ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳು ಸತತವಾಗಿ ಸೋಲುಂಡಿವೆ. ಅಕ್ಷಯ್ ಕುಮಾರ್ (Akshay Kumar) ಮತ್ತು ಇಮ್ರಾನ್ ಹಶ್ಮಿ (Emraan Hashmi) ಒಟ್ಟಿಗೆ ನಟಿಸಿರುವ ಸೆಲ್ಫಿ ಸಿನಿಮಾ ಫೆ.24ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಅಷ್ಟಾಗಿ ಗಳಿಕೆ ಕಂಡಿಲ್ಲ. ಇದೀಗ ಸೆಲ್ಫಿ ಸಿನಿಮಾ (selfiee) 2.5 ಕೋಟಿ ರೂ. ನೀರಸ ಸಂಗ್ರಹ ಮಾಡಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ತನ್ನನ್ನು ಬದಲಾಯಿಸಿಕೊಳ್ಳುವ ಸಮಯ ಎಂದು ಹೇಳಿದ್ದಾರೆ. ಜತೆಗೆ ಸೋಲಿನ ಹೊಣೆಯನ್ನು ಅಕ್ಷಯ್ ಕುಮಾರ್ ಅವರೇ ಹೊತ್ತುಕೊಂಡಿದ್ದಾರೆ.
2021ರಲ್ಲಿ ಬಿಡುಗಡೆಯಾದ ರೋಹಿತ್ ಶೆಟ್ಟಿ ಅವರ ಸೂರ್ಯವಂಶಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದೇ ಅಕ್ಷಯ್ ಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡಿದ ಕೊನೆಯ ಚಿತ್ರ. ಅವರ ಸತತ ನಾಲ್ಕು ಫ್ಲಾಪ್ ಚಿತ್ರಗಳ ಬಗ್ಗೆ ಅಭಿಪ್ರಾಯವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
‘ಈ ಸೋಲು ನನಗೆ ಮೊದಲಲ್ಲ. ನನ್ನ ವೃತ್ತಿ ಜೀವನದಲ್ಲಿ ಸತತ 16 ಫ್ಲಾಪ್‌ಗಳನ್ನು ಅನುಭವಿಸಿದ ಸಮಯವಿತ್ತು. ಈಗ ನಾನು ಸತತವಾಗಿ ಮೂರು-ನಾಲ್ಕು ಚಿತ್ರಗಳನ್ನು ಹೊಂದಿದ್ದೇನೆ. ಪ್ರೇಕ್ಷಕರು ಬದಲಾಗಿರುವುದರಿಂದ ತಾರೆಯರೂ ಬದಲಾಗಬೇಕು. ನಿಮ್ಮ ಚಿತ್ರಗಳು ಸತತವಾಗಿ ವಿಫಲವಾದಾಗ, ನೀವು ಬದಲಾಗುವುದು ಒಂದು ಎಚ್ಚರಿಕೆʼʼಎಂದು ಹೇಳಿದರು. ʻʻನಾನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಪ್ರೇಕ್ಷಕರನ್ನು ಅಥವಾ ಬೇರೆಯವರನ್ನು ದೂಷಿಸಬೇಡಿ. 100% ಇದು ನನ್ನ ತಪ್ಪು ಇದು ಸಂಪೂರ್ಣ ನನ್ನ ಆಯ್ಕೆಯ ಮೇಲಿರುತ್ತದೆ.’ ಎಂದು ಹೇಳಿದರು.
ಇದನ್ನೂ ಓದಿ: Akshay Kumar : ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಕಾಂಬಿನೇಶನ್ ಸೆಲ್ಫಿ ಸಿನಿಮಾ ಮೊದಲ ದಿನದ ಕಲೆಕ್ಷನ್ ಅತೀ ಕನಿಷ್ಠ!
ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ ಮತ್ತು ರಾಮ್ ಸೇತು ಸೇರಿದಂತೆ ಅಕ್ಷಯ್ ಅವರ ಸಿನಿಮಾಗಳು ಬ್ಯಾಕ್-ಟು-ಬ್ಯಾಕ್ ಫ್ಲಾಪ್ ಆಗಿವೆ. ಮುಂದೆ, ಅವರು ಓ ಮೈ ಗಾಡ್ 2, ಬಡೇ ಮಿಯಾನ್ ಚೋಟೆ ಮಿಯಾನ್ ಮತ್ತು ಸೂರರೈ ಪೊಟ್ರು ರಿಮೇಕ್, ಕ್ಯಾಪ್ಸುಲ್ ಗಿಲ್, ಹೇರಾ ಫೇರಿ ಹೀಗೆ ನಾಲ್ಕು ಚಿತ್ರಗಳನ್ನು ಹೊಂದಿದ್ದಾರೆ.