Site icon Vistara News

Actor Vishal | ʼಲಾಠಿʼ ಚಿತ್ರದ ಪ್ರಿ ರಿಲೀಸ್ ಇವೆಂಟ್: ಪೊಲೀಸ್ ಅಧಿಕಾರಿಯಾಗಿ ನಟ ವಿಶಾಲ್‌!

Actor Vishal

ಬೆಂಗಳೂರು: ಕಾಲಿವುಡ್‌ ನಟ ವಿಶಾಲ್‌ (Actor Vishal) ನಟನೆಯ ʻಲಾಠಿʼ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಟ ವಿಶಾಲ್ ಹಾಗೂ ʻಲಾಠಿʼ ಚಿತ್ರತಂಡ ಬೆಂಗಳೂರಿನ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಡಿಸೆಂಬರ್‌ 17ರಂದು ಭಾಗಿಯಾಗಿದ್ದಾರೆ. ಲಾಠಿ ಚಿತ್ರದಲ್ಲಿ ವಿಶಾಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಠಿ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ. ʻʻಕರ್ನಾಟಕದಲ್ಲಿ ಪ್ರಮೋಷನ್ ಮಾಡುವ ಉದ್ದೇಶ ನಮ್ಮ ಚಿತ್ರತಂಡದಾಗಿದೆ ʼʼ ಎಂದು ವಿಶಾಲ್‌ ಕಾರ್ಯಕ್ರಮದಲ್ಲಿ ಹೇಳಿದರು.

ನಟ ವಿಶಾಲ್‌ ಮಾತನಾಡಿ ʻʻನನಗೆ ಕನ್ನಡ ಮಾತನಾಡಲು ತುಂಬ ಇಷ್ಟ. ಕರ್ನಾಟಕದಲ್ಲಿ ಪ್ರಮೋಷನ್ ಮಾಡುವ ಉದ್ದೇಶ ನಮ್ಮ ಚಿತ್ರತಂಡದಾಗಿದೆ. 18 ವರ್ಷದಿಂದ ಕರ್ನಾಟಕ ಜನತೆಯ ಬೆಂಬಲ ನನಗಿದೆ. ನನಗೆ ಡ್ಯೂಪ್ ಮಾಡಿ ಅಭ್ಯಾಸ ಇಲ್ಲ. ಸ್ಟಂಟ್ ಮಾಸ್ಟರ್ ಪಿಟೀರ್ ಅವರು ಯಾವುದೇ ತೊಂದರೆ ಇಲ್ಲದೆ ಫೈಟ್ ಸೀನ್ಸ್ ಹೇಳಿಕೊಟ್ಟಿದ್ದಾರೆ. ಕನ್ನಡದಲ್ಲಿ 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಕ್ಲೈಮಾಕ್ಸ್‌ನಲ್ಲಿ 45 ನಿಮಿಷ ನನ್ನ ಆ್ಯಕ್ಟಿಂಗ್ ಸ್ಕಿಲ್ಸ್ ಪ್ರೇಕ್ಷಕರು ನೋಡಬಹುದು. ನನ್ನ ಸಿನಿ ಜರ್ನಿ 18 ವರ್ಷ ಕಳೆದು ಮುಂದುವರಿಯುತ್ತಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ | Actor Vishal | ರಾಜ್‌ ಕುಟುಂಬ ಶಕ್ತಿಧಾಮವನ್ನು ಚೆನ್ನಾಗಿ ನೋಡಿಕೊಳ್ತಿದೆ, ಸದ್ಯ ಯಾರ ನೆರವೂ ಬೇಕಿಲ್ಲ ಎಂದ ನಟ ವಿಶಾಲ್‌

ʻʻನನಗೆ ಸೋಶಿಯಲ್ ಸರ್ವಿಸ್ ಮಾಡಿಲ್ಲ ಅಂದರೆ ನಿದ್ದೆ ಬರುವುದಿಲ್ಲ. ಮಕ್ಕಳಿಗೆ ಶಿಕ್ಷಣ ತುಂಬ ಮುಖ್ಯ. ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಿಲ್ಲ ಎಂದರೆ ಮುಂದೆ ಸಾಧಿಸಬೇಕಾದ ಕನಸುಗಳನ್ನು ಮರೆತುಬಿಡುತ್ತಾರೆ. ರಾಜಕುಮಾರ್ ಅಕಾಡೆಮಿಯ ಶಕ್ತಿಧಾಮದಲ್ಲಿ ಪ್ರತಿಭಾನ್ವಿತ ಮಕ್ಕಳು ಇದ್ದಾರೆ. ರಾಜ್ ಕುಮಾರ್ ಅವರ ಕುಟುಂಬದ ಜತೆ ನಾನು ಎಂದಿಗೂ ಇರುತ್ತೇನೆʼʼ ಎಂದರು.

ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಶಾಲ್‌ಗೆ ನಾಯಕಿಯಾಗಿ ಸುನೈನಾ ನಟಿಸಿದ್ದಾರೆ. ಸ್ಯಾಮ್ ಸಿ.ಎಸ್. ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.‌

ಇದನ್ನೂ ಓದಿ | Actor Vishal | ರಾಜ್‌ ಕುಟುಂಬ ಶಕ್ತಿಧಾಮವನ್ನು ಚೆನ್ನಾಗಿ ನೋಡಿಕೊಳ್ತಿದೆ, ಸದ್ಯ ಯಾರ ನೆರವೂ ಬೇಕಿಲ್ಲ ಎಂದ ನಟ ವಿಶಾಲ್‌

Exit mobile version