Site icon Vistara News

Akshay Kumar | ಅಕ್ಷಯ್‌ ಕುಮಾರ್‌-ಇಮ್ರಾನ್ ಹಾಶ್ಮಿ ಕಾಂಬಿನೇಶನ್‌ ಸೆಲ್ಫಿ ಸಿನಿಮಾ ಮೋಷನ್‌ ಪೋಸ್ಟರ್‌ ಔಟ್‌

Akshay Kumar

ಬೆಂಗಳೂರು: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ (Akshay Kumar) ಹಾಗೂ ಇಮ್ರಾನ್ ಹಾಶ್ಮಿ (Emraan Hashmi) ಒಟ್ಟಿಗೆ ಕಾಣಿಸಿಕೊಂಡಿರವ ‘ಸೆಲ್ಫಿ’ (Selfiee) ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಚಿತ್ರದಲ್ಲಿ ಡಯಾನಾ ಪೆಂಟಿ ಮತ್ತು ನುಸ್ರತ್‌ ಭರುಚಾ ನಾಯಕಿಯರಾಗಿ ನಟಿಸಿದ್ದಾರೆ.

ಸೆಲ್ಫಿ ಘೋಷಣೆಯಾದಾಗಿನಿಂದ, ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಾಶ್ಮಿ ಅವರ ಜೋಡಿಯನ್ನು ನೋಡಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಜನವರಿ 15 ರಂದು ಸಂಕ್ರಾಂತಿಗೆ ಸೆಲ್ಫಿ ಚಿತ್ರದ ಮೋಷನ್‌ ಪೋಸ್ಟರ್‌, ರಿಲೀಸ್‌ ಆಗಿದೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Akshay Kumar | ಆಫೀಸ್‌ನಲ್ಲಿ ಆರತಿ ಎತ್ತಿ ಪೂಜೆ ಮಾಡಿದ ನಟ ಅಕ್ಷಯ್‌ ಕುಮಾರ್‌: ವಿಡಿಯೊ ವೈರಲ್‌!

ರಾಜ್ ಮೆಹ್ತಾ ನಿರ್ದೇಶಿಸಿದ ಸೆಲ್ಫಿ ಮಲಯಾಳಂನ ʻಡ್ರೈವಿಂಗ್ ಲೈಸೆನ್ಸ್ʼ ಚಿತ್ರದ ರಿಮೇಕ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳನ್ನು ಅಕ್ಷಯ್ ಮತ್ತು ಇಮ್ರಾನ್ ಅಭಿನಯಿಸಲಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಹ-ನಿರ್ಮಾಣ ಮಾಡಿದೆ.

ಇದನ್ನೂ ಓದಿ | Akshay Kumar | ಲೈಂಗಿಕ ಶಿಕ್ಷಣ ಕುರಿತು ಸಿನಿಮಾ ಮಾಡಲಿದ್ದಾರೆ ಅಕ್ಷಯ್‌ ಕುಮಾರ್‌!

Exit mobile version