Site icon Vistara News

Actor Vishal: ಟ್ರಕ್ ಕಂಟ್ರೋಲ್ ತಪ್ಪಿ ಸೆಟ್‌ನಲ್ಲಿ ಅವಘಡ: ಪಾರಾದ ನಟ ವಿಶಾಲ್!

Actor Vishal Escapes Death On Mark Antony Film Sets

ಬೆಂಗಳೂರು: ತಮಿಳು ನಟ ವಿಶಾಲ್ (Actor Vishal) ಅವರ ಮುಂಬರುವ ಚಿತ್ರ ‘ಮಾರ್ಕ್ ಆ್ಯಂಟನಿ’ ಚಿತ್ರದ ಸೆಟ್‌ನಲ್ಲಿ ಟೆಕ್ನಿಕಲ್ ಸಮಸ್ಯೆಯಿಂದ ಟ್ರಕ್ ನಿಯಂತ್ರಣ ತಪ್ಪಿ ವಿಶಾಲ್ ಪಕ್ಕದಲ್ಲೇ ಹರಿದಿದೆ. ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಟ ಘಟನೆ ಬಗ್ಗೆ ವಿವರಿಸಿದ್ದಾರೆ. ಸಿನಿಮಾಗಾಗಿ ಲಾರಿ​ಗೆ ಸಂಬಂಧಿಸಿದ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯುತ್ತಿತ್ತು. ಈ ವೇಳೆ ಲಾರಿ ಡ್ರೈವರ್ ನಿಯಂತ್ರಣ ತಪ್ಪಿದ್ದು, ಎಲ್ಲಿ ಲಾರಿ ನಿಲ್ಲಬೇಕೊ ಅಲ್ಲಿ ನಿಲ್ಲದೆ ಮುಂದಕ್ಕೆ ನುಗ್ಗಿದೆ. ಅಲ್ಲೇ ಕೆಳಗಡೆ ಮಲಗಿದ್ದ ವಿಶಾಲ್​ ಅವರ ಪಕ್ಕದಲ್ಲೇ ಲಾರಿ ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತೀಚೆಗೆ ಚೆನ್ನೈನ ಸ್ಟುಡಿಯೋದರಲ್ಲಿ ‘ಮಾರ್ಕ್ ಆ್ಯಂಟನಿ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವಿಚಾರವಾಗಿ ಖುದ್ದು ವಿಶಾಲ್​ ಅವರು ಮಾಹಿತಿ ನೀಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ವಿಶಾಲ್, “ಕೆಲವೇ ಸೆಕೆಂಡುಗಳು ಮತ್ತು ಕೆಲವು ಇಂಚುಗಳಲ್ಲಿ ನಾನು ಪಾರಾಗಿದ್ದೇನೆ. ದೇವರಿಗೆ ಧನ್ಯವಾದಗಳು. ಈ ಘಟನೆಯಿಂದ ಸ್ವಲ್ಪ ಗಾಬರಿಯಾದೆ, ಮತ್ತೆ ಚಿತ್ರೀಕರಣಕ್ಕೆ ಮರಳಿದೆವುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Actor Vishal | ʼಲಾಠಿʼ ಚಿತ್ರದ ಪ್ರಿ ರಿಲೀಸ್ ಇವೆಂಟ್: ಪೊಲೀಸ್ ಅಧಿಕಾರಿಯಾಗಿ ನಟ ವಿಶಾಲ್‌!

ನಟ ವಿಶಾಲ್ ಟ್ವೀಟ್‌

ಈ ವಿಡಿಯೊ ವೈರಲ್ ಆಗಿದ್ದು, ಸಿನಿಮಾ ನಿರ್ದೇಶಕ ಎಸ್ ಜೆ ಸೂರ್ಯ ಸೇರಿದಂತೆ ಹಲವಾರು ಪ್ರತಿಕ್ರಿಯಿಸಿದ್ದಾರೆ. ʻʻ’ನಿಜಕ್ಕೂ ದೇವರಿಗೆ ಥ್ಯಾಂಕ್ಸ್‌ ಹೇಳಬೇಕು. ಅಪಘಾತ ಹೇಗಾಯ್ತು ಎಂದು ಗೊತ್ತಾಗುತ್ತಿಲ್ಲ, ಶೂಟಿಂಗ್ ಪ್ಲ್ಯಾನ್ ಮಾಡಿರುವ ಪ್ರಕಾರ ಟ್ರಕ್ ನೇರವಾಗಿ ಹೋಗಬೇಕಿತ್ತು. ಆದರೆ ನಿಯಂತ್ರಣ ತಪ್ಪಿ ಪಕ್ಕಕ್ಕೆ ಹರಿದಿದೆ. ಒಂದು ವೇಳೆ ನೇರವಾಗಿ ಬಂದಿದ್ದರೆ ಖಂಡಿತಾ ವಿಶಾಲ್ ಮತ್ತು ನಾನು ಈ ಘಟನೆ ಬಗ್ಗೆ ಟ್ವೀಟ್ ಮಾಡುತ್ತಿರಲಿಲ್ಲ. ದೇವರೇ ನಮ್ಮನ್ನು ಕಾಪಾಡಿರುವುದು’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Vishal | ರಾಜ್‌ ಕುಟುಂಬ ಶಕ್ತಿಧಾಮವನ್ನು ಚೆನ್ನಾಗಿ ನೋಡಿಕೊಳ್ತಿದೆ, ಸದ್ಯ ಯಾರ ನೆರವೂ ಬೇಕಿಲ್ಲ ಎಂದ ನಟ ವಿಶಾಲ್‌

ಎಸ್ ಜೆ ಸೂರ್ಯ ಟ್ವೀಟ್‌

ಅಧಿಕ್ ರವಿಚಂದ್ರನ್ ನಿರ್ದೇಶನದ,‘ಮಾರ್ಕ್ ಆ್ಯಂಟನಿ’ಯಲ್ಲಿ ವಿಶಾಲ್ ಮತ್ತು ಎಸ್‌ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುನೀಲ್, ರಿತು ವರ್ಮಾ, ಅಭಿನಯ, ನಿಜಲ್ಗಲ್ ರವಿ ಮತ್ತು ವೈ ಜೀ ಮಹೇಂದ್ರನ್ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Exit mobile version