ಬೆಂಗಳೂರು: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್‌ಗೆ ನಿರ್ಬಂಧ ಕೋರಿ ನಟಿ ರಮ್ಯಾ (Actress Ramya) ನೋಟಿಸ್ ಜಾರಿ ಮಾಡಿದ್ದರು. ಆದರೀಗ ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದೆ. ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ನಾಳೆ (ಜು.21ರಂದು) ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಿದೆ ಕೋರ್ಟ್.
ಆಗಿದ್ದೇನು?
ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಈಗ ರಮ್ಯಾ ಅವರು ತಕರಾರು ತೆಗೆದಿದ್ದರು. ತನ್ನ ಒಪ್ಪಿಗೆ ಇಲ್ಲದೇ ಯಾವ ದೃಶ್ಯ ಬಳಸಬಾರದು ಎಂದು ತಡೆಯಾಜ್ಞೆ ನೀಡಿದ್ದರು. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೊ, ಸುದ್ದಿ ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಡಿಮ್ಯಾಂಡ್ ಮಾಡಿದ್ದರು. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟಿಸ್ನಲ್ಲಿ ಒತ್ತಾಯಿಸಿದ್ದರು. ಈ ಸಂಬಂಧ ಕಮರ್ಶಿಯಲ್ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಆದರೀಗ ಹಾಸ್ಟೆಲ್ ಹುಡುಗರ ಪರ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾಸ್ಟೆಲ್ ಹುಡುಗರ ಪರ ಲಾಯರ್ ವೇಲನ್ ವಾದ ಮಂಡಿಸಿದ್ದರು. ಜುಲೈ 21ರಂದು ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಿದೆ. ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದೆ ಕೋರ್ಟ್.
ಇದನ್ನೂ ಓದಿ: Actress Ramya: ಹಾಸ್ಟೆಲ್ ಹುಡುಗರು ಸಿನಿಮಾ ವಿರುದ್ಧ ರಮ್ಯಾ ಕೇಸ್; ಅಪ್ಪು ಸರ್ ಆಶೀರ್ವಾದ ಇದೆ ಎಂದ ನಿರ್ಮಾಪಕ
ಸಿನಿಮಾಗೆ ಹಲವು ಕಲಾವಿದರಿಂದ ಸಾಥ್
ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನವಿದೆ.
ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜತೆಗೆ ಸೇರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.