ಬೆಂಗಳೂರು : ಮನರಂಜನಾ ಕ್ಷೇತ್ರದಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ಅತಿ ಹೆಚ್ಚು ತೆರಿಗೆ ಕಟ್ಟುವ ನಟರಾಗಿ ಹೊರಹೊಮ್ಮಿದ್ದಾರೆ. ವರದಿ ಪ್ರಕಾರ ನಟ ಅಕ್ಷಯ್ ಕುಮಾರ್ ಕಳೆದ ಐದು ವರ್ಷಗಳಿಂದ ಅತಿ ಹೆಚ್ಚು ತೆರಿಗೆ ಪಾವತಿದಾರ. ಆದಾಯ ತೆರಿಗೆ ಇಲಾಖೆಯು ನಟನಿಗೆ ಸಮ್ಮಾನ್ ಪತ್ರ ಹಾಗೂ ಗೌರವ ಪ್ರಮಾಣಪತ್ರವನ್ನೂ ನೀಡಿದೆ.
ಅಕ್ಷಯ್ ಕುಮಾರ್ ಪ್ರಸ್ತುತ ಯುಕೆಯಲ್ಲಿ ಚಿತ್ರೀಕರಣದಲ್ಲಿರುವುದರಿಂದ, ಅವರ ತಂಡವು ಅವರ ಪರವಾಗಿ ಆದಾಯ ತೆರಿಗೆ ಇಲಾಖೆಯಿಂದ ಗೌರವ ಪ್ರಮಾಣಪತ್ರವನ್ನು ಸ್ವೀಕರಿಸಿದೆ. ಅಕ್ಷಯ್ ಕುಮಾರ್ ಅವರ ಬತ್ತಳಿಕೆಯಲ್ಲಿ ಈಗಾಗಲೇ ಹಲವಾರು ಚಿತ್ರಗಳು ಇವೆ. ಭಾರತದ ಅತಿ ಹೆಚ್ಚು ತೆರಿಗೆದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಆಶ್ಚರ್ಯವೇನಿಲ್ಲ.
ಇದನ್ನೂ ಓದಿ | ವಿಮಲ್‌ಗಾಗಿ ಫ್ಯಾನ್ಸ್ ಕ್ಷಮೆ ಯಾಚಿಸಿದ ಅಕ್ಷಯ್ ಕುಮಾರ್
ಸಿನಿಮಾಗಳಲ್ಲಿ ಬ್ಯಸಿಯಾದ ಅಕ್ಷಯ್ ಕುಮಾರ್
ಸಾಲು ಸಾಲು ಸಿನಿಮಾಗಳಲ್ಲಿ ಈಗಾಗಲೇ ಬ್ಯುಸಿಯಾಗಿರುವ ನಟ ಅಕ್ಷಯ್ ಕುಮಾರ್ ಯುಕೆಯಲ್ಲಿ ʻಟಿನು ದೇಸಾಯಿʼ ಅವರೊಂದಿಗೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಹಿಂದೆ ʻಸಾಮ್ರಾಟ್ ಪೃಥ್ವಿರಾಜ್ʼʼ ಚಿತ್ರದಲ್ಲಿ ಮಾನುಷಿ ಚಿಲ್ಲರ್ ಜತೆ ನಟಿಸಿದ್ದರು. ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸ್ ಆಫೀಸ್‌ನಲ್ಲಿ ಸಾಮಾನ್ಯ ಕಲೆಕ್ಷನ್ ಮಾಡಿತು.
ಅಕ್ಷಯ್ ಕುಮಾರ್ ಅವರ ನಟನೆಯ ʻರಕ್ಷಾ ಬಂಧನʼ, ʻರಾಮ್ ಸೇತುʼ ಮತ್ತು ʻಸೆಲ್ಫಿʼ, ʻಓ ಮೈ ಗಾಡ್ 2ʼ, ‘ಸೂರರೈ ಪೋಟ್ರು’ ರಿಮೇಕ್, ʻಬಡೇ ಮಿಯಾನ್ ಚೋಟೆ ಮಿಯಾನ್ʼ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಸಿನಿಮಾಗಳು ಬಿಡುಗಡೆಗೊಳ್ಳಲು ಸಜ್ಜಾಗಿವೆ.
ಇತ್ತೀಚೆಗೆ, ಸಮಂತಾ ರುತ್ ಪ್ರಭು ಅವರೊಂದಿಗೆ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 7ನಲ್ಲಿ ಅಕ್ಷಯ್ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರು ಹಲವಾರು ಜಾಹಿರಾತುಗಳ ಮೂಲಕ ಸ್ಫೂರ್ತಿ ಸಂದೇಶಗಳನ್ನು ನೀಡುತ್ತಲೇ ಇರುತ್ತಾರೆ.
ಇದನ್ನೂ ಓದಿ | Koffee With Karan | ಮಾಜಿ ಪತಿ ಬಗ್ಗೆ ಸಮಂತಾ ವ್ಯಂಗ್ಯ: ಹೊಸ ವ್ಯಕ್ತಿಯಾಗಿದ್ದೇನೆಂದ ನಾಗ ಚೈತನ್ಯ