Aishwarya Rai: ನಾವು ತುಂಬ ಮಿಸ್‌ ಮಾಡಿಕೊಳ್ಳುತ್ತೇವೆ ಅಪ್ಪ; ಐಶ್ವರ್ಯಾ ರೈ ಭಾವುಕ ಪೋಸ್ಟ್‌! Vistara News

ಬಾಲಿವುಡ್

Aishwarya Rai: ನಾವು ತುಂಬ ಮಿಸ್‌ ಮಾಡಿಕೊಳ್ಳುತ್ತೇವೆ ಅಪ್ಪ; ಐಶ್ವರ್ಯಾ ರೈ ಭಾವುಕ ಪೋಸ್ಟ್‌!

ಇಂದು ನಟಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ಅವರ ತಂದೆ ಕೃಷ್ಣರಾಜ್ ರೈ ಅವರ ಜನುಮದಿನ. ನಟಿ ಕೃಷ್ಣರಾಜ್ ಅವರ ಭಾವಚಿತ್ರದ ಮುಂದೆ ಸೆಲ್ಫಿ ತೆಗೆದುಕೊಂಡಿರುವ ಫೋಟೊ ಹಂಚಿಕೊಂಡಿದ್ದಾರೆ

VISTARANEWS.COM


on

Aishwarya Rai remembers father on his birth anniversary
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ಅವರು ತಂದೆ ಕೃಷ್ಣರಾಜ್ ರೈ ಅವರ ಜನ್ಮ ದಿನದಂದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮೂರು ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ನಟಿ ಅರಾಧ್ಯ ಚಿಕ್ಕವಳಿದ್ದಾಗ ತಾತನ ಜತೆ ಇರುವ, ಇನ್ನೊಂದು ಐಶ್ವರ್ಯಾ ಅವರು ತಂದೆ ಜತೆ ಇರುವ ಮತ್ತು ಮೂರನೇಯದರಲ್ಲಿ ಐಶ್ವರ್ಯಾ, ಅವರ ತಾಯಿ ವೃಂದಾ ರೈ, ಆರಾಧ್ಯ, ಹಾಗೂ ಕೃಷ್ಣರಾಜ್ ಅವರ ಭಾವಚಿತ್ರದ ಮುಂದೆ ಸೆಲ್ಫಿ ತೆಗೆದುಕೊಂಡಿರುವ ಫೋಟೊ ಹಂಚಿಕೊಂಡಿದ್ದಾರೆ. 2017ರಲ್ಲಿ ಕೃಷ್ಣರಾಜ್ ರೈ ನಿಧನರಾಗಿದ್ದಾರೆ.

ಐಶ್ವರ್ಯಾ ರೈ ಪೋಸ್ಟ್‌ ಜತೆಗೆ ʻʻಅಪ್ಪ ನಿಮ್ಮನ್ನು ಎಂದಿಗೂ ಪ್ರೀತಿಸುತ್ತೇನೆ, ಪ್ರೀತಿಯ ಮುದ್ದು ಅಪ್ಪ-ಅಜ್ಜಾ ಹುಟ್ಟುಹಬ್ಬದ ಶುಭಾಶಯಗಳು. ಸ್ಮರಣಾರ್ಥ ಪ್ರಾರ್ಥನೆಗಳು. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆʼʼಎಂದು ಐಶ್ವರ್ಯಾ ರೈ ಶೀರ್ಷಿಕೆ ನೀಡಿದ್ದಾರೆ. ಸ್ಮೈಲ್ ಟ್ರೈನ್‌ನ ಗ್ಲೋಬಲ್ ಗುಡ್‌ವಿಲ್ ರಾಯಭಾರಿಯಾಗಿ, ಐಶ್ವರ್ಯಾ ಅವರು 2009ರಿಂದ ಸಂಸ್ಥೆಯನ್ನು ಬೆಂಬಲಿಸುತ್ತಿದ್ದಾರೆ.

ಇದನ್ನೂ ಓದಿ: Abdul Razzaq: ಐಶ್ವರ್ಯಾ ರೈ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಹೇಳಿಕೆ; ಬೆಂಡೆತ್ತಿದ ಬಳಿಕ ಕ್ಷಮೆಯಾಚನೆ

ಐಶ್ವರ್ಯಾ ಕುಟುಂಬದಲ್ಲಿ ಬಿರುಕು?

