ಬೆಂಗಳೂರು: ತಮಿಳು ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಅಜಿತ್ ಕುಮಾರ್ (Ajith Kumar) ಅವರಿಗೆ ಜನುಮದಿನದ ಸಂಭ್ರಮ. ನಟ 52ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಮನ ಗೆದ್ದಿರುವ ಇವರು ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಚಿತ್ರದ ಶೀರ್ಷಿಕೆಯನ್ನು ಹಂಚಿಕೊಂಡಿದೆ. ಈ ಸಿನಿಮಾಗೆ ಮಗಿಜ್ ತಿರುಮೇನಿ (Magizh Thirumeni) ನಿರ್ದೇಶಿಸಲಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಅಜಿತ್ ಅವರ ಹೊಸ ಚಿತ್ರವನ್ನು ಘೋಷಿಸಿದೆ. ಚಿತ್ರವನ್ನು ಮಗಿಜ್ ತಿರುಮೇನಿ ನಿರ್ದೇಶಿಸಲಿದ್ದು, ನಿರುದ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇದೀಗ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದು ವರದಿಯಾಗಿದೆ. ಚಿತ್ರದ ಶೀರ್ಷಿಕೆಯನ್ನು `ವಿದಾಮುಯರ್ಚಿ’ (VidaaMuyarchi) ಎಂದು ಟೈಟಲ್ ಪೋಸ್ಟರ್ನೊಂದಿಗೆ ಅನಾವರಣಗೊಳಿಸಿದೆ. ‘ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ’ ಎಂದು ಚಿತ್ರದ ಪೋಸ್ಟರ್ ಅಡಿ ಬರಹವನ್ನೂ ನೀಡಿದ್ದಾರೆ. ತಮಿಳಿನಲ್ಲಿ ವಿದಾಮುಯರ್ಚಿ ಎಂದರೆ ದೃಢಸಂಕಲ್ಪ,. ಚಿತ್ರಕ್ಕೆ ನೀರವ್ ಶಾ ಅವರ ಛಾಯಾಗ್ರಹಣವಿದೆ. ಅಜಿತ್ ಅವರ ಇತ್ತೀಚಿನ ಹಲವು ಸಿನಿಮಾಗಳಲ್ಲಿ ನೀರವ್ ಛಾಯಾಗ್ರಹಣ ನಿಭಾಯಿಸಿದ್ದಾರೆ.
ತುನಿವು ಸಿನಿಮಾದಲ್ಲಿ ಅಜಿತ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಜಿತ್ ಅವರ 62ನೇ ಚಿತ್ರದ ಅಪ್ಡೇಟ್ಗಾಗಿ ಅವರ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದರು. ವಿಶೇಷವಾಗಿ ಹೊಸ ಸಿನಿಮಾ ಬಗ್ಗೆ ಹಲವಾರು ಚರ್ಚೆಗಳು ನಡೆದಿದ್ದವು. ಈ ಚಿತ್ರವನ್ನು ಆರಂಭದಲ್ಲಿ ವಿಘ್ನೇಶ್ ಶಿವನ್ ನಿರ್ದೇಶಿಸಬೇಕಿತ್ತು ಎಂದು ವರದಿಯಾಗಿತ್ತು.
ಇದನ್ನೂ ಓದಿ: Ajith Kumar: ಅಜಿತ್ ಕುಮಾರ್ ಪ್ರೇರಣೆಯಿಂದ ಬಿಎಂಡಬ್ಲ್ಯು ಐಷಾರಾಮಿ ಬೈಕ್ ಖರೀದಿಸಿದ ಮಂಜು ವಾರಿಯರ್
ಅಜಿತ್ ಕುಮಾರ್ ಹೊಸ ಸಿನಿಮಾ
ಏಗನ್, ಅಸಲ್, ವೀರಂ, ಜಗಮಲ್ಲ, ಯೆನ್ನೈ ಅರಿಂದಾಲ್, ವೇದಾಲಂ ವೇದಾಲಂ, ವಿವೇಗಂ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನ ಜನುಮದಿನಕ್ಕೆ ತಮಿಳು ಸಿನಿ ತಾರೆಯರು, ಸೇರಿದಂತೆ ಪರ ಭಾಷೆಯ ಸೆಲೆಬ್ರೆಟಿಗಳು ಹಾಗೂ ಸಾವಿರಾರು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.