Site icon Vistara News

Actress Trisha | ನಟಿ ತ್ರಿಶಾ ಕಾಲಿಗೆ ಏನಾಯ್ತು? ಫಾರಿನ್ ಟ್ರಿಪ್ ಕ್ಯಾನ್ಸಲ್!

Actress Trisha

ನಟಿ ತ್ರಿಶಾ ಅವರು ಮಣಿರತ್ನಂ ನಿರ್ದೇಶನದ ʻಪೊನ್ನಿಯನ್‌ ಸೆಲ್ವನ್‌ʼ ಚಿತ್ರದ ಕುಂದವೈ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಂಡಿತು. ‌

ಇದನ್ನೂ ಓದಿ | Upcoming Movies 2022 | ನವರಾತ್ರಿ ಸ್ಪೆಷಲ್‌ : ಒಂದೇ ದಿನ ಮೂರು ದೊಡ್ಡ ಚಿತ್ರಗಳು ರಿಲೀಸ್‌!

ನಟಿ ತ್ರಿಶಾ ತಮ್ಮ ʻರಾಮ್ʼ ಸಿನಿಮಾ ಚಿತ್ರೀಕರಣಕ್ಕಾಗಿ ಯುಕೆಯಲ್ಲಿದ್ದರು. ನಟ ಮೋಹನ್​ಲಾಲ್ ಜತೆಗಿನ ಸಿನಿಮಾ ಶೂಟಿಂಗ್ ಮುಗಿಸಿ ನಟಿ ವೆಕೇಶನ್ ಎಂಜಾಯ್ ಮಾಡಿದ್ದರು. ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿ ಫಾರಿನ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿದ್ದಾರೆ.

ಐಸ್ ಪ್ಯಾಕ್ ತಮ್ಮ ಕಾಲಿಗೆ ಇಟ್ಟು ʻʻನಿಮ್ಮ ಸಕ್ಸೆಸ್ ಪಾರ್ಟಿಗಳಲ್ಲಿ ಕಾಲಿಗೆ ಪೆಟ್ಟದಾಗ ಕುಣಿಯಬೇಡಿʼʼ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ತ್ರಿಷಾ ಫ್ಯಾನ್ಸ್ ಆದಷ್ಟು ಬೇಗ ಗುಣಮುಖರಾಗಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದೀಗ ನಟಿ ವೆಕೇಶನ್‌ ಮುಗಿಸುವ ಮೊದಲೆ ವಾಪಸ್ ಹಿಂತಿರುಗಿದ್ದಾರೆ. ಪ್ರವಾಸದಲ್ಲಿದ್ದ ತ್ರಿಶಾ ಅವರು ಏಕಾಏಕಿ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತ್ರಿಶಾ ತೆಲುಗಿನಲ್ಲಿ ನಟಿಸಿರಲಿಲ್ಲ. ಕಾಲಿವುಡ್ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿದ್ದರು.

ಇದನ್ನೂ ಓದಿ | Ponniyin Selvan: I | ಮಾರುಕಟ್ಟೆಗೆ ಬಂತು ಪೊನ್ನಿಯನ್ ಸೆಲ್ವನ್ ಥೀಮ್ ರೇಷ್ಮೆ ಸೀರೆಗಳು!

Exit mobile version