ಬೆಂಗಳೂರು: ಆದಿಪುರುಷ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ (Adipurush Movie) ಹಿನ್ನೆಲೆಯಲ್ಲಿ (Adipurush New Trailer) ಟಾಲಿವುಡ್ ನಟ ಪ್ರಭಾಸ್, ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಜೂನ್ 6ರಂದು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಿರ್ದೇಶಕ ಓಂ ರಾವತ್ ಹಾಗೂ ಕೃತಿ ಸನೂನ್ ಕೂಡ ಭಾಗಿಯಾಗಿದ್ದರು. ನಿರ್ದೇಶಕ ಓಂ ರಾವತ್ ಹಾಗೂ ಸೀತೆ ಪಾತ್ರ ಮಾಡಿದ ನಟಿ ಕೃತಿ ಸನೂನ್ ದೇವಸ್ಥಾನದಿಂದ ಮರಳುವಾಗ ಇಬ್ಬರೂ ಕಿಸ್ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ. ಇಬ್ಬರೂ ಟೀಕೆಗೆ ಗುರಿಯಾಗಿದ್ದಾರೆ. ದೇವಸ್ಥಾನದಲ್ಲಿ ಈ ರೀತಿಯ ನಡುವಳಿಕೆ ತಪ್ಪು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ತಿರುಪತಿಯ ಶ್ರೀ ವೆಂಕಟೇಶ್ವರ ಯೂನಿವರ್ಸಿಟಿ ಸ್ಟೇಡಿಯಂನಲ್ಲಿ ನಡೆದ ಪ್ರಿ-ರಿಲೀಸ್ ಸಮಾರಂಭದಲ್ಲಿ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ ಚಿತ್ರತಂಡ ಕೊನೇಯ ಟ್ರೈಲರ್ ಬಿಡುಗಡೆ ಮಾಡಿತು. ಕಾರ್ಯಕ್ರಮದಲ್ಲಿ ಪ್ರಭಾಸ್ ಮತ್ತು ಕೃತಿ ಉಪಸ್ಥಿತರಿದ್ದರು.
ಆದರೆ, ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿಗ ಓಂ ರಾವುತ್ ಮತ್ತು ಕೃತಿ ಸನೂನ್ ಒಬ್ಬರಿಗೊಬ್ಬರು ಹಗ್ ಹಾಗೂ ಕಿಸ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಓಂ ರಾವುತ್ ಕೃತಿಗೆ ತನ್ನ ಕಾರಿನಲ್ಲಿ ಹೋಗುವಾಗ ಕೆನ್ನೆಗೆ ಮುತ್ತು ನೀಡಿ ಬೀಳ್ಕೊಟ್ಟಿದ್ದಾರೆ. ಈ ಬಗ್ಗೆ ಇದು ಆಂಧ್ರಪ್ರದೇಶದ ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: Adipurush Movie: ಆದಿಪುರುಷ್ ಪ್ರೀ ರಿಲೀಸ್ ಈವೆಂಟ್; ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್
Tirumala, Andhra Pradesh:Pecks & flying kiss in TTD premises by Adipurush Actress Kriti Sanon and Director Om Raut.#KritiSanon #OmRaut #TirumalaTemple pic.twitter.com/S7XlCDyrKW
— rajni singh (@imrajni_singh) June 8, 2023
“ನಿಮ್ಮ ಇಂತಹ ವರ್ತನೆಗಳನ್ನು ಪವಿತ್ರ ಸ್ಥಳದಲ್ಲಿ ಮಾಡುವುದು ನಿಜವಾಗಿಯೂ ಅಗತ್ಯವಿದೆಯೇ? ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಚುಂಬಿಸುವುದು ಮತ್ತು ಅಪ್ಪಿಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆ ಅಗೌರವ ಮತ್ತು ಸ್ವೀಕಾರಾರ್ಹವಲ್ಲʼʼ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ಟ್ವೀಟ್
ಜೂನ್ 16ಕ್ಕೆ ಆದಿಪುರುಷ್ ರಿಲೀಸ್
ಓಂ ರಾವತ್ ನಿರ್ದೇಶನದ ಆದಿಪುರುಷ್ ಚಿತ್ರದಲ್ಲಿ ನಟ ಪ್ರಭಾಸ್ ರಾಮನಾಗಿ ನಟಿಸಿದ್ದಾರೆ, ಕೃತಿ ಸನೂನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿಭಾಯಿಸಿದ್ದಾರೆ. ಆದಿಪುರುಷದ ಟೀಸರ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಆದರೆ ವಿಎಫ್‌ಎಕ್ಸ್ ಕುರಿತಾಗಿ ನೆಗೆಟಿವ್ ಪ್ರತಿಕ್ರಿಯೆಯನ್ನು ಪಡೆಯಿತು. ಜೂನ್ 16ರಂದು ಸಿನಿಮಾ ತೆರೆ ಕಾಣುತ್ತಿದ್ದು, ದೊಡ್ಡ ಪರದೆಯಲ್ಲಿ ‘ಆದಿಪುರುಷ್’ (Adipurush) ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ.
ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಸಿನಿಮಾದ ಮೊದಲನೇ ಹಾಡಾಗಿ ಜೈ ಶ್ರೀ ರಾಮ್ ಹಾಡನ್ನು ಬಿಡುಗಡೆ ಮಾಡಲಾಗಿತ್ತು.