Site icon Vistara News

Actress Sayyeshaa | ಮೊದಲ ಬಾರಿ ಮಗಳ ಫೋಟೊ ರಿವೀಲ್‌ ಮಾಡಿದ ನಟಿ ಸಯೇಶಾ!

Actress Sayyeshaa

ಬೆಂಗಳೂರು : ನಟ ಆರ್ಯ ಮತ್ತು ಸಯೇಶಾ (Actress Sayyeshaa ) ಕಾಲಿವುಡ್‌ನ ಬೆಸ್ಟ್‌ ಜೋಡಿ. ‘ಯುವರತ್ನ’ ಸಿನಿಮಾದಲ್ಲಿ ಮಿಂಚಿದ ಸಯೇಶಾ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪತಿ ಆರ್ಯ ಅವರ ಜನುಮದಿನದಂದು ಮಗಳನ್ನು ಪರಿಚಯಿಸಿದ್ದಾರೆ ನಟಿ. ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಯೇಶಾ ಕಳೆದ ವರ್ಷ ಜುಲೈ ನಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಆದರೆ ಎಲ್ಲಿಯೂ ಕೂಡ ಮಗಳ ಮುಖವನ್ನು ಪರಿಚಯ ಮಾಡಿಸಿರಲಿಲ್ಲ. ಇದೀಗ ಪತಿ ಆರ್ಯ ಅವರ ಹುಟ್ಟು ಹಬ್ಬಕ್ಕೆ ಮಗಳ ಫೋಟೊ ರಿವೀಲ್‌ ಮಾಡಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಪ್ರೀತಿಸಿ, 2019ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಸಯೇಶಾ ಮತ್ತು ಆರ್ಯ.

ಇದನ್ನೂ ಓದಿ | Actor Dhanush | ಕಾಲಿವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ: ಧನುಷ್‌ ನಟನೆಯ ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಸ್ಕ್ರೀನ್ ಶೇರ್!

ಮಗಳಿಗೆ ಅರಿಯಾನಾ ಎಂದು ಹೆಸರು ಇಟ್ಟಿದ್ದಾರೆ.ಒಂದೂವರೇ ವರ್ಷದ ಅರಿಯಾನಾ ಆರ್ಯ ಮತ್ತು ಸಯೇಶಾ ತೋಳಲ್ಲಿ ಇರುವ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಸಯೇಶಾ ಎಲ್ಲಿಯೂ ಗರ್ಭಿಣಿಯಾದ ಬಗ್ಗೆ ಮತ್ತು ಮಗುವಿಗೆ ಜನ್ಮ ನೀಡಿದ ಬಗ್ಗೆ ಬಹಿರಂಗ ಪಡಿಸಿಲ್ಲ. 

ಇದನ್ನೂ ಓದಿ | Sarath Kumar | ಕಾಲಿವುಡ್‌ ನಟ ಶರತ್‌ಕುಮಾರ್‌ ಆಸ್ಪತ್ರೆಗೆ ದಾಖಲು

Exit mobile version