ಅಕ್ಟೋಬರ್ 11ರಂದು (Aishwarya Rai) ಅಮಿತಾಭ್‌ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್‌ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್‌ ಅವರ ಜತೆ ಇರುವ ಫೋಟೊ ಕೂಡ ಶೇರ್‌ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದರು ಆದರೆ ಅತ್ತೆ ಜಯಾ ಬಚ್ಚನ್‌, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್​ ಬಚ್ಚನ್​ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್‌ ಮಾಡಿ ಫೋಟೊ ಪೋಸ್ಟ್‌ ಮಾಡಿದ್ದರು. ಇದಾದ ಬಳಿಕ ಐಶ್ವರ್ಯಾ ರೈ ಬಚ್ಚನ್‌ ಕುಟಂಬದಲ್ಲಿ ಏನೋ ಕಿರಿಕ್‌ ಇದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದರು. ಇದರಿಂದ ನಟಿ ಸಾಕಷ್ಟು ಚರ್ಚೆಯಲ್ಲಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್‌ʼ ಶೂಟಿಂಗ್‌; ಇದು ಯಾರ ಬಂಗಲೆ ನೋಡಿ!

Animal Movie: ಚಿತ್ರದಲ್ಲಿ ಚಿತ್ರಿಸಲಾದ ಐಷಾರಾಮಿ ಬಂಗಲೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಡೆತನದ 800 ಕೋಟಿ ರೂ. ಪಟೌಡಿ ಅರಮನೆ ಎಂದರೆ ನೀವು ನಂಬಲೇ ಬೇಕು.

VISTARANEWS.COM


on

Ranbir Kapoor Animal was shot at Saif Ali Khan’s 800 crore Pataudi Palace
Koo

ಬೆಂಗಳೂರು: ರಣಬೀರ್ ಕಪೂರ್ ಅವರ ʻಅನಿಮಲ್‌ʼ ಸಿನಿಮಾ (Animal Movie) ಆರು ದಿನಗಳಲ್ಲಿ ವಿಶ್ವಾದ್ಯಂತ 500 ಕೋಟಿ ರೂ. ಗಡಿ ದಾಟಲು ಸಿದ್ಧವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚಿತ್ರವು ಈಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 425 ಕೋಟಿ ರೂ. ಗಳಿಸಿದೆ. ಇದರ ಜತೆಗೆ ಸಾಕಷ್ಟು ಚರ್ಚೆಯಲ್ಲಿರುವುದು ಸಿನಿಮಾದ ಶೂಟಿಂಗ್‌ ಸ್ಪಾಟ್‌. ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಇಂಗ್ಲೆಂಡ್, ಸ್ಕಾಟ್ಲೆಂಡ್, ಮುಂಬೈ, ಗುರುಗ್ರಾಮ, ದೆಹಲಿ ಮತ್ತು ಮನಾಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಶೂಟಿಂಗ್‌ ಆಗಿದೆ. ಇನ್ನು ಬಹುಮುಖ್ಯವಾಗಿ ಚಿತ್ರದಲ್ಲಿ ಚಿತ್ರಿಸಲಾದ ಐಷಾರಾಮಿ ಸಿಂಗ್ ಕುಟುಂಬದ ನಿವಾಸ ಶೂಟಿಂಗ್‌ ಆಗಿದ್ದು, ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಡೆತನದ 800 ಕೋಟಿ ರೂ. ಮೌಲ್ಯದ ಪಟೌಡಿ ಅರಮನೆಯಲ್ಲಿ ಎಂದರೆ ನೀವು ನಂಬಲೇ ಬೇಕು!

