Rocking Star Yash: ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾ ಜಪಾನ್ನಲ್ಲಿ ಜುಲೈ 14ರಂದು ರಿಲೀಸ್ ಆಗುತ್ತಿದೆ. ಈ ಬಗ್ಗೆ ಸ್ವತಃ ರಾಕಿಂಗ್ ಸ್ಟಾರ್ ಯಶ್ ಜಪಾನ್ ಭಾಷೆಯಲ್ಲಿ ಮಾತನಾಡಿ, ಸಿನಿಮಾ ನೋಡಿ ಎಂದು...
ನಂಜನಗೂಡು ಶ್ರೀಕಂಠೇಶ್ವರನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಯಶ್ ‘ನಂಜನಗೂಡು ಶ್ರೀಕಂಠೇಶ್ವರ ದೇವರು ನಮ್ಮ ಮನೆ ದೇವರು. ಕೊರೊನಾ ಕಾರಣಕ್ಕೆ ಇಲ್ಲಿಗೆ ಬರಲು ಆಗಿರಲಿಲ್ಲ. ಯಾವುದೇ ವಿಶೇಷ ಹರಕೆಯೇನೂ ಇಲ್ಲ ಎಂದಿದ್ದಾರೆ.
ಯಶ್ ಅವರು ಬಾಲಿವುಡ್ನ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ (Yash as Ravan) ನಟಿಸಲಿದ್ದಾರೆ ಎನ್ನುವ ವದಂತಿಗಳು ಕೇಳಿಬರುತ್ತಿವೆ. ಆದರೆ ಅದನ್ನು ಮೂಲಗಳು ಅಲ್ಲಗೆಳೆದಿವೆ.
ನಿರ್ದೇಶಕಿ (Yash 19) ಗೀತು ಅವರಿಗೆ ಶುಭ ಹಾರೈಸಲು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಮೂಲಕ ಗೀತು ಮೋಹನ್ದಾಸ್ ಅವರು ಯಶ್ ಅವರ ಮುಂಬರುವ ಸಿನಿಮಾದ ನಿರ್ದೇಶಕರು ಎಂಬ ಸುಳಿವು ನೀಡಿದ್ದಾರೆ.
ದಾಖಲೆಗಳನ್ನು ಬರೆದ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ ಮುಗಿದಿದೆ. ಅದರ ಹಿನ್ನೆಲೆ ಸಿನಿಮಾ ಮೂರನೇ ಭಾಗದ (KGF 3 Movie) ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ.
ನಂದಗೋಕುಲ ಧಾರಾವಾಹಿ (Yash-Radhika), ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿಯಾಗಿತ್ತು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು.
ಏರೋ ಇಂಡಿಯಾ ಉದ್ಘಾಟನೆಗೆ ಮುನ್ನಾ ದಿನ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜಭವನದಲ್ಲಿ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದರು.
ರಾಜಭವನದಲ್ಲಿ ನಿನ್ನೆ ನಡೆದ ಔತಣಕೂಟಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್, ಯಶ್ (Yash), ರಿಷಬ್ ಶೆಟ್ಟಿ (Rishab shetty), ವಿಜಯ್ ಕಿರಗಂದೂರು ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಶಿವಣ್ಣ, ಕಿಚ್ಚ ಸುದೀಪ್ಗೆ ಆಹ್ವಾನ ನೀಡಿಲ್ಲ.
ಇಲ್ಲಿಯವರೆಗೆ ಪೆಪ್ಸಿಗೆ ಸಾಮಾನ್ಯವಾಗಿ ಬಾಲಿವುಡ್ ನಟ/ನಟಿಯರು, ಕ್ರಿಕೆಟ್ ಆಟಗಾರರೇ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿದ್ದರು. ಬಾಲಿವುಡ್ ಗಣ್ಯರಾದ ಅಮಿತಾಬ್ಬಚ್ಚನ್, ಅಮೀರ್ ಖಾನ್, ಶಾರೂಖ್ಖಾನ್, ರಣಬೀರ್ ಕಪೂರ್, ಸಲ್ಮಾನ್ ಖಾನ್ ಇತರರೇ ರಾಯಭಾರಿಗಳಾಗಿದ್ದರು.
ಕೆಜಿಎಫ್ (KGF) ಮತ್ತು ಕೆಜಿಎಫ್ 2 ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಕೆಜಿಎಫ್ 3 ಸಿನಿಮಾದ ಚಿತ್ರೀಕರಣಕ್ಕೂ ಸಿದ್ಧತೆ ನಡೆದಿದೆ. ಒಟ್ಟಾರೆಯಾಗಿ ಈ ಸಿನಿಮಾವನ್ನು 5 ಸರಣಿಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.