Site icon Vistara News

Actor Yash | ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್‌-ರಾಧಿಕಾ ಪಂಡಿತ್‌ ಪುತ್ರ ಯಥರ್ವ: ಫೋಟೊಗಳು ಇಲ್ಲಿವೆ!

Actor Yash

ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ಯಶ್‌ (Actor Yash) ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ಎರಡನೇ ಪುತ್ರ ಯಥರ್ವನಿಗೆ ಅಕ್ಟೋಬರ್‌ 30ರಂದು ಜನುಮದಿನದ ಸಂಭ್ರಮ. ಯಥರ್ವ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತಿದ್ದಾನೆ. ಯಶ್‌ ಮತ್ತು ರಾಧಿಕಾ ಪಂಡಿತ್‌ ಮುದ್ದು ಮಗನ ಫೋಟೊವನ್ನು ಹಂಚಿಕೊಂಡು ಶುಭ ಹಾರೈಸಿದ್ದಾರೆ.

ರಾಧಿಕಾ ತನ್ನ ಕಾಲು ಮೇಲೆ ಕೂರಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತೊಂದು ಫೋಟೊದಲ್ಲಿ ಯಥರ್ವ್ ಬಲೂನ್ ಹಿಡಿದು ನಿಂತಿರುವ ಫೋಟೊ ಹಂಚಿಕೊಂಡಿದ್ದಾರೆ. ಸಿನಿ ತಾರೆಯರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ | Yash | ಯಶ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ: ಮಕ್ಕಳೊಂದಿಗೆ ಹಬ್ಬ ಆಚರಿಸಿದ ಯಶ್ ದಂಪತಿ

ಈ ಹಿಂದೆ ಅಷ್ಟೇ ದೀಪಾವಳಿ ಹಬ್ಬದ ಫೋಟೊಗಳನ್ನು ಯಶ್​ ಮತ್ತು ರಾಧಿಕಾ ಇಬ್ಬರೂ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಮಕ್ಕಳಾದ ಯಥರ್ವ ಮತ್ತು ಐರಾ ಜತೆ ಸೇರಿ ಪಟಾಕಿ ಹೊಡೆಯುತ್ತಿರುವ ಫೋಟೊ ಶೇರ್​ ಮಾಡಿದ ನಟ ಯಶ್​ ‘ಈ ಕ್ಷಣಗಳೆಲ್ಲ ಅತ್ಯಂತ ಮುಖ್ಯವಾದವು’ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದರು. ರಾಧಿಕಾ ಹಾಗೂ ಯಶ್‌ ಯಾವಾಗಲೂ ತಮ್ಮ ಮಕ್ಕಳ ಪೋಟೊ ಹಾಗೂ ವಿಡಿಯೊ ಹಂಚಿಕೊಳ್ಳುತ್ತಿರುತ್ತಾರೆ.

ಈ ಹಿಂದೆ ಯಥರ್ವ್‌ ಬೀಚ್‌ನಲ್ಲಿ ಸಮುದ್ರದತ್ತ ಮುಖ ಮಾಡಿ ನಿಂತಿರುವ ಫೋಟೋವನ್ನು ತಮ್ಮ ಇನ್‌ಸ್ಟಾ ಖಾತೆಯ ಸ್ಟೋರಿ ಲಿಸ್ಟ್‌ನಲ್ಲಿ ರಾಧಿಕಾ ಹಂಚಿಕೊಂಡಿದ್ದರು. ಐರಾ ಹಾಗೂ ಯಥರ್ವ್‌ ತುಂಟಾಟಗಳನ್ನು ನೋಡಿ ಯಶ್‌ ಮತ್ತು ರಾಧಿಕಾ ಫ್ಯಾನ್ಸ್‌ ಶೇರ್‌ ಮಾಡಿ ಕಮೆಂಟ್‌ಗಳನ್ನು ಮಾಡುತ್ತಿರುತ್ತಾರೆ.

ಇದನ್ನೂ ಓದಿ | Radhika Pandit | ಮಗ ಯಥರ್ವ್‌ ಫೋಟೊ ಹಾಕಿ ಎಲ್ಲೋ ನೋಡಿದ ಹಾಗಿದೆ ಅಲ್ವಾ ಅಂದಿದ್ಯಾಕೆ?

Exit mobile version