1935ರಲ್ಲಿ ಪಟೌಡಿಯ ಕೊನೆಯ ಆಡಳಿತದ ನವಾಬ್ ಇಫ್ತಿಕರ್ ಅಲಿ ಖಾನ್ ನಿರ್ಮಿಸಿದ ಅರಮನೆಯು, ಸೈಫ್ ಅಲಿ ಖಾನ್ ಅವರ ತಂದೆಯ ಮರಣದ ನಂತರ 2014ರಲ್ಲಿ ಅವರ ಕೈಗೆ ಹಸ್ತಾಂತರವಾಯಿತು. ಹರಿಯಾಣದ ಪಟೌಡಿಯಲ್ಲಿ ಇರುವ ಈ ಪಟೌಡಿ ಅರಮನೆಯು 10 ಎಕರೆಗಳಷ್ಟು ವಿಸ್ತಾರವಾಗಿದೆ. ಮಲಗುವ ಕೋಣೆಗಳು, ಡ್ರೆಸ್ಸಿಂಗ್‌ ರೂಮ್‌ಗಳು, ಒಳಗೊಂಡಂತೆ 150ಕ್ಕೂ ಹೆಚ್ಚು ರೂಮ್‌ಗಳನ್ನು ಹೊಂದಿದೆ. ಹೊರಾಂಗಣದಲ್ಲಿ ಈಜುಕೊಳ, ಕೃಷಿ ಪ್ರದೇಶ, ಒಳಗೊಂಡಿದೆ. ಮೂಲತಃ ಆಸ್ಟ್ರಿಯನ್ ವಾಸ್ತುಶಿಲ್ಪಿ ಕಾರ್ಲ್ ಮೊಲ್ಟ್ಜ್ ವಾನ್ ಹೈಂಜ್ ಅವರ ಸಹಯೋಗದೊಂದಿಗೆ ಬ್ರಿಟಿಷ್ ವಾಸ್ತುಶಿಲ್ಪಿ ರಾಬರ್ಟ್ ಟಾರ್ ರಸ್ಸೆಲ್ ವಿನ್ಯಾಸಗೊಳಿಸಿದ್ದಾರೆ. ಈ ಅರಮನೆಯು ಭಾರತೀಯ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಶೈಲಿಗಳ ಮಿಶ್ರಣವನ್ನು ಹೊಂದಿದೆ. ಸೈಫ್ ಅಲಿ ಖಾನ್ ಮಾಲೀಕತ್ವವನ್ನು ವಹಿಸಿಕೊಂಡ ನಂತರ ಒಳಾಂಗಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಂತೆ. ಪಟೌಡಿ ಅರಮನೆಯಲ್ಲಿ ಈ ಅನಿಮಲ್‌ಗೂ ಮುಂಚೆ ಇತರ ಬಾಲಿವುಡ್ ಸಿನಿಮಾಗಳು ಶೂಟಿಂಗ್‌ ಆಗಿತ್ತು. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ನಟಿಸಿದ ʻವೀರ್ ಝರಾʼ ಮತ್ತು ʻರಂಗ್ ದೇ ಬಸಂತಿʼ ಕೂಡ ಸೇರಿವೆ. ಪಟೌಡಿ ಅರಮನೆಯಲ್ಲಿ ಸೈಫ್‌ ಮತ್ತು ಕರೀನಾ ಕಪೂರ್ ಕುಟುಂಬದ ಕಾರ್ಯಕ್ರಮಗಳೂ ನಡೆದಿವೆ.

ಇದನ್ನೂ ಓದಿ: Animal Box Office: 200 ಕೋಟಿ ರೂ. ಗಡಿ ದಾಟಿದ ʻಅನಿಮಲ್‌ʼ!

Ranbir Kapoor Animal was shot at Saif Ali Khan’s 800 crore Pataudi Palace

ಈಗಾಗಲೇ ಅನಿಮಲ್‌ ಸಿನಿಮಾ ಕಲೆಕ್ಷನ್‌ನಲ್ಲಿ 500 ಕೋಟಿ ರೂ. ಗಡಿ ದಾಟುವಲ್ಲಿ ಇದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ ಉತ್ತರ ಅಮೆರಿಕಾದಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿರುವ ಸಿನಿಮಾದಲ್ಲಿ ಅನಿಮಲ್‌ 5ನೇ ಭಾರತೀಯ ಚಲನಚಿತ್ರವಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಪ್ರಕಾರ. ನಾಲ್ಕು ದಿನಗಳಲ್ಲಿ ಜಾಗತಿಕವಾಗಿ 520.79 ಕೋಟಿ ಗಳಿಸಿದ ಈ ವರ್ಷದ ಅತಿ ದೊಡ್ಡ ಹಿಟ್ ಸಿನಿಮಾ ʻಜವಾನ್‌ʼಗೆ ಹೋಲಿಸಿದರೆ, ಅನಿಮಲ್ ಇನ್ನೂ ಹಿಂದುಳಿದಿದೆ. ತರಣ್ ಆದರ್ಶ್ ಪ್ರಕಾರ ಪಠಾಣ್ ನಾಲ್ಕು ದಿನಗಳಲ್ಲಿ 429 ಕೋಟಿ ರೂ. ಗಳಿಕೆ ಕಂಡಿತ್ತು.

ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.

Continue Reading

ದೇಶ

Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ ಗ್ರೇಟ್‌ ಎಸ್ಕೇಪ್‌

Aamir Khan: ಚೆನ್ನೈಯ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರನ್ನು ರಕ್ಷಿಸಲಾಗಿದೆ. ಸದ್ಯ ಈ ಫೋಟೊ ವೈರಲ್‌ ಆಗಿದೆ.

