Site icon Vistara News

Actor Yash | ರಾಕಿ ಬಾಯ್‌ಗೆ ಜನುಮದಿನ ಸಂಭ್ರಮ: ಕೆಜಿಎಫ್ ಕಿಂಗ್ ಸಿನಿ ಪಯಣ ಹೇಗಿತ್ತು?

ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ (Actor Yash | ) ಜನವರಿ 8 ಭಾನುವಾರ 37ನೇ ಜನುಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಲ್ಲ ಎಂಬ ಸಂದೇಶವನ್ನು ಯಶ್ ಪತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದರೂ ಅವರ ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಕಿಂಗ್ ಸಿನಿ ಪಯಣ ಹೇಗಿತ್ತು?

ಮೊಗ್ಗಿನ ಮನಸು ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಯಶ್‌
ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ʻಮೊಗ್ಗಿನ ಮನಸುʼ ನಾಲ್ಕು ಸ್ನೇಹಿತರ ನಡುವೆ ನಡೆಯುವ ಕಥೆಯಾಗಿದೆ. 2007ರಲ್ಲಿ ತೆರೆಗೆ ಬಂದ ‘ಜಂಬದ ಹುಡುಗಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಯಶ್‌ ಎಂಟ್ರಿ ಕೊಟ್ರು, ಬಳಿಕ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಯಶ್ ನಾಯಕ ನಟನಾಗಿ ಮಿಂಚಿದರು. ​ ಈ ಚಿತ್ರದ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಅವರೇ ಯಶ್ ಮೊದಲ ಸಿನಿಮಾದ ನಾಯಕಿರಾಗಿದ್ದರು. ಚಿತ್ರ ಬಿಡುಗಡೆಯಾದ ಸುಮಾರು ಎಂಟು ವರ್ಷಗಳ ನಂತರ 2016ರಲ್ಲಿ ಯಶ್‌-ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದನ್ನೂ ಓದಿ | Actor Yash | 8 ವರ್ಷ ಪೂರೈActor Yash ಸಿದ ಯಶ್‌ ಅಭಿನಯದ ʻಮಿಸ್ಟರ್‌ ಆ್ಯಂಡ್‌ ಮಿಸೆಸ್‌ ರಾಮಾಚಾರಿʼ!

ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ ಯಶ್‌
ಯಶ್ ಮತ್ತು ಬಿಯಾಂಕಾ ದೇಸಾಯಿ ರಾಕಿ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ಕೆ ನಾಗೇಂದ್ರ ಅರಸ್ ನಿರ್ದೇಶಿಸಿದ ಈ ಚಲನಚಿತ್ರವು ತ್ರಿಕೋನ ಪ್ರೇಮ ಕಥೆಯನ್ನು ಒಳಗೊಂಡಿದೆ. 2011ರಲ್ಲಿ ತೆರೆಗೆ ಬಂದ ‘ಕಿರಾತಕ’ ಚಿತ್ರ ರಾಕಿಂಗ್ ಸ್ಟಾರ್ ಯಶ್‌ ಅವರಿಗೆ ಟರ್ನಿಂಗ್‌ ಪಾಯಿಂಟ್‌ ಎಂತಲೇ ಹೇಳಬಹುದು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬ ಇಷ್ಟವಾಯಿತು. ನಂತರ ತೆರೆಗೆ ಬಂದ ‘ಲಕ್ಕಿ’, ‘ಡ್ರಾಮಾ’ ,’ಗೂಗ್ಲಿ’, ‘ರಾಜಾಹುಲಿ’, ‘ಗಜಕೇಸರಿ’ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡ ಸಿನಿಮಾಗಳಾಗಿವೆ.

50 ಕೋಟಿಗೂ ಹೆಚ್ಚು ಗಳಿಕೆ ಕಂಡ ‘Mr & Mrs ರಾಮಾಚಾರಿ
2014ರಲ್ಲಿ ತೆರೆಗೆ ಬಂದ ‘Mr & Mrs ರಾಮಾಚಾರಿ’ ಬಾಕ್ಸಾಫೀಸ್ ನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ನಿರ್ಮಿಸಿತು. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮುಖ್ಯ ನಾಯಕರಾಗಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್!
2018ಡಿಸೆಂಬರ್‌ ನಲ್ಲಿ ತೆರೆಕಂಡ ಯಶ್​ ಚಿತ್ರ ಕೆಜಿಎಫ್ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡಿಯಿತು.​ ರಿಲೀಸ್ ಆದ 5 ದಿನದಲ್ಲಿ ಕೆಜಿಎಫ್​ 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. 1400 ಕೋಟಿ ರೂ. ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆದರು. ಇದೀಗ ಯಶ್ ಮುಂದಿನ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ | Actor Yash | ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಸ್ವಲ್ಪ ಸಮಯ ಕೊಡಿ: ಅಭಿಮಾನಿಗಳಿಗೆ ಯಶ್‌ ಪತ್ರ!


Exit mobile version