ತಿರುವನಂತಪುರಂ: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಜೈಲರ್ (Jailer) ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸಿ ದೇಶಾದ್ಯಂತ ಖ್ಯಾತಿ ಗಳಿಸಿರುವ, ಮನೋಜ್ಞ ನಟನೆಗಾಗಿ ಮೆಚ್ಚುಗೆಗೆ ಪಾತ್ರರಾಗಿರುವ ನಟ ವಿನಾಯಕನ್ (Actor Vinayakan) ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ (ಅಕ್ಟೋಬರ್ 24) ಕುಡಿದ ಮತ್ತಿನಲ್ಲಿ ಸಾರ್ವಜನಿಕ ಪ್ರದೇಶ ಹಾಗೂ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಎರ್ನಾಕುಲಂ ಉತ್ತರ ಪೊಲೀಸರು ನಟನನ್ನು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ನಟ ವಿನಾಯಕನ್ ಅವರು ಮೊದಲು ಕೊಚ್ಚಿ ನಗರದ ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಗಲಾಟೆ ಮಾಡಿದ್ದಾರೆ. ಇದಾದ ಬಳಿಕ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲೂ ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಪೊಲೀಸರು ನಟನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುಡಿದ ಮತ್ತಿನಲ್ಲಿದ್ದ ನಟನು ಅಪಾರ್ಟ್‌ಮೆಂಟ್‌ನಲ್ಲಿಯೇ ಗಲಾಟೆ ಆರಂಭಿಸಿದ್ದಾರೆ. ಇದಾದ ಬಳಿಕ ಜನರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಜತೆ ವಾಗ್ವಾದ
Actor #Vinayakan Has Been Arrested For Causing Nuisance at Ernakulam North Police Station 🤯 #Jailer pic.twitter.com/UnadmpzQFM
— நாய்க்குட்டி (The Dog) (@KuttyNaai_) October 24, 2023
ವರ್ಮನ್ ಪಾತ್ರದಿಂದ ದೇಶಾದ್ಯಂತ ಖ್ಯಾತಿ
ನಟ ವಿನಾಯಕನ್ ಅವರು ಪಾನಮತ್ತರಾಗಿರುವುದನ್ನು ದೃಢಪಡಿಸಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಲಯಾಳಂ ಸಿನಿಮಾ ನಟರಾಗಿರುವ ವಿನಾಯಕನ್ ಅವರು ಜೈಲರ್ ಸಿನಿಮಾದಲ್ಲಿ ‘ವರ್ಮನ್’ ಎಂಬ ಖಳನಾಯಕನ ಪಾತ್ರ ನಿರ್ವಹಿಸಿದ ಬಳಿಕ ಜನಮನ್ನಣೆ ಗಳಿಸಿದ್ದಾರೆ. ಇವರ ನಟನೆ ಕುರಿತು ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
Just IN : Actor Vinayakan arrested by the Ernakulam North Police allegedly for causing a disturbance at the local police station.
— Manobala Vijayabalan (@ManobalaV) October 24, 2023
The police said that the arrest was due to the disruption of the police station. The actor was taken… pic.twitter.com/Kd8mYgr9mt
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿರುವ ಜೈಲರ್ ಸಿನಿಮಾದಲ್ಲಿ ತಲೈವಾ ಜತೆಯಲ್ಲಿ ನಟಿ ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಸಂತ್ ರವಿ, ವಿನಾಯಕನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೂ ಸಿನಿಮಾದಲ್ಲಿ ನಟಿಸಿದ್ದು, ಅವರ ಪಾತ್ರ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅವರಲ್ಲದೆ ಸಿನಿಮಾದಲ್ಲಿ ಜಾಕಿ ಶ್ರಾಫ್, ಮಲಯಾಳಂನ ನಟ ಮೋಹನ್‌ಲಾಲ್ ಕೂಡ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರ ಅವರ ಸಂಗೀತ ನಿರ್ದೇಶನವಿದೆ.
ಇದನ್ನೂ ಓದಿ: Jailer Movie: ಜೈಲರ್ ಹಿಟ್; ಅಪೋಲೊ ಆಸ್ಪತ್ರೆಗಳಿಗೆ 1 ಕೋಟಿ ರೂ. ದೇಣಿಗೆ ನೀಡಿದ ಸನ್ ಪಿಕ್ಚರ್ಸ್
ʼಜೈಲರ್ʼ ಚಿತ್ರವು ತಮಿಳು ಸಿನಿಮಾಗಳಲ್ಲಿ 500 ಕೋಟಿ ರೂ. ಗಳಿಕೆ ಮಾಡಿಕೊಂಡ ಮೂರನೇ ಸಿನಿಮಾವಾಗಿದೆ. ಈ ಹಿಂದೆ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ಅತಿ ವೇಗವಾಗಿ 500 ಕೋಟಿ ರೂ. ಕ್ಲಬ್ ಸೇರಿಕೊಂಡಿತ್ತು. ಅದಾದ ನಂತರ ಅತಿ ಬೇಗ 500 ಕೋಟಿ ರೂ. ಗಳಿಸಿಕೊಂಡ ಸಿನಿಮಾವಾಗಿ ಜೈಲರ್ ಸಿನಿಮಾ ಹೊರಹೊಮ್ಮಿದೆ.