ಹೈದರಾಬಾದ್: ದಕ್ಷಿಣ ಭಾರತದ ನಟಿ ಸಮಂತಾ (Actress Samantha) ಅವರು ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದು ಒಬ್ಬಂಟಿ ಬದುಕು ಬದುಕುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ. ಅದೇ ಕಾರಣಕ್ಕೆ ಎಷ್ಟೋ ಅಭಿಮಾನಿಗಳು ನಟಿಗೆ ಮತ್ತೆ ಮದುವೆಯಾಗಿ ಎನ್ನುವ ಸಲಹೆಯನ್ನೂ ನೀಡುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ಅಭಿಮಾನಿಯೊಬ್ಬರು ಸಮಂತಾಗೆ ಯಾರನ್ನಾದರೂ ಪ್ರೀತಿಸಿ ಎಂದು ಹೇಳಿದ್ದು, ಅದಕ್ಕೆ ನಟಿ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ: Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?
ಶ್ರಾವಂತಿ ಎನ್ನುವವರು ಟ್ವಿಟರ್‌ನಲ್ಲಿ ಸಮಂತಾ ಅವರ ಹಳೆಯದೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ, “ನಾನು ಹೇಳುವ ಸ್ಥಾನದಲ್ಲಿಲ್ಲ ಎನ್ನುವುದು ನನಗೆ ಗೊತ್ತು. ಆದರೆ ದಯವಿಟ್ಟು ಯಾರನ್ನಾದರೂ ಪ್ರೀತಿಸಿ” ಎಂದು ಅವರು ಬರೆದುಕೊಂಡಿದ್ದಾರೆ. ಆ ಟ್ವೀಟ್ ಅನ್ನು ಗಮನಿಸಿರುವ ನಟಿ, “ನಿಮ್ಮನ್ನು ನನ್ನನ್ನು ಯಾರು ಪ್ರೀತಿಸುತ್ತಾರೆ” ಎಂದು ಕೇಳಿದ್ದಾರೆ.
ನಟಿಯ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನೀವೇನಾದರೂ ಅಪ್ಲಿಕೇಶನ್ ಹಾಕಿ ಎಂದು ಕೇಳುತ್ತಿದ್ದೀರಾ?”, “ನಿಮ್ಮನ್ನು ನಮಗಿಂತ ಹೆಚ್ಚಾಗಿ ಪ್ರೀತಿಸುವವರು ಯಾರಾದರೂ ಸಿಕ್ಕೇ ಸಿಗುತ್ತಾರೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ನಟಿಯ ಪ್ರತಿಕ್ರಿಯೆಗೆ ಬಂದಿವೆ.