Site icon Vistara News

Actress Samantha: ಪುಷ್ಪಾ 2 ಸಿನಿಮಾದಲ್ಲಿ ಸಮಂತಾ ನಟಿಸಲ್ವಂತೆ! ಚಿತ್ರತಂಡ ಮಾಡಿದ್ದೇನು?

#image_title

ಹೈದರಾಬಾದ್: ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ- ದಿ ರೈಸ್’ ಸಿನಿಮಾದಲ್ಲಿ ನಟಿ ಸಮಂತಾ (Actress Samantha) ಒಂದೇ ಹಾಡಿನ ಮೂಲಕ ಫೇಮಸ್ ಆದವರು. ‘ಉ ಅಂಟಾವಾ ಮಾವ ಉಹೂಂ ಅಂಟಾವಾ’ ಎನ್ನುತ್ತಾ ಹೆಜ್ಜೆ ಹಾಕಿದ ಅವರ ನೃತ್ಯ ಸಿನಿಮಾ ಬಿಡುಗಡೆಗೂ ಮೊದಲೇ ಟ್ರೆಂಡ್ ಆಗಿತ್ತು. ಹಾಗಾಗಿ ಸಮಂತಾ ಪುಷ್ಪಾ 2 ಅಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಇದೀಗ ನಟಿ ಪುಷ್ಪಾ 2 ಅಲ್ಲಿ ನಟಿಸಲು ಒಪ್ಪಿಗೆ ನೀಡಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: Actress Samantha : ಪತಿಯಿಂದ ದೂರವಾಗಿರುವ ಸಮಂತಾಗೆ ಬಂತು ಪ್ರೇಮಿಗಳ ದಿನದ ಗಿಫ್ಟ್! ಯಾರು ಕಳುಹಿಸಿದ್ದು?
ಪುಷ್ಪಾದಲ್ಲಿ ನಟಿಗೆ ಸಿಕ್ಕ ಪ್ರಶಂಸೆ ನೋಡಿದ ನಿರ್ದೇಶಕ ಸುಕುಮಾರ್ ಅವರು ಪುಷ್ಪಾ 2 ಅಲ್ಲಿ ಸಮಂತಾಗೋಸ್ಕರ ಒಂದು ವಿಶೇಷ ಪಾತ್ರವನ್ನೂ ಪರಿಚಯಿಸಿದ್ದಾರಂತೆ. ಆದರೆ ನಟಿ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪುತ್ತಿಲ್ಲವಂತೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಬಿಜಿ ಇರುವ ಅವರು ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲವಂತೆ. ಆದರೆ ಪಟ್ಟು ಬಿಡದ ಚಿತ್ರತಂಡ ನಟಿಯನ್ನು ಒಪ್ಪಿಸುವುದಕ್ಕೆ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ.

ಪುಷ್ಪಾ ಸಿನಿಮಾದಲ್ಲಿ ನಟಿಸುವುದಕ್ಕೆ ಸಮಂತಾರನ್ನು ಅಲ್ಲು ಅರ್ಜುನ್ ಒಪ್ಪಿಸಿದ್ದರು. ಕೇವಲ 3 ನಿಮಿಷಗಳ ಹಾಡಿಗಾಗಿ ಸಮಂತಾ 5 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದರು ಎನ್ನುವ ವರದಿಯಿದೆ. ಸಿನಿಮಾದ ಯಶಸ್ಸಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, “ಈ ಹಾಡು ಇಷ್ಟೊಂದು ಹಿಟ್ ಆಗುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ” ಎಂದು ತಮ್ಮ ಸಂತೋಷವನ್ನು ಹೊರಹಾಕಿದ್ದರು.

Exit mobile version