ಬೆಂಗಳೂರು: ನಟಿ ತ್ರಿಶಾ (Actress Trisha) ಅವರು ಮಣಿರತ್ನಂ ನಿರ್ದೇಶನದ ʻಪೊನ್ನಿಯನ್ ಸೆಲ್ವನ್ʼ ಚಿತ್ರದ ಕುಂದವೈ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಂಡಿತು. ಇದೀಗ ಕಾಲಿವುಡ್ ನಟ ದಳಪತಿ ವಿಜಯ್ ಜತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. 14 ವರ್ಷಗಳ ನಂತರ ದಳಪತಿ ವಿಜಯ್ ಹಾಗೂ ತ್ರಿಶಾ ಅವರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ʻಗಿಲ್ಲಿʼ, ʻಕುರುವಿʼ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ವಿಜಯ್ ಮತ್ತು ತ್ರಿಶಾ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ, ಇಬ್ಬರ ಅಭಿಮಾನಿಗಳಿಗೂ ಸಖತ್ ಥ್ರಿಲ್ ಆಗಿದ್ದಾರೆ. ಕಮಲ್ ಹಾಸನ್ ನಟನೆಯ ʻವಿಕ್ರಮ್’ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ವಿಜಯ್ ಅವರ ಮುಂದಿನ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ನಟಿ ತ್ರಿಶಾ ಅವರನ್ನೇ ನಾಯಕಿಯಾಗಿ ನಟಿಸಲು ಕೇಳಲಾಗಿದೆಯಂತೆ. ಸಿನಿಮಾಗೆ ತ್ರಿಶಾ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Actress Trisha | ನಟಿ ತ್ರಿಶಾ ಕಾಲಿಗೆ ಏನಾಯ್ತು? ಫಾರಿನ್ ಟ್ರಿಪ್ ಕ್ಯಾನ್ಸಲ್!
ಬ್ರೇಕ್ ತೆಗೆದುಕೊಂಡಿದ್ದ ತ್ರಿಶಾ!
ನಟಿ ತ್ರಿಶಾ ತಮ್ಮ ʻರಾಮ್ʼ ಸಿನಿಮಾ ಚಿತ್ರೀಕರಣಕ್ಕಾಗಿ ಬ್ರಿಟನ್‌ನಲ್ಲಿದ್ದರು. ನಟ ಮೋಹನ್ಲಾಲ್ ಜತೆಗಿನ ಸಿನಿಮಾ ಶೂಟಿಂಗ್ ಮುಗಿಸಿ ನಟಿ ವೆಕೇಶನ್ ಎಂಜಾಯ್ ಮಾಡಿದ್ದರು. ಬಳಿಕ ಪ್ರವಾಸದಲ್ಲಿದ್ದ ತ್ರಿಶಾ ಅವರು ಏಕಾಏಕಿ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದರು. ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿದ ತ್ರಿಶಾ ಅವರು ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರು.
ಇದನ್ನೂ ಓದಿ | MS Dhoni | ದಳಪತಿ ವಿಜಯ್ ಜತೆ ಕೂಲ್ ಕ್ಯಾಪ್ಟನ್ ಇನ್ನೊಂದು ಇನಿಂಗ್ಸ್