VISTARANEWS.COM


on

chennai
Koo

ಚೆನ್ನೈ: ಚೆನ್ನೈನ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಲಾಗಿದೆ. ಆಮೀರ್ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ (Vishnu Vishal), ಪ್ರವಾಹ ಪೀಡಿತ ಇತರರೊಂದಿಗೆ ರಕ್ಷಣಾ ದೋಣಿಯಲ್ಲಿ ಕುಳಿತಿರುವ ಫೋಟೊ ವೈರಲ್ ಆಗಿದೆ. ಫೋಟೋಗಳಲ್ಲಿ ಆಮೀರ್ ಮತ್ತು ವಿಷ್ಣು ವಿಶಾಲ್ ರಕ್ಷಣಾ ಅಧಿಕಾರಿಗಳಿಂದ ಸಹಾಯ ಪಡೆಯುತ್ತಿರುವುದನ್ನೂ ಕಾಣಬಹುದು. ಸುರಕ್ಷಿತ ಸ್ಥಳಕ್ಕೆ ತೆರಳಿದ ಬಳಿಕ ಅವರು ಫೋಟೊಗಳಿಗೆ ಪೋಸು ನೀಡಿದ್ದಾರೆ.

ಈ ಫೋಟೊ ವಿಷ್ಣು ವಿಶಾಲ್ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನೆರೆಗೆ ಸಿಲುಕಿದ ನಮ್ಮಂತಹ ನೂರಾರು ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ಇತರ ಇಲಾಖೆಗಳ ಸಿಬ್ಬಂದಿಗೆ ಧನ್ಯವಾದಗಳು. ಕರಪಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ 3 ದೋಣಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿದೆ. ಇಂತಹ ಸಂಧಿಗ್ಧ ಸಮಯದಲ್ಲಿ ತಮಿಳುನಾಡು ಸರ್ಕಾರದ ಉತ್ತಮ ಕೆಲಸ ಮಾಡುತ್ತಿದೆ. ಅವಿರತವಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ವಿದ್ಯುತ್ ಮತ್ತು ನೆಟ್‌ವರ್ಕ್‌ ಇಲ್ಲದೆ ಚೆನ್ನೈನ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ವಿಷ್ಣು ವಿಶಾಲ್‌ ಈ ಹಿಂದೆ ಬಹಿರಂಗಪಡಿಸಿದ್ದರು. ತನ್ನ ಮನೆಯೊಳಗೆ ನೀರು ನುಗ್ಗಿದೆ ಎಂದು ತಿಳಿಸಿದ್ದರು. ಫೋಟೊಗಳನ್ನು ಹಂಚಿಕೊಂಡಿದ್ದ ಅವರು, “ನೀರು ನನ್ನ ಮನೆಯೊಳಗೆ ನುಗ್ಗುತ್ತಿದೆ. ಕರಪಕ್ಕಂನಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿದೆ. ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಟೆರೇಸ್‌ನಲ್ಲಿ ಮಾತ್ರ ನನಗೆ ಕೆಲವು ಸಿಗ್ನಲ್ ಸಿಗುತ್ತದೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಧಾರಾಕಾರ ಮಳೆ

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡಲೂರು ಮತ್ತು ತಿರುವಳ್ಳೂರು ಜಿಲ್ಲೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಚೆನ್ನೈನ ಹೆಚ್ಚಿನ ಭಾಗಗಳು ಪ್ರಸ್ತುತ ನೀರಿನಲ್ಲಿ ಮುಳುಗಿವೆ. ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರವಾಹ ಕಂಡು ಬಂದಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರತರಾಗಿದ್ದಾರೆ. ನಿಂತ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ, ನೀರು ತುಂಬಿದ ರಸ್ತೆಗಳಲ್ಲಿ ಕಾರುಗಳು ತೇಲುತ್ತಿರುವ ದೃಶ್ಯ ವೈರಲ್‌ ಆಗಿತ್ತು.

ಇದನ್ನೂ ಓದಿ: Cyclone Michaung: ಮಿಚಾಂಗ್ ಚಂಡಮಾರುತದಿಂದ 8 ಸಾವು; ಶಾಲೆ, ಬ್ಯಾಂಕ್‌ ಕ್ಲೋಸ್‌

