Site icon Vistara News

Akshay Kumar | ಆಫೀಸ್‌ನಲ್ಲಿ ಆರತಿ ಎತ್ತಿ ಪೂಜೆ ಮಾಡಿದ ನಟ ಅಕ್ಷಯ್‌ ಕುಮಾರ್‌: ವಿಡಿಯೊ ವೈರಲ್‌!

Akshay Kumar

ಬೆಂಗಳೂರು : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ (Akshay Kumar) ಈ ಬಾರಿ ತಮ್ಮ ಆಫೀಸ್‌ನಲ್ಲಿ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಸ್ವತಃ ತಾವೇ ಪೂಜೆ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವೀಡಿಯೊದಲ್ಲಿ, ಅಕ್ಷಯ್ ಕುಮಾರ್‌ ಮಗ್ನರಾಗಿ ದೇವರಿಗೆ ಆರತಿ ಮಾಡುವ ಸಮಯದಲ್ಲಿ ಅವರ ಸಿಬ್ಬಂದಿ ಕೂಡ ಕಾಣಿಸಿಕೊಂಡಿದ್ದಾರೆ.

ಪೂಜೆ ಮಾಡುತ್ತಿರುವ ವಿಡಿಯೊ ಹಂಚಿಕೊಂಡು, “ಈ ವರ್ಷದಲ್ಲಿ ಇಂದು ನನ್ನ ಅತ್ಯುತ್ತಮ ದಿನ! ನಾನು ಮತ್ತು ನನ್ನ ಕುಟುಂಬದಿಂದ ನಿಮಗೆಲ್ಲ ದೀಪಾವಳಿಯ ಶುಭಾಶಯಗಳುʼʼ ಎಂದು ಬರೆದುಕೊಂಡಿದ್ದಾರೆ. ಶನಿವಾರದಂದು ಅಕ್ಷಯ್‌ ಕುಮಾರ್‌ ದೀಪಾವಳಿ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಹಾಗೂ ತಮ್ಮ ಪತ್ನಿ ಜತೆಗೆ ಇದ್ದ ಫೋಟೊಗಳು ವೈರಲ್‌ ಆಗಿತ್ತು.

ಇದನ್ನೂ ಓದಿ | Akshay Kumar | ಬೇಗ ಬೆಳೆಯುತ್ತಿದ್ದೀಯಾ ಮಗಳೆ ಎಂದ ಅಕ್ಷಯ್‌ ಕುಮಾರ್‌: ಮಗಳ ಜನುಮದಿನಕ್ಕೆ ಸ್ಪೆಷಲ್‌ ವಿಡಿಯೊ!

ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ʻರಾಮಸೇತುʼ ಬಿಡುಗಡೆಗೆ ಕೇವಲ ಒಂದು ದಿನ (ಅಕ್ಟೋಬರ್‌ 25) ಮಾತ್ರ ಬಾಕಿ ಇದೆ. ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರ ಹಿಂದೂ ಮಹಾಕಾವ್ಯ ರಾಮಾಯಣದ ರಾಮಸೇತುವೆಯ ಉಲ್ಲೇಖದಿಂದ ಪ್ರೇರಿತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಂದರ್ಶನವೊಂದರಲ್ಲಿ ಅಕ್ಷಯ್‌ ಕುಮಾರ್‌ ಸಿನಿಮಾ ಕುರಿತು ಮಾತನಾಡಿ “ರಾಮಸೇತು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಬೇರೂರಿದೆ. ಸತ್ಯವನ್ನು ಪ್ರತಿನಿಧಿಸಲು ಮತ್ತು ಹಲವಾರು ಅಪರಿಚಿತ ಸಂಗತಿಗಳನ್ನು ಹೊರತರಲು ಆಳವಾದ ಸಂಶೋಧನೆಯನ್ನು ಅವಲಂಬಿಸಿದೆ. ಈ ಸಿನಿಮಾ ಅತ್ಯಂತ ಆಧ್ಯಾತ್ಮಿಕವಾಗಿ, ಭಾವನಾತ್ಮಕವಾಗಿ ಇರಲಿದೆ. ಶ್ರೀರಾಮ ಮತ್ತು ರಾಮಸೇತುವಿಗೆ ಸಂಬಂಧಿಸಿದ ಮೌಲ್ಯಗಳು ಮತ್ತು ನಂಬಿಕೆಗಳನ್ನು ಎತ್ತಿಹಿಡಿಯಲಾಗುತ್ತಿದೆ ಎಂಬ ಭರವಸೆ ನಾನು ನೀಡಬಲ್ಲೆʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Ram Setu | ಇದೀಗ ಅಕ್ಷಯ್‌ ಕುಮಾರ್‌ ಪುರಾತತ್ವಶಾಸ್ತ್ರಜ್ಞ: ರಾಮ ಸೇತು ಬಿಡುಗಡೆ ದಿನಾಂಕ ಪ್ರಕಟ, ಹೇಗಿದೆ ಟೀಸರ್‌?

Exit mobile version