Site icon Vistara News

Actress Ramya: ಮೋಹಕ ತಾರೆ ರಮ್ಯಾ ಕನ್ನಡ ಸಿನಿಮಾ ಪಯಣಕ್ಕೆ ಈಗ 20 ವರ್ಷ

#image_title

ಬೆಂಗಳೂರು: 90ರ ದಶಕದ ಎಷ್ಟೋ ಮಂದಿಗೆ ಇಂದಿಗೂ ರಮ್ಯಾ (Actress Ramya) ಅತ್ಯಂತ ಪ್ರೀತಿಯ ನಾಯಕ ನಟಿ. ಮೋಹಕ ತಾರೆಗೆ ಮನಸೋಲದವರೇ ಇಲ್ಲ ಎಂದೂ ಹೇಳಬಹುದು. ಅದೆಷ್ಟೋ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಬೆಡಗಿ ರಮ್ಯಾ ಕನ್ನಡ ಚಂದನವನಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 20 ವರ್ಷಗಳು ತುಂಬಿವೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ನನ್ನ ಮೊದಲ ಚಿತ್ರ ಅಪ್ಪು ಅವರೊಂದಿಗಿನ ಅಭಿ ಬಿಡುಗಡೆಯಾಗಿ ಇಂದಿಗೆ 20 ವರ್ಷಗಳು. ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ಕಡೆಯಿಂದ ಇಲ್ಲಿಯವರೆಗೂ ನಾನು ಪಡೆದಿರುವ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ನನಗೆ ಅವಕಾಶ ಕೊಟ್ಟ ರಾಜ್‌ ಕುಟುಂಬಕ್ಕೆ ನಾನು ಸದಾ ಚಿರಋಣಿ ಮತ್ತು ನನ್ನ ಸುದೀರ್ಘ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ನಟಿ ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ಅಭಿ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗಿನ ತಮ್ಮ ನೃತ್ಯದ ಫೋಟೋ ಮತ್ತು ಡಾ.ರಾಜ್‌ಕುಮಾರ್‌ ಅವರಿಂದ ಆಶೀರ್ವಾದ ಪಡೆಯುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.


ಹಾಗೆಯೇ ನಟಿ ಅಭಿ ಚಿತ್ರದ ಚಿತ್ರೀಕರಣದ ವೇಳೆ ಸೈಂಟ್‌ ಜೋಸೆಫ್‌ ಕಾಲೇಜಿನಲ್ಲಿ ತೆಗೆಸಿಕೊಂಡಿರುವ ಫೋಟೊ ಮತ್ತು ಚಿತ್ರದ ಸಕ್ಸಸ್‌ ಪಾರ್ಟಿಯ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣವಾದ ನಂತರ ತಾವು ಬಿಕ್ಕಿ ಬಿಕ್ಕಿ ಅತ್ತಿದ್ದಾಗಿಯೂ ಹೇಳಿಕೊಂಡಿದ್ದಾರೆ. ಅಪ್ಪು ಎಂದೆಂದಿಗೂ ನನ್ನ ಮೊದಲ ಮತ್ತು ಅತ್ಯಂತ ಮೆಚ್ಚಿನ ಸ್ನೇಹಿತರಾಗಿ ಉಳಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ ನಟಿ ರಮ್ಯಾ.

ಇದನ್ನೂ ಓದಿ: Actess Ramya: ಬಿಜೆಪಿಯಿಂದ ಮಿನಿಸ್ಟರ್‌, ಕಾಂಗ್ರೆಸ್‌ನಿಂದ 6 ಕ್ಷೇತ್ರಗಳ ಆಫರ್‌; ಇದು ರಮ್ಯಾ ಬಿಚ್ಚಿಟ್ಟ ರಹಸ್ಯ
ನಟಿಯ ಈ ಪೋಸ್ಟ್‌ಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳು ಅಭಿ ಸಿನಿಮಾದಲ್ಲಿನ ರಮ್ಯಾ ಅವರ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ಆರಂಭಿಸಿದ್ದಾರೆ. ಹಾಗೆಯೇ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಿ ಎಂದೂ ಕೇಳಿಕೊಳ್ಳಲಾರಂಭಿಸಿದ್ದಾರೆ.

Exit mobile version