದೂ ಹೇಳಿಕೊಂಡಿದ್ದಾರೆ.

ವಿಕ್ರಮ್‌ ಚಿತ್ರದಲ್ಲಿ ಕಮಲ್‌ ಹಾಸನ್‌ ಪಾತ್ರದ ಏಜೆಂಟ್‌ ವಿಕ್ರಮ್‌ ಅವರನ್ನು ಹಿಂಬಾಲಿಸುವ ಡ್ರಗ್‌ ಕ್ರೈಮ್‌ ಸಿಂಡಿಕೇಟ್‌ನ ಕಿಂಗ್‌ಪಿನ್‌ನ ವಿರೋಧಿ ರೋಲೆಕ್ಸ್‌ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದಾರೆ. ಸೂರ್ಯ ಕೇವಲ 5 ನಿಮಿಷಗಳು ಮಾತ್ರ ಪಾತ್ರ ನಿರ್ವಹಿಸಿದ್ದರು. ಇದು ಅಭಿಮಾನಿಗಳನ್ನು ಮೆಚ್ಚಿಸಿತ್ತು. ಲೋಕೇಶ್ ಕನಗರಾಜ್ ಅವರು ತಮಿಳಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ‘ಕೈದಿ’ ಸಿನಿಮಾ ಯಶಸ್ಸು ಕಂಡಿತ್ತು. ಈ ಚಿತ್ರದ ಮುಂದುವರಿದ ಭಾಗವಾಗಿ ‘ವಿಕ್ರಮ್’ ಸಿನಿಮಾ ಮೂಡಿ ಬಂತು. ಈ ಚಿತ್ರಕ್ಕೂ ಲೋಕೇಶ್ ನಿರ್ದೇಶನ ಮಾಡುತ್ತಿರುವ ‘ಲಿಯೋ’ಗೂ ಕನೆಕ್ಷನ್ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Vikram | ನಟ ಸೂರ್ಯ ಅವರ ರೋಲೆಕ್ಸ್‌ ಪಾತ್ರದ ಮೇಕಪ್‌ ಮಾಡಿದವರು ಇವರೆ!

ಕಂಗುವ ಸಿನಿಮಾದಲ್ಲಿ ಬ್ಯುಸಿಯಾದ ಸೂರ್ಯ

‘ಸೂರ್ಯ’ ಅವರು ಸದ್ಯ ‘ಕಂಗುವ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ 2024ರಲ್ಲಿ ರಿಲೀಸ್ ಆಗಲಿದೆ.ʻಕಂಗುವ’ ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. 1500 ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆ ಇದು! ಯೋಗಿ ಬಾಬು, ಕೊವೈ ಸರಳ, ಆನಂದ್‌ರಾಜ್, ಜಗಪತಿ ಬಾಬು, ಕೆ. ಎಸ್ ರವಿಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಇದನ್ನೂ ಓದಿ: Actor Suriya: ʻಸೂರ್ಯ 42ʼ ಸಿನಿಮಾ ಟೈಟಲ್‌ ರಿವೀಲ್‌; ದಿಶಾ ಪಟಾನಿ ನಾಯಕಿ!

ವೆಟ್ರಿ ಪಳನಿಸ್ವಾಮಿ ಸಿನಿಮಾಟೋಗ್ರಫಿ, ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.

Exit mobile version