Site icon Vistara News

Akshay Kumar: ʻಇಂಡಿಯಾʼ ಹೆಸರು ಬದಲಿಸಿ, ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿದ ಅಕ್ಷಯ್‌ ಕುಮಾರ್‌!

Akshay Kumar poster of Mission Raniganj

ಅಕ್ಷಯ್ ಕುಮಾರ್ (Akshay Kumar) ಹೊಸ ಚಿತ್ರದೊಂದಿಗೆ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾರೆ. ʻಮಿಷನ್ ರಾಣಿಗಂಜ್‌ʼ (Mission Raniganj) ಸಿನಿಮಾದ ಮೋಷನ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ. ‘ಮಿಷನ್​ ರಾಣಿಗಂಜ್’ (Mission Raniganj Movie) ಚಿತ್ರ ಅಕ್ಟೋಬರ್ 6ರಂದು ರಿಲೀಸ್ ಆಗುತ್ತಿದೆ. ಈ ಮೊದಲು ಈ ಸಿನಿಮಾಗೆ ʻದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ ʼಎಂಬ ಟೈಟಲ್‌ ಫಿಕ್ಸ್‌ ಆಗಿತ್ತು. ʻಭಾರತʼ ಎಂದು ಬದಲಾಯಿಸುವ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿರುವುದರಿಂದ ಈ ಸಿನಿಮಾಗೆ ʻಮಿಷನ್​ ರಾಣಿಗಂಜ್ʼ ಶೀರ್ಷಿಕೆ ಫಿಕ್ಸ್‌ ಆಗಿದೆ. ಈ ಸಿನಿಮಾದ ಫಸ್ಟ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಬ್ಯಾಕ್‌ ಟು ಬ್ಯಾಕ್‌ ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳು ಸೋತಿದ್ದು ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ.

ದಿ ಗ್ರೇಟ್‌ ಭಾರತ್‌ ರೆಸ್ಕ್ಯೂ!

ಇಂಡಿಯಾ ಹೆಸರಿನ ಬದಲಿಗೆ ಭಾರತ ಎಂದು ಬದಲಾಯಿಸುವ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿದೆ. ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ‘ಇಂಡಿಯಾ’ ಎಂದು (The Great ‘Bharat’ Rescue) ಬಳಸುವುದನ್ನೇ ನಿಲ್ಲಿಸಿದ್ದಾರೆ. ಈ ನಡುವೆ ತಮ್ಮ ಸಿನಿಮಾದಲ್ಲಿ ‘ಇಂಡಿಯಾ’ ಎಂದು ಹೆಸರಿದ್ದ ಕಾರಣ ಸಿನಿಮಾದ ಹೆಸರನ್ನು ನಟ ಅಕ್ಷಯ್ ಕುಮಾರ್ ಕೂಡ ಬದಲಾಯಿಸಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ (The Great Indian Rescue) ಹೆಸರನ್ನು ಬದಲಿಸಿ ‘ಮಿಷನ್ ರಾಣಿಗಂಜ್’ ಎಂದು ಹೆಸರಿಡಲಾಗಿದೆ. ಮಿಷನ್ ರಾಣಿಗಂಜ್ ಸಿನಿಮಾದ ಮೋಷನ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿದೆ.

ಇದನ್ನೂ ಓದಿ: Akshay Kumar: ಕೊನೆಗೂ ಭಾರತೀಯ ನಾಗರಿಕರಾದ ಅಕ್ಷಯ್ ಕುಮಾರ್! ಇನ್ನು ‘ಕೆನಡಾ ಕುಮಾರ್’ ಅಂದ್ರೆ ಹುಷಾರ್!

ಮೋಷನ್‌ ಪೋಸ್ಟರ್‌

ರಾಣಿಗಂಜ್ ಪ್ರದೇಶದಲ್ಲಿನ ಗಣಿಯೊಂದರಲ್ಲಿ ಸಿಲುಕಿದ್ದ 65 ಕಾರ್ಮಿಕರನ್ನು ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ (Jaswant Singh Gill) ರಕ್ಷಣೆ ಮಾಡಿದ ನಿಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜಸ್ವಂತ್ ಸಿಂಗ್ ಗಿಲ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಅಕ್ಷಯ್ ಕುಮಾರ್ ಹುಟ್ಟುಹಬ್ಬವಾದ ಸೆಪ್ಟೆಂಬರ್ 9ಕ್ಕೆ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿದೆ.

ಟಿನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪರಿಣಿತಿ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ.  ಅಕ್ಟೋಬರ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಕ್ಷಯ್ ಇತ್ತೀಚೆಗೆ ಸ್ವಾತಂತ್ರ್ಯ ದಿನದಂದು ಭಾರತೀಯ ಪೌರತ್ವ ಪಡೆದಿರುವುದಾಗಿ ಘೋಷಿಸಿದರು. ನಟ ಈ ಹಿಂದೆ ಕೆನಡಾದ ಪೌರತ್ವವನ್ನು ಮಾತ್ರ ಹೊಂದಿದ್ದರು. ಕುತೂಹಲಕಾರಿಯಾಗಿ, ಮಿಷನ್ ರಾಣಿಗಂಜ್ ನಿರ್ದೇಶಕರೊಂದಿಗಿನ ಅಕ್ಷಯ್ ಅವರ ಎರಡನೇ ಸಿನಿಮಾವಾಗಿದೆ. ರುಸ್ತಮ್ (2016) ಸಿನಿಮಾಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

Exit mobile version