Site icon Vistara News

Wedding Fashion | ಅರಿಶಿಣ ಶಾಸ್ತ್ರದಲ್ಲಿ ಶಕುಂತಲೆಯಂತೆ ಕಂಡ ಅದಿತಿ; ಫ್ಯಾಷನ್ ರೂವಾರಿ ಯಾರು?

wedding Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುಮಗಳಾಗಿರುವ ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ತಮ್ಮ ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಶ್ವೇತಧಾರಿಣಿಯಾಗಿದ್ದು, ಥೇಟ್ ಶಕುಂತಲೆಯಂತೆ (Wedding Fashion) ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರಿಶಿಣ ಶಾಸ್ತ್ರಕ್ಕೆ ಹೊಂದುವಂತಹ ಶ್ವೇತ ವರ್ಣದ ಮಧ್ಯೆ ಮಧ್ಯೆ ಗೋಲ್ಡನ್ ಬೂಟಾ ಇರುವ ಸೀರೆ, ಆಫ್ ಶೋಲ್ಡರ್ ಕ್ವೀನ್ ಸ್ಟೈಲ್ ನ ಬ್ಲೌಸ್ ಧರಿಸಿರುವ ಅದಿತಿ, ಫ್ಲೋರಲ್ ಕಿವಿಯೊಲೆ, ಮಾಂಗ್ಟೀಕಾ, ನೆಕ್ಲೇಸ್, ಬ್ರೇಸ್ಲೇಟ್ ಧರಿಸಿದ್ದರು. ಹೀಗಾಗಿ ಥೇಟ್ ಶಕುಂತಲೆಯೇ ಧರೆಗೆ ಇಳಿದು ಬಂದಂತೆ ಕಾಣಿಸುತ್ತಿದ್ದಾರೆ ಎಂಬುದಾಗಿ ಸ್ಟೈಲಿಸ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ, ಸುಂದರ ಬೊಂಬೆಯಂತೆ ಕಾಣುತ್ತಿರುವ ಅದಿತಿ ಮೊದಲಿನಿಂದಲೂ ಡೀಸೆಂಟ್ ಫ್ಯಾಷೆನಬಲ್ ನಟಿ. ಟ್ರೆಡಿಷನಲ್ ಔಟ್‌ಫಿಟ್‌fಗಳಲ್ಲಿ ಮಾತ್ರವಲ್ಲ, ವೆಸ್ಟರ್ನ್ ಉಡುಪಿನಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡವರು. ಮಿನಿಮಲ್ ಮೇಕಪ್ ಹಾಗೂ ಟ್ರೆಂಡಿ ಔಟ್‌ಫಿಟ್‌ಗಳ ಮುಖಾಂತರ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಫ್ಯಾಷನ್ ಪ್ರೇಮಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಅರಿಶಿಣ ಶಾಸ್ತ್ರಕ್ಕೆ ಮನಮೋಹಕ ಸ್ಟೈಲಿಂಗ್

ಕಾರ್ಯಕ್ರಮದಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿರುವ ಅದಿತಿ ಪ್ರಭುದೇವ ಅವರ ಮೇಕಪ್ ಕೂಡ ಮಿನಿಮಲ್ ಆಗಿದ್ದು, ಟ್ರೆಡಿಷನಲ್ ಸಿಂಪಲ್ ಸೀರೆಯಲ್ಲೂ ಮನಮೋಹಕವಾಗಿ ಕಾಣಿಸುತ್ತಿದ್ದಾರೆ. ಈಗಾಗಲೇ ಅರಿಶಿಣ ಶಾಸ್ತ್ರದ ಈ ಫೋಟೋಗಳು ಈಗಾಗಲೇ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆ ಪಡೆದಿವೆ.

ಇನ್ನು ಅವರಿಗೆ ಸ್ಟೈಲಿಂಗ್ ಮಾಡಿರುವ ಕ್ರೆಡಿಟ್ ಸೆಲೆಬ್ರಿಟಿ ಸ್ಟೈಲಿಸ್ಟ್ ಚಂದನ್ ಗೌಡ ಅವರಿಗೆ ಸಲ್ಲುತ್ತದೆ. ಇನ್ನು ಮೇಕಪ್ ಆರ್ಟಿಸ್ಟ್ ಪ್ರಿಯಾಂಕಾ ಹರೀಶ್ ಎಂದಿನಂತೆ ಮನಮೋಹಕವಾಗಿ ಅವರಿಗೆ ಮೇಕಪ್ ಮಾಡಿದ್ದಾರೆ. ಇದರೊಂದಿಗೆ ಅವರ ನ್ಯಾಚುರಲ್ ಮುಗುಳ್ನಗೆ ಕೂಡ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್ ಪ್ರೇಮಿಯೊಬ್ಬರು.

ಟ್ರೆಡಿಷನಲ್ ವೇರ್ ನಲ್ಲಿ ಮಿಂಚುವ ಅದಿತಿ ಪ್ರಭುದೇವ

ಸೆಲೆಬ್ರಿಟಿ ಫ್ಯಾಷನಿಸ್ಟಾ ಪ್ರತಿಭಾ ಅವರ ಪ್ರಕಾರ, ಅದಿತಿ ಸೌಂದರ್ಯದ ಖನಿ. ಅವರ ಒಂದೊಂದು ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ ಮೆಂಟ್‌fಗಳು ಆಯಾ ಸನ್ನಿವೇಶ ಹಾಗೂ ಸಮಾರಂಭಕ್ಕೆ ಹೊಂದುವಂತಿರುತ್ತವೆ. ಎಲ್ಲಿಯೂ ಗಡಿರೇಖೆ ದಾಟುವುದಿಲ್ಲ. ಅದು ಅವರ ಹೆಗ್ಗಳಿಕೆ. ಇನ್ನು ಅವರ ಫ್ಯಾಷನ್ ಫಾಲೋ ಮಾಡುವ ಅಭಿಮಾನಿಯೊಬ್ಬರು ಹೇಳುವಂತೆ, ಅವರ ಮದುವೆ ಟ್ರೆಡಿಷನಲ್‌ವೇರ್‌ಗಳನ್ನು ನೋಡಲು ಕಾತರರಾಗಿದ್ದೇವೆ. ಟ್ರೆಡಿಷನಲ್‌ವೇರ್‌ನಲ್ಲಿ ಅವರನ್ನು ನೋಡುವುದೇ ಒಂದು ಖುಷಿ ಎಂದಿದ್ದಾರೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ |Aditi Prabhudeva | ಅರಿಶಿಣ ಶಾಸ್ತ್ರದ ಫೋಟೊ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

Exit mobile version