ಬೆಂಗಳೂರು: ನಟಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ಅವರು ತಂದೆ ಕೃಷ್ಣರಾಜ್ ರೈ ಅವರ ಜನ್ಮ ದಿನದಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಮೂರು ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ನಟಿ ಅರಾಧ್ಯ ಚಿಕ್ಕವಳಿದ್ದಾಗ ತಾತನ ಜತೆ ಇರುವ, ಇನ್ನೊಂದು ಐಶ್ವರ್ಯಾ ಅವರು ತಂದೆ ಜತೆ ಇರುವ ಮತ್ತು ಮೂರನೇಯದರಲ್ಲಿ ಐಶ್ವರ್ಯಾ, ಅವರ ತಾಯಿ ವೃಂದಾ ರೈ, ಆರಾಧ್ಯ, ಹಾಗೂ ಕೃಷ್ಣರಾಜ್ ಅವರ ಭಾವಚಿತ್ರದ ಮುಂದೆ ಸೆಲ್ಫಿ ತೆಗೆದುಕೊಂಡಿರುವ ಫೋಟೊ ಹಂಚಿಕೊಂಡಿದ್ದಾರೆ. 2017ರಲ್ಲಿ ಕೃಷ್ಣರಾಜ್ ರೈ ನಿಧನರಾಗಿದ್ದಾರೆ.
ಐಶ್ವರ್ಯಾ ರೈ ಪೋಸ್ಟ್ ಜತೆಗೆ ʻʻಅಪ್ಪ ನಿಮ್ಮನ್ನು ಎಂದಿಗೂ ಪ್ರೀತಿಸುತ್ತೇನೆ, ಪ್ರೀತಿಯ ಮುದ್ದು ಅಪ್ಪ-ಅಜ್ಜಾ ಹುಟ್ಟುಹಬ್ಬದ ಶುಭಾಶಯಗಳು. ಸ್ಮರಣಾರ್ಥ ಪ್ರಾರ್ಥನೆಗಳು. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆʼʼಎಂದು ಐಶ್ವರ್ಯಾ ರೈ ಶೀರ್ಷಿಕೆ ನೀಡಿದ್ದಾರೆ. ಸ್ಮೈಲ್ ಟ್ರೈನ್‌ನ ಗ್ಲೋಬಲ್ ಗುಡ್‌ವಿಲ್ ರಾಯಭಾರಿಯಾಗಿ, ಐಶ್ವರ್ಯಾ ಅವರು 2009ರಿಂದ ಸಂಸ್ಥೆಯನ್ನು ಬೆಂಬಲಿಸುತ್ತಿದ್ದಾರೆ.
ಇದನ್ನೂ ಓದಿ: Abdul Razzaq: ಐಶ್ವರ್ಯಾ ರೈ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಹೇಳಿಕೆ; ಬೆಂಡೆತ್ತಿದ ಬಳಿಕ ಕ್ಷಮೆಯಾಚನೆ
ಐಶ್ವರ್ಯಾ ಕುಟುಂಬದಲ್ಲಿ ಬಿರುಕು?
ಅಕ್ಟೋಬರ್ 11ರಂದು (Aishwarya Rai) ಅಮಿತಾಭ್ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್ ಅವರ ಜತೆ ಇರುವ ಫೋಟೊ ಕೂಡ ಶೇರ್ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದರು ಆದರೆ ಅತ್ತೆ ಜಯಾ ಬಚ್ಚನ್, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್ ಬಚ್ಚನ್ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್ ಮಾಡಿ ಫೋಟೊ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಐಶ್ವರ್ಯಾ ರೈ ಬಚ್ಚನ್ ಕುಟಂಬದಲ್ಲಿ ಏನೋ ಕಿರಿಕ್ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಇದರಿಂದ ನಟಿ ಸಾಕಷ್ಟು ಚರ್ಚೆಯಲ್ಲಿದ್ದರು.