Site icon Vistara News

Ajith Kumar | 18 ತಿಂಗಳು ಪ್ರಪಂಚ ಪರ್ಯಟನೆಗೆ ಬೈಕ್‌ ಟೂರ್‌ ಪ್ಲ್ಯಾನ್ ಮಾಡ್ತಾ ಇದ್ದಾರಂತೆ ನಟ ಅಜಿತ್!

Ajith Kumar

ಬೆಂಗಳೂರು: ತಮಿಳು ನಟ ಅಜಿತ್‌ ಕುಮಾರ್‌ (Ajith Kumar ) ಪ್ರಪಂಚ ಪರ್ಯಟನೆಗೆ ಮುಂದಾಗಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಬೈಕ್‌ನಲ್ಲಿ ಅಜಿತ್‌ ಸ್ಟಂಟ್‌ಗಳನ್ನು ಮಾಡುತ್ತಾ ಇರುತ್ತಾರೆ. ʻವಾಲಿಮೈʼ ಚಿತ್ರದಲ್ಲಿಯೂ ಇಂತಹದ್ದೇ ಸಾಹಸ ಮಾಡಿದ್ದರು. ಇತ್ತೀಚೆಗೆ ತಮ್ಮ ʻತುನಿವುʼ ಸಿನಿಮಾ ಶೂಟಿಂಗ್‌ ನಡುವೆಯೇ ಸ್ನೇಹಿತರ ಜತೆ ಲಡಾಕ್‌ಗೆ ಬೈಕ್‌ ಟ್ರಿಪ್ ಹೋಗಿದ್ದರು. ಇದೀಗ ಮತ್ತೆ ಒಂದೂವರೆ ವರ್ಷದ ಬೈಕ್‌ ಟ್ರಿಪ್‌ ಪ್ಲ್ಯಾನ್‌ ಮಾಡಿದ್ದಾರಂತೆ ನಟ.

ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ ಎನ್ನಲಾಗುತ್ತಿದೆ. ಇದೀಗ 18 ತಿಂಗಳು ಬೈಕ್‌ ಏರಿ ಪ್ರಪಂಚ ಪರ್ಯಟನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. 16 ದೇಶಗಳಲ್ಲಿ ಬೈಕ್‌ ಸವಾರಿಗೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ವರ್ಷಕ್ಕೆ ಒಂದು ಸಿನಿಮಾ ಮಾಡುವ ಅಜಿತ್‌, ಒಂದೂವರೆ ವರ್ಷ ಸಿನಿಮಾ ಮಾಡದಿದ್ದರೆ ಹೇಗೆ? ಎಂದು ಅವರ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಜಿತ್‌ ನಟನೆಯ 62ನೇ ಸಿನಿಮಾ ʻತುನಿವುʼ ಚಿತ್ರದಲ್ಲಿ ಮಾಸ್‌ ಆಗಿ ಕಾಣಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ ರಿವೀಲ್‌ ಆಗಿದ್ದು, ಈ ಸಿನಿಮಾ ಬಿಡುಗಡೆ ಆ ನಂತರ ಅಜಿತ್‌ ಬೈಕ್‌ ಟೂರ್‌ ಪ್ಲ್ಯಾನ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Vijay Thalapathy | ತುನಿವು, ವಾರಿಸು ಪೋಸ್ಟರ್‌ ವಾರ್‌; ಅಜಿತ್‌ ಫ್ಯಾನ್ಸ್‌ ಕೆರಳಿಸಿದ ದಳಪತಿ ಅಭಿಮಾನಿಗಳು

Exit mobile version