ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ ಸಿನಿಮಾ (OMG 2 Film) ನಿಧಾನವಾಗಿ ಒಳ್ಳೆಯ ಕಲೆಕ್ಷನ್‌ನತ್ತ ಮುಖ ಮಾಡುತ್ತಿದೆ. 100 ಕೋಟಿ ರೂ. ಸನಿಹದಲ್ಲಿದೆ ಎಂದೂ ವರದಿಯಾಗಿದೆ. ಅನೇಕ ವರದಿಗಳು ಸಿನಿಮಾ ಫ್ಲಾಪ್ ಎಂದು ಘೋಷಿಸಿವೆ. 150 ಕೋಟಿ ರೂ. ಬಜೆಟ್‌ನಲ್ಲಿ (Akshay Kumar’s latest film OMG 2) ಚಿತ್ರ ನಿರ್ಮಿಸಲಾಗಿದೆ ಎಂಬ ಗಾಸಿಪ್‌ಗಳು ಇದೆ. ಇದರ ಜತೆಗೆ ಸಿನಿಮಾ ಕೇವಲ 50 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎನ್ನುತ್ತಿದೆ ಒಂದು ಮೂಲ. ಇದೀಗ ಚಿತ್ರದ ವಿತರಕರಾದ ಅಜಿತ್ ಅಂಧಾರೆ (Ajit Andhare) ಅವರು ʻʻಸಿನಿಮಾದ ಪಾತ್ರಕ್ಕಾಗಿ ಅಕ್ಷಯ್ ಅವರು ಪೈಸೆಯನ್ನೂ ಪಡೆದಿಲ್ಲʼʼ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
OMG 2 ಬಜೆಟ್ ಬಗ್ಗೆ ಅಜಿತ್ ಅಂಧಾರೆ ಮನರಂಜನಾ ಪೋರ್ಟಲ್‌ಗೆ ಹೇಳಿಕೆ ನೀಡಿ , “OMG 2 ಸಿನಿಮಾ ಬಜೆಟ್‌ನ ವರದಿಗಳು ಉತ್ಪ್ರೇಕ್ಷಿತವಾಗಿವೆ. ಇದಕ್ಕೆ ತದ್ವಿರುದ್ಧವಾಗಿ, ಅಕ್ಷಯ್ ಅವರು ಒಂದು ರೂಪಾಯಿಯನ್ನೂ ಅವರ ಪಾತ್ರಕ್ಕೆ ಪಡೆದಿಲ್ಲʼʼ ಎಂದಿದ್ದಾರೆ. “OMG, ಸ್ಪೆಷಲ್ 26, ಮತ್ತು ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸಿನಿಮಾಗಳಿಂದಲೂ ನಾವು ಅವರೊಂದಿಗೆ ಇದ್ದೇವೆ. ಅಕ್ಷಯ್ ಅವರು ಇಲ್ಲದಿದ್ದರೆ ʼಓ ಮೈ ಗಾಡ್ʼ ಸಿನಿಮಾದಲ್ಲಿ ರಿಸ್ಕ್ ತೆಗೆದುಕೊಳ್ಳಲು ಆಗುತ್ತಿರಲಿಲ್ಲʼʼ ಎಂದು ಅಜಿತ್ ಹೇಳಿದರು. ವರದಿಯ ಪ್ರಕಾರ 50 ಕೋಟಿ ರೂ. ಬಜೆಟ್ ಸಿನಿಮಾವಾಗಿದೆ ಎನ್ನಲಾಗಿದೆ.
ಈ ಚಿತ್ರ 201ರಲ್ಲಿ ಬಿಡುಗಡೆಯಾದ ʼಓ ಮೈ ಗಾಡ್ʼನ ಮುಂದುವರಿದ ಭಾಗವಾಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ʼಎʼ ಪ್ರಮಾಣ ಪತ್ರ ನೀಡಿದೆ. ಅದಕ್ಕೂ ಮುನ್ನ ಚಿತ್ರ 12 ನಿಮಿಷಗಳನ್ನು ಕಾಲದ ಫೂಟೇಜ್ ಅನ್ನು ಕತ್ತರಿಸಲು ನಿರ್ದೇಶಿಸಿತ್ತು. ಅಮಿತ್ ರೈ ನಿರ್ದೇಶನ ಈ ಸಿನಿಮಾಕ್ಕಿದೆ. ಸನ್ನಿ ಡಿಯೋಲ್ ಅವರ ಸೂಪರ್ ಹಿಟ್ ಗದರ್ 2 ಜತೆಗೆ OMG 2 ಆಗಸ್ಟ್ 11ರಂದು ಬಿಡುಗಡೆಯಾಯಿತು. ಚಿತ್ರವು ಒಂದು ವಾರದಲ್ಲಿ 84.72 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: OMG 2 Film: ಹೀರೋ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದವರಿಗೆ 10 ಲಕ್ಷ ರೂ. ಸಿಗುತ್ತಂತೆ!
2012ರಲ್ಲಿ ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ ಪಾರ್ಟ್ 2ನಲ್ಲಿ ಅಕ್ಷಯ್ ಪಾತ್ರ ಕೂಡ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ ಅವತಾರವೆತ್ತಿದ್ದಾರೆ.
ಇದನ್ನೂ ಓದಿ: Gadar 2 Box Office: ʼಜೈಲರ್ʼ ಗಳಿಕೆಯನ್ನು ಹಿಂದಿಕ್ಕಿದ ಗದರ್ 2; ಸ್ವಾತಂತ್ರ್ಯ ದಿನ ಅತಿ ಹೆಚ್ಚು ಕಲೆಕ್ಷನ್!
ವಿವಾದಕ್ಕೆ ಗುರಿಯಾದ ಓ ಮೈ ಗಾಡ್ 2
ʼಓಹ್ ಮೈ ಗಾಡ್ 2ʼ (Oh My God 2) ಚಿತ್ರದಲ್ಲಿ ಭಗವಾನ್ ಶಿವನ ಸಂದೇಶವಾಹಕನ ಹಾಸ್ಯಾಸ್ಪದ ಪಾತ್ರದ ಮೂಲಕ ಅಕ್ಷಯ್ ಕುಮಾರ್ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಹಲವೆಡೆ ಆಕ್ರೋಶಕ್ಕೆ ಗುರಿಯಾಗಿತ್ತು. .ಇತರ ನಗರಗಳಲ್ಲಿಯೂ ಚಿತ್ರದ ವಿರುದ್ಧ ಒಂದು ವರ್ಗದಿಂದ ಆಕ್ರೋಶ ವ್ಯಕ್ತವಾಗಿತ್ತು. ಬಾಲಿವುಡ್ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಯಾವುದೇ ಧರ್ಮವನ್ನೂ ಟೀಕಿಸುವುದಿಲ್ಲ. ಈ ಹಿಂದೆಯೂ ಬೆಳ್ಳಿತೆರೆಯಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಲಾಗಿದೆ. ಹಿಂದೂಗಳ ನಂಬಿಕೆಯೊಂದಿಗೆ ಆಟವಾಡಬಾರದು ಎಂದು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.