Site icon Vistara News

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavathi felicitated

#image_title

ಬೆಂಗಳೂರು: ‌ಕನ್ನಡ ಚಿತ್ರರಂಗದಲ್ಲಿ ಅಮೋಘ ಸೇವೆ ಸಲ್ಲಿಸಿದ್ದ ನಟಿ ಲೀಲಾವತಿ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ನಟಿ ಲೀಲಾವತಿ (Actress Leelavathi) ಅವರು ಸ್ಯಾಂಡಲ್‌ವುಡ್‌ನಲ್ಲಿ (Sandalwood) ತಮ್ಮ ಅಮೋಘ ಅಭಿನಯದ ಮೂಲಕ ಮೋಡಿ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿಯನ್ನು 2023ರ ಮೇ ತಿಂಗಳಿನಲ್ಲಿ ನೀಡಿ ಗೌರವಿಸಿತ್ತು.

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಲೀಲಾವತಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಚಿತ್ರರಂಗವು ಮೇ 8ಕ್ಕೆ ಇಟ್ಟುಕೊಂಡಿತ್ತು. ಆದರೆ, ವಯೋಸಹಜ ಕಾಯಿಲೆಯಿಂದ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಹೀಗಾಗಿ ಲೀಲಾವತಿ ಅವರ ಮನೆಗೇ ಸುಮಾರು 50ಕ್ಕೂ ಹೆಚ್ಚು ಕಲಾವಿದರು ತೆರಳಿ ಸನ್ಮಾನಿಸಿದ್ದರು.

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ನಟಿ ಲೀಲಾವತಿ ಅವರ ತೋಟದ ಮನೆಗೆ ಕನ್ನಡ ಕಲಾಬಳಗ ಭೇಟಿ ನೀಡಿತ್ತು. ಈ ವೇಳೆ ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿಯನ್ನು ಪ್ರದಾನ ಮಾಡಿ ಹಿರಿಯ ಚೇತನವನ್ನು ಕಲಾವಿದರು ಗೌರವಿಸಿದ್ದರು.

ಇದನ್ನೂ ಓದಿ | Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

ಇದೇ ವೇಳೆ ನಟ, ನಟಿಯರು ಲೀಲಾವತಿಯರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡಿದ್ದರು. ಜತೆಗೆ ಲೀಲಾವತಿ ಅವರ ಸಿನಿಮಾಗಳ ಹಾಡುಗಳನ್ನು ಹಾಡಿ ನೃತ್ಯ ಮಾಡುವ ಕಲಾವಿದರು ಸಂಭ್ರಮಿಸಿದ್ದರು.

ಹಿರಿಯ ನಟರಾದ ಶ್ರೀಧರ್, ದೊಡ್ಡಣ್ಣ, ಸುಂದರ್ ರಾಜ್, ಜೈಜಗದೀಶ್, ಹಿರಿಯ ನಟ ಗಿರಿಜಾ ಲೋಕೇಶ್, ಪದ್ಮಾ ವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ನಟಿ ಪೂಜಾ ಗಾಂಧಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಹಾಗೂ ಮಂಡಳಿ ಸದಸ್ಯರು ಸೇರಿ 50ಕ್ಕೂ ಹೆಚ್ಚು ಕಲಾವಿದರು ಇದ್ದರು.

ಇದನ್ನೂ ಓದಿ : Actress Leelavati : ಹಿರಿಯ ನಟಿ ಲೀಲಾವತಿ ವಿಧಿವಶ; ಹೋರಾಟದಲ್ಲೇ ಬೆಳೆದ ಲೀಲಮ್ಮ ಇನ್ನಿಲ್ಲ

ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಮಿಂಚಿದ್ದರು. ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Actress Leelavati: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

Exit mobile version