Site icon Vistara News

Actor Rajinikanth: 32 ವರ್ಷಗಳ‌ ನಂತರ ಒಂದಾದ ರಜಿನಿ- ಬಚ್ಚನ್! ಮತ್ತೊಂದು ಸಾಹಸಕ್ಕೆ ಕೈ ಹಾಕಿದ ಲೈಕಾ

After 32 years Rajini-Big B share screen

ಬೆಂಗಳೂರು: ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ (Actor Rajinikanth) ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್, ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್‌, ಸೂಪರ್ ಸ್ಟಾರ್ ರಜನಿಕಾಂತ್ ಜತೆ ಮತ್ತೆ ಕೈ ಜೋಡಿಸಿದೆ. ರಜನಿಕಾಂತ್‌ ಅವರ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜತೆ ಬಾಲಿವುಡ್ ನಟ ಅಮಿತಾಭ್‌ ಬಚ್ಚನ್ ಕೂಡ ನಟಿಸುತ್ತಿದ್ದಾರೆ.

ರಜನಿಕಾಂತ್ ಹಾಗೂ ಅಮಿತಾಭ್‌ ಭಚ್ಚನ್‌ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ರಜನಿ ಹಾಗೂ ಅಮಿತಾಭ್‌ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು.

ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಣ ಹಾಕುತ್ತಿದೆ. ಬಹಳ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಪ್ರಾಜೆಕ್ಟ್ ಮುಂದಿನ ತಿಂಗಳ ಅಂತ್ಯಕ್ಕೆ ಸೆಟ್ಟೇರಲಿದೆ.

ಲೈಕಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಜೈಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್, ರಜನಿ ಹಾಗೂ ಬಚ್ಚನ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Jailer Release Date: ರಜನಿಕಾಂತ್‌ ನಟನೆಯ ʻಜೈಲರ್‌ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌: ಹೇಗಿದೆ ಪ್ರೊಮೊ?

ಆಗಸ್ಟ್‌ 10ರಂದು ತೆರೆ ಕಾಣಲಿದೆ ಜೈಲರ್‌

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ ಪಿಕ್ಚರ್ಸ್ ಬೆಂಬಲದೊಂದಿಗೆ ಮೂಡಿ ಬರುತ್ತಿರುವ ಜೈಲರ್ ಸಿನಿಮಾ ವಿಶ್ವಾದ್ಯಂತ ಆಗಸ್ಟ್‌ 10ರಂದು ತೆರೆ ಕಾಣುತ್ತಿದೆ. ಜೈಲರ್ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ʻಪೆಟ್ಟಾʼ, ʻದರ್ಬಾರ್ʼ ಬಳಿಕ ಮೂರನೇ ಬಾರಿಗೆ ರಜನಿಕಾಂತ್ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶವನ್ನು ಅನಿರುದ್ಧ್‌ ಗಿಟ್ಟಿಸಿಕೊಂಡಿದ್ದಾರೆ.

ರಜನಿಕಾಂತ್ ಮತ್ತು ಶಿವರಾಜಕುಮಾರ್ ಅವರ ಭಾಗವಾಗಿ, ಜೈಲರ್ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ನಟಿಸಲಿದ್ದಾರೆ. ವಸಂತ ರವಿ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜಿನಿಕಾಂತ್ ಪ್ರಸ್ತುತ, ಐಶ್ವರ್ಯಾ ರಜನಿಕಾಂತ್ ಅವರ ಚಿತ್ರ ʻಲಾಲ್ ಸಲಾಮ್ʼ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಜನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Exit mobile version