ಬೆಂಗಳೂರು: ಹಬ್ಬದ (Festive Season) ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮತ್ತೊಂದು ನವರಾತ್ರಿ ಹಾಡು (Navaratri Song) ಬರೆದಿದ್ದಾರೆ. ಭಾನುವಾರ (ಅ.15) ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ‘ಮಾಡಿ’ (Maadi Song) ಎಂಬ ಶೀರ್ಷಿಕೆಯ ಸಾಂಗ್ ಪೋಸ್ಟ್ ಮಾಡಿದ್ದಾರೆ. ಈ ಹಾಡಿಗೆ ಮೋದಿ ಅವರು ಸಾಹಿತ್ಯ ರಚಿಸಿದ್ದಾರೆ(Modi lyricist). ಹಾಡನ್ನು ಅನಾವರಣಗೊಳಿಸಿದ ಮೋದಿಯವರ ಟ್ವೀಟ್‌ಗೆ ಅಕ್ಷಯ್ ಕುಮಾರ್ ,ಕಂಗನಾ ರಣಾವತ್, ಅನುಪಮ್ ಖೇರ್ ಮತ್ತು ಜೂಹಿ ಚಾವ್ಲಾ ಅವರಂತಹ ಸೆಲೆಬ್ರಿಟಿಗಳು ಮೋದಿಯವರನ್ನು ಶ್ಲಾಘಿಸಿದ್ದಾರೆ.
ಮೋದಿ ಟ್ವೀಟ್‌ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ
ವಿಡಿಯೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ನಮಗೆ ಶುಭಕರವಾದ ನವರಾತ್ರಿಯು ಉದಯಿಸುತ್ತಿದ್ದಂತೆ, ಕಳೆದ ವಾರದಲ್ಲಿ ನಾನು ಬರೆದ ಗರ್ಬಾವನ್ನು ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ. ಹಬ್ಬದ ಲಯಗಳು ಎಲ್ಲರನ್ನೂ ಅಪ್ಪಿಕೊಳ್ಳಲಿ! ಈ ಗರ್ಬಾಗೆ ಧ್ವನಿ ಮತ್ತು ಸಂಗೀತ ನೀಡಿದ ಮೀಟ್ ಬ್ರದರ್ಸ್ ಮತ್ತು ದಿವ್ಯಾ ಕುಮಾರ್ ಅವರಿಗೆ ನಾನು ಧನ್ಯವಾದಗಳು ಎಂದು ಹೇಳಿದ್ದಾರೆ.
ಇದೀಗ ಅಕ್ಷಯ್ ಕುಮಾರ್ ಟ್ವೀಟ್‌ಗೆ ಪ್ರತಿಕ್ರಿಯಿಸಿ ʻʻಈಗ ನೀವು ನಮ್ಮ ಕ್ಷೇತ್ರದಲ್ಲೂ ಇದ್ದೀರಿ…ನಾವು ಈಗ ಎಲ್ಲಿಗೆ ಹೋಗಬೇಕು? ನಿಮಗೆ ಮತ್ತು ಎಲ್ಲರಿಗೂ ಶುಭ ನವರಾತ್ರಿ.” ಎಂದು ಬರೆದಿದ್ದಾರೆ. ಕಂಗನಾ ರಣಾವತ್, ಅನುಪಮ್ ಖೇರ್, ಜೂಹಿ ಚಾವ್ಲಾ ಕೂಡ ಹಾಡಿ ಹೊಗಳಿದ್ದಾರೆ. ಕಂಗನಾ ಕೂಡ ನರೇಂದ್ರ ಮೋದಿಯವರ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ “ಒತ್ತಡದ ದಿನಗಳ ಮಧ್ಯೆಯೂ ಪ್ರಧಾನಮಂತ್ರಿ ಹೇಗೆ ಆದ್ಯತೆ ನೀಡುತ್ತಾರೆ. ಸೃಜನಾತ್ಮಕ ಭಕ್ತಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Akshay Kumar: ಸಿನಿಮಾಗಳಲ್ಲಿ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತಿಲ್ಲ ಎಂದ ಅಕ್ಷಯ್ ಕುಮಾರ್
This is amazing @narendramodi ji! Sir ab aap hamare field mein bhi…hum kahan jayein? 😊
— Akshay Kumar (@akshaykumar) October 15, 2023
Shubh Navratri to you and everyone 🙏
ಜೂಹಿ ಚಾವ್ಲಾ ಅವರು ಹಾಡಿನ ಸಾಹಿತ್ಯ ಮತ್ತು ಸಂಯೋಜನೆಯನ್ನು ಹೊಗಳಿದರು. ʻʻನರೇಂದ್ರ ಭಾಯಿಯವರಿಗೆ ಅಭಿನಂದನೆಗಳು ಅವರ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ನೋಡಿ ಆಶ್ಚರ್ಯಚಕಿರಾಗಿದ್ದೇವೆ. ಸುಂದರವಾದ ಹಾಡು, ಹೃದಯಸ್ಪರ್ಶಿ ಸಾಹಿತ್ಯ, ಸಂಯೋಜನೆ ಮತ್ತು ಗಾಯನ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯ ಬಗ್ಗೆ ತುಂಬಾ ಹೆಮ್ಮೆ ನಮಗೆ ಇದೆ. ಈ ಶ್ರೇಷ್ಠ ಸಂಸ್ಕೃತಿಯನ್ನು ಪಡೆದ ಭಾರತೀಯನಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ. ಎಲ್ಲರಿಗೂ ನವರಾತ್ರಿಯ ಶುಭಾಶಯಗಳುʼʼಎಂದು ಬರೆದುಕೊಂಡಿದ್ದಾರೆ. ನರೇಂದ್ರ ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಅನುಪಮ್ ಖೇರ್ ಸರಳವಾಗಿ “ಜೈ ಹೋ” ಎಂದು ಕಮೆಂಟ್ ಮಾಡಿದ್ದಾರೆ.
ಮಾಡಿ ಹಾಡು ನವರಾತ್ರಿಯ ಸೌಂದರ್ಯವನ್ನು ವರ್ಣಿಸುತ್ತದೆ. ಗುಜರಾತ್‌ನ ಶ್ರೀಮಂತ ಸಂಸ್ಕೃತಿ ಮತ್ತು ವರ್ಣರಂಜಿತ ಬದುಕನ್ನು ತೆರೆದಿಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಹಾಡಿಗೆ ದಿವ್ಯಾ ಕುಮಾರ್ ಅವರು ಧ್ವನಿ ನೀಡಿದ್ದಾರೆ. ಮನ್ಮೀತ್ ಸಿಂಗ್ ಮತ್ತು ಹರ್ಮೀತ್ ಸಿಂಗ್ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ.