Site icon Vistara News

Akshay Kumar: ಅಕ್ಷಯ್ ಕುಮಾರ್-ಇಮ್ರಾನ್ ಹಶ್ಮಿ ನಟನೆಯ ಸೆಲ್ಫಿ ಸಿನಿಮಾ ಟ್ರೈಲರ್‌ ಔಟ್‌

Akshay Kumar Selfiee trailer out

ಬೆಂಗಳೂರು : ಅಕ್ಷಯ್ ಕುಮಾರ್ (Akshay Kumar) ಮತ್ತು ಇಮ್ರಾನ್ ಹಶ್ಮಿ ಒಟ್ಟಿಗೆ ನಟಿಸಿರುವ ಸೆಲ್ಫಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಲನಚಿತ್ರವು ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ಇದಕ್ಕೂ ಮುಂಚೆ ಅಕ್ಷಯ್ ಕುಮಾರ್‌ ಸೋಷಿಯಲ್‌ ಮೀಡಿಯಾ ಮೂಲಕ ಸೆಲ್ಫಿಯ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ.

ವಿಜಯ್ ಪಾತ್ರದಲ್ಲಿ ಅಕ್ಷಯ್‌ ಮಿಂಚುತ್ತಿದ್ದಾರೆ. ಅವರ ಕಟ್ಟಾ ಅಭಿಮಾನಿಯಾಗಿರುವ ಓಂ ಪ್ರಕಾಶ್ ಅಗರ್ವಾಲ್ ಎಂಬ ಅಧಿಕಾರಿಯ ಪಾತ್ರದಲ್ಲಿ ಇಮ್ರಾನ್ ನಟಿಸಿದ್ದಾರೆ. ಚಿತ್ರದಲ್ಲಿ ಡಯಾನಾ ಪೆಂಟಿ ಮತ್ತು ನುಸ್ರತ್‌ ಭರುಚಾ ನಾಯಕಿಯರಾಗಿ ನಟಿಸಿದ್ದಾರೆ. ಸೆಲ್ಫಿ ಘೋಷಣೆಯಾದಾಗಿನಿಂದ, ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಾಶ್ಮಿ ಅವರ ಜೋಡಿಯನ್ನು ನೋಡಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:Akshay Kumar | ಅಕ್ಷಯ್‌ ಕುಮಾರ್‌-ಇಮ್ರಾನ್ ಹಾಶ್ಮಿ ಕಾಂಬಿನೇಶನ್‌ ಸೆಲ್ಫಿ ಸಿನಿಮಾ ಮೋಷನ್‌ ಪೋಸ್ಟರ್‌ ಔಟ್‌

ಇದನ್ನೂ ಓದಿ: Akshay Kumar | ಬೇಗ ಬೆಳೆಯುತ್ತಿದ್ದೀಯಾ ಮಗಳೆ ಎಂದ ಅಕ್ಷಯ್‌ ಕುಮಾರ್‌: ಮಗಳ ಜನುಮದಿನಕ್ಕೆ ಸ್ಪೆಷಲ್‌ ವಿಡಿಯೊ!

ರಾಜ್ ಮೆಹ್ತಾ ನಿರ್ದೇಶಿಸಿದ ಸೆಲ್ಫಿ ಮಲಯಾಳಂನ ʻಡ್ರೈವಿಂಗ್ ಲೈಸೆನ್ಸ್ʼ ಚಿತ್ರದ ರಿಮೇಕ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳನ್ನು ಅಕ್ಷಯ್ ಮತ್ತು ಇಮ್ರಾನ್ ಅಭಿನಯಿಸಲಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಹ-ನಿರ್ಮಾಣ ಮಾಡಿದೆ.

Exit mobile version