Site icon Vistara News

Actor Surya | ಕಾಲಿವುಡ್‌ ನಟ ಸೂರ್ಯ ಅಭಿನಯದ ʻಜೈ ಭೀಮ್‌-2ʼ ತಯಾರಿ ನಡೆದಿದ್ಯಾ?

Actor Surya (jAI BHIM -2)

ಬೆಂಗಳೂರು: ಕಾಲಿವುಡ್‌ ನಟ ಸೂರ್ಯ ಅಭಿನಯದ ‘ಜೈ ಭೀಮ್’ ಪಾರ್ಟ್‌-2 (Actor Surya)ಬರಲಿದೆ ಎಂಬ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜೈ ಭೀಮ್‌-2 ಸಿನಿಮಾಗಾಗಿ ತಂಡ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.

ಕಮರ್ಷಿಯಲ್ ಸಿನಿಮಾದ ಅಂಶಗಳನ್ನು ಪಕ್ಕಕ್ಕಿಟ್ಟು, ನಟ ಸೂರ್ಯ ಕೇವಲ ಸಹಜವಾದ ಅಭಿನಯದ ಮೂಲಕ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ ಈ ಚಿತ್ರ. ಲಿಜೋಮೋಲ್ ಜೋಸ್, ಕೆ.ಮಣಿಕಂದನ್, ಪ್ರಕಾಶ್ ರಾಜ್, ರಜಿಶಾ ವಿಜಯನ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಜ್ಞಾನ್‌ವೇಲ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ರಾಜಶೇಖರ್ ಪಾಂಡಿಯನ್ ನಿರ್ಮಾಣದಲ್ಲಿ ʻಜೈ ಭೀಮ್ ಪಾರ್ಟ್ 2ʼಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ | Actor Suriya | ತಮಿಳು ನಟ ಸೂರ್ಯ ಜತೆ ಸಿನಿಮಾ ಮಾಡಲು ಮುಂದಾಗಿದೆ ಹೊಂಬಾಳೆ ಫಿಲ್ಮ್ಸ್‌

Actor Surya

ತಮಿಳುನಾಡಿನಲ್ಲಿ 1990ರ ದಶಕದಲ್ಲಿ ನಡೆದ ನೈಜ-ಜೀವನ ಆಧಾರಿತ ಘಟನೆಯಾಗಿದೆ. ಒಬ್ಬ ಅಮಾಯಕ ಬುಡಕಟ್ಟು ವ್ಯಕ್ತಿಯನ್ನು ಕಳ್ಳತನದ ಸುಳ್ಳು ಆರೋಪ ಹೊರಿಸಿ, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗುತ್ತದೆ ಮತ್ತು ಅಂತಿಮವಾಗಿ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ. ಮೃತ ವ್ಯಕ್ತಿಯ ಪತ್ನಿಗಾಗಿ ಹೋರಾಡಿದ ನ್ಯಾಯಮೂರ್ತಿ ಕೆ. ಚಂದ್ರು ಅವರನ್ನು ಆಧರಿಸಿದ ಸಿನಿಮಾದಲ್ಲಿ ಸೂರ್ಯ ಅವರು ವಕೀಲ ಚಂದ್ರು ಪಾತ್ರವನ್ನು ಮಾಡಿದ್ದಾರೆ.

ಇದನ್ನೂ ಓದಿ | Oscar Committee | ಜೈ ಭೀಮ್ ನಟ ಈಗ ಆಸ್ಕರ್‌ ಸಮಿತಿಯ ಸದಸ್ಯ

Exit mobile version