Site icon Vistara News

Ajith Kumar | ಅಜಿತ್‌ ಕುಮಾರ್‌ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಪೋಸ್ಟರ್‌ ರಿಲೀಸ್‌; ಹೇಗಿದೆ ಹೊಸ ಲುಕ್‌?

Ajith Kumar

ಬೆಂಗಳೂರು: ಕಾಲಿವುಡ್‌ ನಟ ಅಜಿತ್‌ ಕುಮಾರ್‌ (Ajith Kumar) 61ನೇ ಸಿನಿಮಾ ಹೆಸರು ರಿವೀಲ್‌ ಆಗಿದೆ. ಶೀರ್ಷಿಕೆಯುಳ್ಳ ಪೋಸ್ಟರ್‌ ರಿವೀಲ್‌ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಥ್ಲಿಲ್‌ ಆಗಿದ್ದಾರೆ. ಅಜಿತ್‌ ಮಾಸ್‌ ಲುಕ್‌ ಎಲ್ಲರಿಗೂ ಇಷ್ಟವಾಗಿದ್ದು, ಚಿತ್ರ ಪೋಸ್ಟರ್‌ ಹೈಪ್‌ ಸೃಷ್ಟಿಮಾಡಿದೆ. ಅಂದಹಾಗೆ ಈ ಚಿತ್ರಕ್ಕೆ ತುನಿವು (Thunivu) ಎಂದು ಟೈಟಲ್‌ ಇಡಲಾಗಿದೆ.

ಖ್ಯಾತ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವುದು ವಿಶೇಷ. ತುನಿವು ಸಿನಿಮಾ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ನಿರ್ದೇಶಕ ಎಚ್‌.ವಿನೋದ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ತುನಿವು, ʻನೋ ಗಟ್ಸ್ ನೋ ಗ್ಲೋರಿʼ ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ. ಈ ಚಿತ್ರಕ್ಕೆ ಮಾಲಿವುಡ್‌ ನಟಿ ಮಂಜು ವಾರಿಯರ್‌ ನಾಯಕಿಯಾಗಿ ನಟಿಸಲಿದ್ದಾರೆ.

ಪೋಸ್ಟರ್‌ ನೋಡುತ್ತಿದ್ದಂತೆ ಅಜಿತ್‌ ಅವರ ಹೊಸ ಲುಕ್‌ ಕಾಣಿಸಿಕೊಳ್ಳಲಿದ್ದು, ಅವರ ಬಿಳಿಗಡ್ಡ ಹಾಗೂ ಹೇರ್‌ಸ್ಟೈಲ್‌ ಮೋಡಿ ಮಾಡುತ್ತಿದೆ. ಅಲ್ಲದೆ, ಗನ್‌ ಹಿಡಿದು ಆರಾಮ್‌ ಖುರ್ಚಿ ಮೇಲೆ ಕುಳಿತಿರುವ ಪೋಸ್‌ ಪಕ್ಕಾ ಆ್ಯಕ್ಷನ್‌ ಮೂವಿ ಎನ್ನುವುದನ್ನು ಸಾರಿ ಹೇಳುತ್ತಿದೆ.

ಅಜಿತ್ ನಟನೆಯ ಈಚೆಗಿನ ‘ವಿವೇಗಮ್’, ‘ವೀರಮ್’ ಹಾಗೂ ‘ವಲಿಮೈ’ ಚಿತ್ರಗಳು ಹಿಟ್‌ ಆಗಿದ್ದವು. ಈ ಚಿತ್ರಕ್ಕೆ ಎಚ್‌. ವಿನೋದ್‌ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಅಜಿತ್ ಹಾಗೂ ವಿನೋದ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ʻವಲಿಮೈʼ, ʻನೆರ್ಕೊಂಡ ಪಾರ್ವೈʼ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ | Kannada New Movie | ಡ್ಯಾನ್ಸ್ ಮಾಸ್ಟರ್ ಭೂಷಣ್ ಈಗ ಸ್ಯಾಂಡಲ್ ವುಡ್ ಹೀರೋ: ಸಿನಿಮಾ 23ಕ್ಕೆ ತೆರೆಗೆ

ʻನೆರ್ಕೊಂಡ ಪಾರ್ವೈʼ ಚಿತ್ರದಲ್ಲಿ ಕಾರ್ತಿಕೇಯ ಮತ್ತು ಹುಮಾ ಖುರೇಷಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಹಿಂದಿಯ ‘ಪಿಂಕ್’ ಚಿತ್ರದ ರಿಮೇಕ್. ಅಮಿತಾಭ್ ಬಚ್ಚನ್ ನಿರ್ವಹಿಸಿದ್ದ ಪಾತ್ರವನ್ನು ಅಜಿತ್ ತಮಿಳನಲ್ಲಿ ನಿರ್ವಹಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿಗೆದ್ದಿತ್ತು.

Exit mobile version