ನೆರವಿಗೆ ಬಂದ ಸಹೋದರರು

ಈ ಮಧ್ಯೆ ತಮಿಳು ಚಿತ್ರರಂಗದ ನಟರಾದ ಸೂರ್ಯ ಮತ್ತು ಕಾರ್ತಿ 10 ಲಕ್ಷ ರೂ.ಗಳ ಆರಂಭಿಕ ದೇಣಿಗೆಯನ್ನು ಘೋಷಿಸಿದ್ದಾರೆ. ಅಗತ್ಯವಿರುವ ಯಾವುದೇ ರೀತಿಯ ಸಹಾಯ ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಟರ ಅಭಿಮಾನಿ ಸಂಘಗಳ ಮೂಲಕ ನೆರವು ನೀಡಲಾಗುತ್ತದೆ.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಬೀಸುತ್ತಿರುವ ಮಿಚಾಂಗ್‌ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತವಾಗಿದೆ. ಕಾರು- ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಕುಸಿದಿವೆ. ಕೋಟಿಗಟ್ಟಲೆ ಆಸ್ತಿಗೆ ಹಾನಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಕ್ರಿಕೆಟ್

‘ಅನಿಮಲ್’ ಸಿನಿಮಾ ನೋಡಿ 3 ಗಂಟೆ ವ್ಯರ್ಥವಾಯಿತು; ಟೀಮ್​ ಇಂಡಿಯಾ ವೇಗಿ ಅಸಮಾಧಾನ

‘ಅನಿಮಲ್’ ಸಿನಿಮಾ ನೋಡಿ(Animal) ಅತ್ಯಮೂಲ್ಯ ಮೂರು ಗಂಟೆಗಳು ವ್ಯರ್ಥವಾಯಿತು ಎಂದು ಟೀಮ್​ ಇಂಡಿಯಾ ವೇಗಿ ​ದೇವ್​ ಉನಾದ್ಕತ್(Jaydev Unadkat) ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

jaydev unadkat
Koo

ಜೈಪುರ: ರಣಬೀರ್ ಕಪೂರ್(Ranbir Kapoor) ಅಭಿನಯದ ‘ಅನಿಮಲ್’ ಚಿತ್ರ(Animal) ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್​ ಮಾಡುತ್ತಿದೆ. ಮತ್ತೊಂದೆಡೆ ವಿವಾದಕ್ಕೂ ಕಾರಣವಾಗಿದೆ. ಸ್ತ್ರಿದ್ವೇಷ ವೈಭವಿಕರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚಚರ್ಚೆಗಳು ಆರಂಭವಾಗಿದೆ. ಟೀಮ್​ ಇಂಡಿಯಾದ ವೇಗಿ ಜಯ​ದೇವ್​ ಉನಾದ್ಕತ್(Jaydev Unadkat)​ ಕೂಡ ಸಿನಿಮಾ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಅನಿಮಲ್ ಚಿತ್ರವನ್ನು ವೀಕ್ಷಿಸಿದ ಜಯದೇವ್ ಉನಾದ್ಕತ್,” ಇದೊಂದು ಸ್ತ್ರೀ ಅವಮಾನಕರ ಸಿನಿಮಾ ಎಂದು ಹೇಳಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಸುದೀರ್ಘ ಬರಹಗಳ ಮೂಲಕ ಪೋಸ್ಟ್​ ಮಾಡಿ, ಈ ಚಿತ್ರವನ್ನು ‘ಡಿಸಾಸ್ಟರ್, ಅವಮಾನಕರ’. ಇದೊಂದು ಕರುಣಾಜನಕ ಸಿನಿಮಾ. ಇದನ್ನು ವೀಕ್ಷಿಸಿ ನನ್ನ ಅತ್ಯಮೂಲ್ಯ ಮೂರು ಗಂಟೆಗಳು ವ್ಯರ್ಥವಾಯಿತು. ಇಂದಿನ ಜಗತ್ತಿನಲ್ಲಿ ಸ್ತ್ರಿದ್ವೇಷ ವೈಭವಿಕರ ಮತ್ತು ಪುರುಷರನ್ನು ಪ್ರಬಲರನ್ನಾಗಿ ತೋರಿಸುವುದು ಅವಮಾನಕರ” ಎಂದು ಪೋಸ್ಟ್ ಮಾಡಿದ್ದರು. ಅವರ ಈ ಪೋಸ್ಟ್​ ಎಲ್ಲಡೆ ವೈರಲ್ ಮತ್ತು ಟ್ರೋಲ್​​ ಆಗಿತ್ತು. ಇದೇ ಕಾರಣದಿಂದ ಉನಾದ್ಕತ್ ತಮ್ಮ ಈ ಪೋಸ್ಟನ್ನು ಡಿಲೀಡ್​ ಮಾಡಿದ್ದಾರೆ. ಆದರೆ ಕೆಲ ನೆಟ್ಟಿಗರು ಇದರ ಸ್ಕ್ರೀನ್​ಶಾಟ್​ಗಳನ್ನು ತೆಗೆದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು

