Site icon Vistara News

Actress Ramya | ಕಾಲಿವುಡ್‌ ನಟ ಧನುಷ್‌ ಜತೆ ಕಾಣಿಸಿಕೊಂಡ ಮೋಹಕ ತಾರೆ ರಮ್ಯಾ!

Actress Ramya

ಬೆಂಗಳೂರು: ನಟಿ ರಮ್ಯಾ (Actress Ramya ) ಅವರು ಈ ಹಿಂದ ಅಷ್ಟೇ ʻಉತ್ತರಕಾಂಡʼ ಸಿನಿಮಾ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಟ್ವೀಟ್‌ನಲ್ಲಿ ನಟ ಧನುಷ್‌ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಹದಿನೈದು ವರ್ಷಗಳ ಹಿಂದೆ ಧನುಷ್‌ ಜತೆಗೆ ನಟಿಸಿರುವ ʻಪೊಲ್ಲಾಧವನ್ʼ ಸಿನಿಮಾ ಕುರಿತು ಹೇಳಿಕೊಂಡಿದ್ದಾರೆ.

ʻಪೊಲ್ಲಾಧವನ್ʼ ಚಿತ್ರತಂಡದ ಜತೆ ಫೋಟೊಗಳನ್ನು ಹಂಚಿಕೊಂಡಿರುವ ರಮ್ಯಾ ಅವರು ʻʻಪೊಲ್ಲಾಧವನ್ ಸಿನಿಮಾಗೆ 15 ವರ್ಷ ಪೂರ್ಣಗೊಂಡಿದೆ. ಹಲವು ವರ್ಷಗಳ ನಂತರ ಈ ನೆನಪಿನಲ್ಲಿ ನನ್ನ ಸ್ನೇಹಿತನನ್ನು ಭೇಟಿಯಾದೆ. ಅಲ್ಲದೇ, ನಾನು ಮೆಚ್ಚುವ ಪ್ರತಿಭಾವಂತ ನಿರ್ದೇಶಕರನ್ನೂ ಭೇಟಿಯಾಗಿದ್ದು ಖುಷಿ ತಂದಿತು. ನಾನು ಈ ಟೀಮ್‌ನಿಂದ ಸಾಕಷ್ಟು ಕಲಿತಿದ್ದೇನೆ. ಈ ಸಿನಿಮಾ ನನಗೆ ತುಂಬಾ ವಿಷಯಗಳನ್ನು ಕಲಿಸಿದೆ. ನಾನು ʻಪೊಲ್ಲಾಧವನ್- 2ʼ ಚಿತ್ರಕ್ಕಾಗಿ ಕಾಯುತ್ತಿದ್ದೇನೆʼʼ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ |Actress Ramya | ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾಗೆ ರಮ್ಯಾ ಬೈ? ಹೊಸ ನಟಿಯ ಹೆಸರು ರಿವೀಲ್‌!

ಪೊಲ್ಲಾಧವನ್ ಚಿತ್ರತಂಡ ಇದೇ ಖುಷಿಗೆ ಕೇಕ್‌ ಕತ್ತರಿಸಿ ಸಂತಸವನ್ನು ಹಂಚಿಕೊಂಡಿದೆ. ರಮ್ಯಾ ಅವರ ಟ್ವೀಟ್‌ಗೆ ನಟ ಧನುಷ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Actress Ramya | ನಟಿ ರಮ್ಯಾಗಾಗಿ ಹಾಸ್ಟೆಲ್‌ ಹುಡುಗರ ಪ್ರತಿಭಟನೆ: ವೈರಲ್‌ ಆಯ್ತು ವಿಡಿಯೊ!

Exit mobile version