ಚೆನ್ನೈ: ಚೆನ್ನೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ನಯನತಾರಾ (Actress Nayanthara), ತಮ್ಮ ಅವಳಿ ಮಕ್ಕಳ ಪೂರ್ಣ ಹೆಸರನ್ನು ಬಹಿರಂಗಪಡಿಸಿದರು. ಈವೆಂಟ್‌ನಲ್ಲಿ ʻʻನನ್ನ ಮೊದಲ ಮಗ ಉಯಿರ್ ರುದ್ರೋನಿಲ್ ಎನ್ ಶಿವನ್ ಮತ್ತು ನನ್ನ ಎರಡನೇ ಮಗ ಉಳಗ್ ದೈವಿಗ್ ಎನ್ ಶಿವನ್ʼʼಎಂದು ಹೇಳಿಕೊಂಡಿದ್ದಾರೆ. ವೇದಿಕೆಯಲ್ಲಿ ನಯನತಾರಾ ಅವರ ಮಕ್ಕಳ ಪೂರ್ಣ ಹೆಸರುಗಳನ್ನು ಬಹಿರಂಗಪಡಿಸಲು ಕೇಳಿದಾಗ, ವೇದಿಕೆಯಲ್ಲಿ ಜೋರಾಗಿ ನಟಿ ಹೇಳಿದ್ದು ನೆರೆದಿದ್ದ ಎಲ್ಲರ ಉತ್ಸಾಹಕ್ಕೆ ಕಾರಣವಾಗಿದೆ.
ನಯನತಾರಾ ಮಕ್ಕಳ ಆರೈಕೆಗಾಗಿ ನಟನೆಯಿಂದ ದೂರ ಸರಿಯಲಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡಿದ್ದವು. ನಟನೆ ಹಾಗೂ ಮಕ್ಕಳ ಜವಾಬ್ದಾರಿ ಎರಡನ್ನು ನಿಭಾಯಿಸುವುದು ಕಷ್ಟವಾದ ಹಿನ್ನೆಲೆ ಮಕ್ಕಳ ಜೊತೆ ಸಮಯ ಕಳೆಯಲು ಕೆಲ ಕಾಲ ನಟಿ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಹರಿದಾಡಿತ್ತು.
ನಟ ಶಾರುಖ್ ಖಾನ್ ಜತೆ ನಯನತಾರಾ, ಜವಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದು, ಜೂನ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಕೂಡ ನಟಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Nayanthara: ಮೊದಲ ಬಾರಿ ಅವಳಿ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಯನತಾರಾ-ವಿಘ್ನೇಶ್
ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೇರವೇರಿತ್ತು. ಮಹಾಬಲಿಪುರಂನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಪಾಲ್ಗೊಂಡಿದ್ದರು. ಆರಂಭದಲ್ಲಿ ತಿರುಪತಿಯಲ್ಲಿ ವಿವಾಹವಾಗುವುದಾಗಿ ಈ ಜೋಡಿ ನಿರ್ಧಾರ ಮಾಡಿತ್ತು. ಈ ವಿವಾಹಕ್ಕೆ ಕೇವಲ ಆಪ್ತರು ಮತ್ತು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಟ, ನಟಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯಗಳನ್ನು ಕೋರಿದ್ದರು.