“ನಾವು ಕಾಡಿನಲ್ಲಿ, ಅರಮನೆಗಳಲ್ಲಿ ವಾಸಿಸುತ್ತಿಲ್ಲ. ಯುದ್ಧಗಳನ್ನು ಮಾಡುತ್ತಿಲ್ಲ. ನಟನೆ ಎಷ್ಟು ಚೆನ್ನಾಗಿತ್ತು ಎಂಬುದು ಮುಖ್ಯವಲ್ಲ, ಕುಟುಂಬ ಸಮೇತರಾಗಿ ವೀಕ್ಷಿಸುವ ಸಿನಿಮಾದಲ್ಲಿ ಇಂತಹ ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು. ಮನರಂಜನಾ ಉದ್ಯಮದಲ್ಲಿಯೂ ಸಾಮಾಜಿಕ ಜವಾಬ್ದಾರಿ ಅತ್ಯಗತ್ಯ. ಇದನ್ನು ಎಂದಿಗೂ ಮರೆಯಬಾರದು” ಎಂದು ಉನಾದ್ಕತ್ ತಮ್ಮ ಆಕ್ರೋಶ ಹೊರಕಾಕಿದ್ದಾರೆ.

ರಣಬೀರ್ ಕಪೂರ್ ಈ ಸಿನಿಮಾಕ್ಕಾಗಿ 30– 35 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ಮೊದಲು ರಣಬೀರ್ ಪ್ರತಿ ಚಿತ್ರಕ್ಕೆ 70 ಕೋಟಿ ರೂ. ಸಂಭಾವನೆಯನ್ನು ಪಡಯುತ್ತಿದ್ದರು ಎನ್ನಲಾಗಿದೆ. ಆದರೆ ಅನಿಮಲ್‌ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಬೆಂಬಲ ಸೂಚಿಸಿ, ಈ ಬಾರಿ ತಮ್ಮ ಸಂಭಾವನೆಯನ್ನು ಶೇ. 50ರಷ್ಟು ಕಡಿಮೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬಿ ಡಿಯೋಲ್ 4-5 ಕೋಟಿ ರೂ., ರಶ್ಮಿಕಾ ಮಂದಣ್ಣ ಅವರಂತಹ ಇತರ ಪಾತ್ರವರ್ಗದವರು 4 ರೂ. ಕೋಟಿ, ಮತ್ತು ಅನಿಲ್ ಕಪೂರ್ 2 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Animal Cast Fees: ‘ಅನಿಮಲ್’ ಚಿತ್ರಕ್ಕೆ ರಣಬೀರ್ ಕಪೂರ್ ಪಡೆದ ಸಂಭಾವನೆ ಎಷ್ಟು?

ಅನಿಮಲ್’ ಉತ್ತರ ಅಮೆರಿಕಾದಲ್ಲಿ 1 ಮಿಲಿಯನ್ ಡಾಲರ್‌ ದಾಟಿದೆ. ಈ ಸಾಧನೆ ಮಾಡಿದ ಮೊದಲ ಹಿಂದಿ ಚಿತ್ರ ಇದು. ಇನ್ನೂ ಅನೇಕ ದಾಖಲೆಗಳನ್ನು ಮುರಿಯಲಿದೆʼ ಎಂದು ಎಕ್ಸ್‌ನಲ್ಲಿ ಬರೆಯಲಾಗಿತ್ತು.

ತಂದೆ-ಮಗನ ಕಥೆ

ಚಿತ್ರದ ಕಥೆಯನ್ನು ತಂದೆ ಮತ್ತು ಮಗನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿದೆ. ಅನಿಲ್‌ ಕಪೂರ್‌ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್‌ ಅರ್ಜುನ್ ಎನ್ನುವ ಪಾತ್ರ ನಿರ್ವಹಿಸಿದ್ದು, ತನ್ನ ಗುರಿಗಳನ್ನು ಸಾಧಿಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧನಿರುವ ವ್ಯಕ್ತಿ ಎಂದು ಚಿತ್ರದಲ್ಲಿ ವಿವರಿಸಲಾಗಿದೆ. ಜತೆಗೆ ತಂದೆ ಮತ್ತು ಮಗನ ನಡುವಿನ ಪ್ರಕ್ಷುಬ್ಧ ಸಂಬಂಧವನ್ನು ಇದು ತೆರೆದಿಡುತ್ತದೆ.

