Site icon Vistara News

Ajith Kumar | ಅಜಿತ್‌ ಕುಮಾರ್‌ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ʻತುನಿವುʼ ಟ್ರೈಲರ್‌ ಔಟ್‌!

Ajith Kumar

ಬೆಂಗಳೂರು : ಕಾಲಿವುಡ್‌ ನಟ ಅಜಿತ್‌ ಕುಮಾರ್‌ (Ajith Kumar) 61ನೇ ಸಿನಿಮಾ ತುನಿವು ಟ್ರೈಲರ್‌ ಬಿಡುಗಡೆಗೊಂಡಿದೆ. ನಿರ್ಮಾಪಕ ಬೋನಿ ಕಪೂರ್ ಮತ್ತು ತುನಿವು ಇಡೀ ತಂಡವು ಚಿತ್ರದ ಟ್ರೈಲರ್‌ ಅನ್ನು ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದೆ. ಟ್ರೈಲರ್‌ ನೋಡುವಾಗ ಮಾಸ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ ನಟ ಅಜಿತ್‌.

ಟ್ರೈಲರ್‌ನಲ್ಲಿ ಅಜಿತ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಬಿಳಿಗಡ್ಡ ಹಾಗೂ ಹೇರ್‌ಸ್ಟೈಲ್‌ ಮೋಡಿ ಮಾಡುತ್ತಿದೆ. ಅಲ್ಲದೆ ಪಕ್ಕಾ ಆ್ಯಕ್ಷನ್‌ ಮೂವಿ ಎನ್ನುವುದನ್ನು ಸಾರಿ ಹೇಳುತ್ತಿದೆ. ಎಚ್ ವಿನೋತ್ ನಿರ್ದೇಶನದ ಈ ಚಿತ್ರವು ಸಂಕ್ರಾಂತಿಯ ಎರಡು ದಿನಗಳ ಮುಂಚಿತವಾಗಿ ಜನವರಿ 12, 2023 ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಮಂಜು ವಾರಿಯರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ದಳಪತಿ ಅಭಿನಯದ ʻವಾರಿಸುʼ ಸಿನಿಮಾ ಬಿಡುಗಡೆಯ ಸಮಯದಲ್ಲೇ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ಜನವರಿ 12 ರಂದು ಎರಡೂ ಚಿತ್ರಗಳು ಥಿಯೇಟರ್‌ಗೆ ಬರುತ್ತಿದ್ದು, ಇಬ್ಬರ ಅಭಿಮಾನಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ | Rashmika Mandanna | ದಳಪತಿ ವಿಜಯ್‌-ರಶ್ಮಿಕಾ ಮಂದಣ್ಣ ಕಾಂಬಿನೇಶನ್‌ ಸಿನಿಮಾಗೆ ನೋಟಿಸ್‌

ಖ್ಯಾತ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವುದು ವಿಶೇಷ. ಈ ಚಿತ್ರಕ್ಕೆ ಮಾಲಿವುಡ್‌ ನಟಿ ಮಂಜು ವಾರಿಯರ್‌ ನಾಯಕಿಯಾಗಿ ನಟಿಸಲಿದ್ದಾರೆ.

ಅಜಿತ್ ನಟನೆಯ ಈಚೆಗಿನ ‘ವಿವೇಗಮ್’, ‘ವೀರಮ್’ ಹಾಗೂ ‘ವಲಿಮೈ’ ಚಿತ್ರಗಳು ಹಿಟ್‌ ಆಗಿದ್ದವು. ಈ ಚಿತ್ರಕ್ಕೆ ಎಚ್‌. ವಿನೋದ್‌ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಅಜಿತ್ ಹಾಗೂ ವಿನೋದ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ʻವಲಿಮೈʼ, ʻನೆರ್ಕೊಂಡ ಪಾರ್ವೈʼ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ | Vijay Thalapathy | ತುನಿವು, ವಾರಿಸು ಪೋಸ್ಟರ್‌ ವಾರ್‌; ಅಜಿತ್‌ ಫ್ಯಾನ್ಸ್‌ ಕೆರಳಿಸಿದ ದಳಪತಿ ಅಭಿಮಾನಿಗಳು

Exit mobile version