ಬೆಂಗಳೂರು: ಇಂದು ಮುಂಜಾನೆಯಿಂದಲೇ ವಿಶ್ವದಾದ್ಯಂತ ಪ್ಯಾನ್ ಇಂಡಿಯಾ ಸಿನಿಮಾ ʼಆದಿಪುರುಷ್ʼ (Adipurush Movie) ತೆರೆ ಕಂಡಿದೆ. ಬೆಂಗಳೂರಿನಲ್ಲಿ ಹಲವು ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭ ಆಗಿದೆ.
ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಅಭಿನಯಿಸಿರುವ ಸಿನಿಮಾ ಕಾವೇರಿ, ಪ್ರಸನ್ನ, ವೀರೇಶ್, ಊರ್ವಶಿ, ಭೂಮಿಕಾ ಸೇರಿದಂತೆ ಹಲವು ಥೀಯೇಟರ್‌ಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಪಿವಿಆರ್, ಐನಾಕ್ಸ್ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲೂ ತೆರೆದುಕೊಂಡಿದೆ. 2ಡಿ ಮತ್ತು 3ಡಿ ವರ್ಷನ್‌ಗಳಲ್ಲಿ ಈ ಸಿನಿಮಾ ತೆರೆಗೆ ಬಂದಿದೆ.
ಬೆಂಗಳೂರಿನಲ್ಲಿ ಸಿನಿಮಾಗೆ ಭರ್ಜರಿ ಶೋಗಳು ಸಿಕ್ಕಿದೆ. ʼಆದಿಪುರುಷ್’ ತೆಲುಗು ಆವೃತ್ತಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸಿನಿಮಾದ ತೆಲುಗು ವರ್ಷನ್‌ಗೆ ಸುಮಾರು 400ಕ್ಕೂ (2ಡಿ+3ಡಿ) ಅಧಿಕ ಶೋಗಳು ಸಿಕ್ಕಿದ್ದು, ಕನ್ನಡ ವರ್ಷನ್‌ಗೆ 25+ ಶೋಗಳು ಮಾತ್ರ ದೊರೆತಿವೆ. ಹಿಂದಿ ವರ್ಷನ್‌ಗೆ ಕನ್ನಡಕ್ಕಿಂತ ಅಧಿಕ, 50+ ಶೋ ಸಿಕ್ಕಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್‌ಗೆ ಜಾಸ್ತಿ ಶೋ ನೀಡಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.
ʼಆದಿಪುರುಷ್’ ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಪಡೆದುಕೊಂಡಿದ್ದಾರೆ. ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಅದ್ಧೂರಿ ಪ್ರೀಮಿಯರ್ ಶೋವನ್ನು ಹಂಚಿಕೆದಾರರು ಆಯೋಜಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ 100 ಕೋಟಿ ವ್ಯಾಪಾರ ಮಾಡಿ ಆದಿಪುರುಷ್ ದಾಖಲೆ ಮಾಡಿತ್ತು.
ಬೆಂಗಳೂರಿನ ಕಾವೇರಿ ಥೀಯೇಟರ್‌ನಲ್ಲಿ ಆದಿಪುರುಷ್ ತೆಲುಗು ವರ್ಷನ್‌ಗೆ ಇಂದು 5 ಶೋ ಸಿಕ್ಕಿದೆ. ನಾಲ್ಕು ಶೋ ತೆಲುಗು, ಒಂದು ಶೋ ಹಿಂದಿ ವರ್ಷನ್. ಹೆಚ್ಚಿನ ಕನ್ನಡಿಗರು ತೆಲುಗು ವರ್ಷನ್ ಆದಿಪುರುಷ್ ನೋಡಲು ಥಿಯೇಟರ್‌ಗೆ ಆಗಮಿಸಿದ್ದಾರೆ. ಸದ್ಯ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಿನಿಮಾ ನೋಡಲು ಆಗಮಿಸಿದ್ದಾರೆ.
ಇದನ್ನೂ ಓದಿ: Adipurush Movie : ಆದಿಪುರುಷ ಸಿನಿಮಾ ಬಿಡುಗಡೆಗೆ ಮೊದಲೇ 4.7 ಲಕ್ಷ ಟಿಕೆಟ್ ಮಾರಾಟ! ಹೊಸ ದಾಖಲೆ?