Continue Reading

ಬಾಲಿವುಡ್

Deepika Padukone: ಪೈಲಟ್‌ ಅವತಾರದಲ್ಲಿ ದೀಪಿಕಾ; ‘ಫೈಟರ್‌’ ಫಸ್ಟ್‌ ಲುಕ್‌ ಹೊರಬಿತ್ತು

Deepika Padukone: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅಭಿನಯದ ʼಫೈಟರ್‌ʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಪೈಲಟ್‌ ಪಾತ್ರದಲ್ಲಿ ಕನ್ನಡತಿ ಮಿಂಚು ಹರಿಸಿದ್ದಾರೆ.

VISTARANEWS.COM


on

fighter
Koo

ಮುಂಬೈ: ಬಾಲಿವುಡ್‌ನ ಟಾಪ್‌ ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಈ ವರ್ಷ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ಪಠಾಣ್‌ (Pathaan) ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದೆ. ಶಾರುಖ್‌ ಖಾನ್‌-ದೀಪಿಕಾ ಪಡುಕೋಣೆ ಅಭಿನಯದ ಈ ಸಿನಿಮಾ 1 ಸಾವಿರ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಬಳಿಕ ತೆರೆಕಂಡ ಜವಾನ್‌ (Jawan) ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ಶಾರುಖ್‌ ಜತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರವೂ ಸೂಪರ್‌ ಹಿಟ್‌ ಆಗಿದೆ. ಸಣ್ಣ ಪಾತ್ರವಾದರೂ ದೀಪಿಕಾ ಗಮನ ಸೆಳೆದಿದ್ದರು. ಇದೀಗ ಅವರ ಮುಂದಿನ ಚಿತ್ರ ‘ಫೈಟರ್‌’(Fighter)ನ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಫೈಲಟ್‌ ಅವತಾರ ತಾಳಿರುವ ದೀಪಿಕಾ ಲುಕ್‌ಗೆ ಅಭಿಮಾನಗಳು ಫಿದಾ ಆಗಿದ್ದಾರೆ.

ಮೊದಲ ಬಾರಿ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ‘ಫೈಟರ್‌’ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಸಿದ್ಧಾರ್ಥ್‌ ಆನಂದದ ನಿರ್ದೇಶನದ ಈ ಆ್ಯಕ್ಷನ್‌ ಥ್ರಿಲ್ಲರ್‌ನಲ್ಲಿ ಹೃತಿಕ್‌ ಮತ್ತು ದೀಪಿಕಾ ಪೈಲಟ್‌ ಆಗಿ ಸಾಕಷ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಿನ್ನಿ ಎನ್ನುವ ಏರ್ ಡ್ರ್ಯಾಗನ್‌ನ ಸ್ಕ್ವಾಡ್ರನ್ ಪೈಲಟ್ ಆಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ನಿನ್ನೆಯಷ್ಟೇ ಹೃತಿಕ್‌ ರೋಷನ್‌ ಫಸ್ಟ್‌ ಲುಕ್‌ ರಿಲೀಸ್‌ ಆಗಿತ್ತು. ಹೃತಿಕ್‌ ಕೂಡ ಏರ್ ಡ್ರ್ಯಾಗನ್‌ನ ಸ್ಕ್ವಾಡ್ರನ್ ಪೈಲಟ್ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ. ಪ್ಯಾಟಿ ಹೆಸರಿನ ಅವರ ಫಸ್ಟ್‌ ಲುಕ್‌ ಕೂಡ ವೈರಲ್‌ ಆಗಿತ್ತು. ‘ಫೈಟರ್‌’ ಚಿತ್ರ 2024ರ ಜನವರಿ 25ರಂದು ತೆರೆಗೆ ಬರಲಿದೆ.

ಇತಿಹಾಸ ಮರುಕಳಿಸುತ್ತಾ?

‘ಪಠಾಣ್‌’ ಚಿತ್ರ ಈ ವರ್ಷದ ಜನವರಿ 25ರಂದು ರಿಲೀಸ್‌ ಆಗಿ ಭರ್ಜರಿ ಯಶಸ್ಸು ಸಾಧಿಸಿದೆ. ವಿಶೇಷ ಎಂದರೆ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸಿದ್ಧಾರ್ಥ್‌ ಆನಂದ್‌. ʼಪಠಾಣ್‌ʼ ಮತ್ತು ʼಫೈಟರ್‌ʼ ಚಿತ್ರಗಳಲ್ಲಿ ದೀಪಿಕಾ ನಾಯಕಿ. ಹೀಗಾಗಿ ಈ ಹಿಟ್‌ ಕಾಂಬಿನೇಷನ್‌ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ʼಫೈಟರ್‌ʼ ಕೂಡ ಬಹು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದು, ಹಾಲಿವುಡ್‌ ರೀತಿಯ ಸಾಹಸ ದೃಶ್ಯಗಳು ಇರಲಿವೆ ಎನ್ನುವ ಮಾತು ಕೇಳಿ ಬಂದಿದೆ. ಅನಿಲ್‌ ಕಪೂರ್‌ ಕೂಡ ಬಹು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅಲ್ಲದೆ ಮೊದಲ ಬಾರಿ ಹೃತಿಕ್‌ ಮತ್ತು ದೀಪಿಕಾ ಜತೆಯಾಗಿ ನಟಿಸುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ. ವಿದೇಶದಲ್ಲಿ ನಡೆದ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಇಬ್ಬರೂ ಭಾಗವಹಿಸಿದ್ದರು. Aerial action (ವೈಮಾನಿಕ ಸಾಹಸ) ಒಳಗೊಂಡ ಈ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿ ವೈರಲ್‌ ಆಗಿತ್ತು.

