ಬೆಂಗಳೂರು: ತಮಿಳು ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರ ತಂದೆ ಪಿ ಸುಬ್ರಮಣ್ಯಂ ಶುಕ್ರವಾರ (ಮಾರ್ಚ್ 24) ಬೆಳಗ್ಗೆ ನಿಧನರಾಗಿದ್ದಾರೆ. ವರದಿ ಪ್ರಕಾರ, ಅವರ ತಂದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆ 10 ಗಂಟೆಗೆ ಚೆನ್ನೈನ ಬೆಸೆಂಟ್ ನಾಗ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಜಿತ್ ತಂದೆಯವರ ನಿಧನಕ್ಕೆ ಕಾಲಿವುಡ್ ಚಿತ್ರರಂಗ ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ.
ಸುಬ್ರಮಣ್ಯಂ ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ . ಅಜಿತ್ ಅಭಿಮಾನಿಗಳು ಟ್ವೀಟ್‌ನಲ್ಲಿ ‘ಧೈರ್ಯವಾಗಿರಿ’ ಮತ್ತು ‘ನಿಮಗೆ ಹೆಚ್ಚಿನ ಶಕ್ತಿ’ ದೇವರು ಕೊಡಲಿ. ನಾವು ಯಾವಾಗಲೂ ನಿಮ್ಮೊಂದಿಗೆ ಇದ್ದೇವೆ” ಎಂದು ಬರೆದಿದ್ದಾರೆ. ಅಜಿತ್ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ತಂದೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ ಎಂದು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Ajith Kumar: ಅಜಿತ್ ಕುಮಾರ್ ಪ್ರೇರಣೆಯಿಂದ ಬಿಎಂಡಬ್ಲ್ಯು ಐಷಾರಾಮಿ ಬೈಕ್ ಖರೀದಿಸಿದ ಮಂಜು ವಾರಿಯರ್
ಕೆಲವು ದಿನಗಳ ಹಿಂದೆ ಅಜಿತ್ ಕುಮಾರ್ ಮತ್ತು ಅವರ ಪತ್ನಿ ಶಾಲಿನಿ, ಮಕ್ಕಳಾದ ಅನೌಷ್ಕಾ ಮತ್ತು ಆದ್ವಿಕ್ ಜತೆ ದುಬೈಗೆ ಹಾರಿದ್ದರು. ಕೆಲಸದ ಮುಂಭಾಗದಲ್ಲಿ, ಅಜಿತ್ ಕುಮಾರ್ ಅವರು ವಿಘ್ನೇಶ್ ಶಿವನ್ ಜತೆ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಆದರೆ ನಟ ತನ್ನ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ಮಾಗಿಜ್ ತಿರುಮೇನಿ ಅವರೊಂದಿಗೆ ಕೈ ಜೋಡಿಸಲಿದ್ದಾರೆ ಎಂತಲೂ ವರದಿಯಾಗಿದೆ. AK62 ಸಿನಿಮಾ ಬಗ್ಗೆ ನಟ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.