ಇದನ್ನೂ ಓದಿ: Deepika Padukone: ಕೈಯಲ್ಲಿ ರಿವಾಲ್ವರ್, ಸುತ್ತಲೂ ಹೆಣಗಳ ರಾಶಿ; ದೀಪಿಕಾ ಈಗ ʻಲೇಡಿ ಸಿಂಗಂʼ!

ಈ ಚಿತ್ರದ ಜತೆಗೆ ದೀಪಿಕಾ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎ.ಡಿ.ʼ ಮತ್ತು ʼಸಿಂಗಮ್‌ ಅಗೈನ್‌ʼ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸೈನ್ಸ್‌ ಫಿಕ್ಷನ್‌ ʼಕಲ್ಕಿʼ ಸಿನಿಮಾ ಇದುವರೆಗಿನ ಅತೀ ದೊಡ್ಡ ಬಜೆಟ್‌ನ ಚಿತ್ರ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಅದೇ ರೀತಿ ʼಸಿಂಗಮ್‌ ಎಗೈನ್‌ʼ ಚಿತ್ರದಲ್ಲಿ ದೀಪಿಕಾ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹೃತಿಕ್‌ ರೋಷನ್‌ ವಾರ್‌ 2 ಸಿನಿಮಾದಲ್ಲಿ ನಿರತರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
karni sena chief murder
ದೇಶ10 mins ago

ಕರ್ಣಿ ಸೇನಾ ನಾಯಕನ ಹತ್ಯೆ ವಿರೋಧಿಸಿ ಇಂದು ರಾಜಸ್ಥಾನ ಬಂದ್, ಗೆಹ್ಲೋಟ್‌ ಮೇಲೆ ಆರೋಪ

Wedding Fashion
ಫ್ಯಾಷನ್11 mins ago

Wedding Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ವೆಡ್ಡಿಂಗ್‌ ಪರ್ಸ್

Ranbir Kapoor Animal was shot at Saif Ali Khan’s 800 crore Pataudi Palace
ಬಾಲಿವುಡ್19 mins ago

Animal Movie: 150 ಕೋಣೆಯ ಅರಮನೆಯಲ್ಲಿ ʻಅನಿಮಲ್‌ʼ ಶೂಟಿಂಗ್‌; ಇದು ಯಾರ ಬಂಗಲೆ ನೋಡಿ!

self harm muskath
ಕ್ರೈಂ30 mins ago

Self Harm: 6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿ ಆತ್ಮಹತ್ಯೆ

war Between Sangeetha And Captain Snehith Gowda
ಬಿಗ್ ಬಾಸ್1 hour ago

BBK SEASON 10: ನೀನು ಯಾರಿಗೆ ʻಚೇಲಾʼ ಅಂತ ಗೊತ್ತು ʻಹೋಗೋಲೋʼ ಎಂದು ಸ್ನೇಹಿತ್‌ ಮೇಲೆ ರೊಚ್ಚಿಗೆದ್ದ ಸಂಗೀತಾ!

Captain Snehith Gowda Not Bother To Stop Physical Fight Between vinay and Karthik
ಬಿಗ್ ಬಾಸ್1 hour ago

BBK SEASON 10: ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಯಾವ ಸೀಮೆ ಕ್ಯಾಪ್ಟನ್ ಸ್ನೇಹಿತ್‌ ನೀನು?

woman eating
ಆರೋಗ್ಯ2 hours ago

Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

viral video pak military officer
ದೇಶ2 hours ago

Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

Sonia Gandhi Will not choose me to pm post; Book on Pranab Mukherjee
ದೇಶ2 hours ago

ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

IPL Auction 1
ಕ್ರಿಕೆಟ್2 hours ago

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

read your daily horoscope predictions for december 6 2023
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ13 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ14 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ14 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

ಟ್ರೆಂಡಿಂಗ್‌