ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ ಯಶಸ್ಸಿನ ನಂತರ, ‘ಸ್ಕೈ ಫೋರ್ಸ್’ ಸಿನಿಮಾದೊಂದಿಗೆ ಮತ್ತೆ ಕಮ್‌ಬ್ಯಾಕ್ ಆಗಿದ್ದಾರೆ. ಈ ಸಿನಿಮಾ 2024ರ ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಚಿತ್ರದ ಟೀಸರ್ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಆಗಿದ್ದು, ಅವರ ಅಧಿಕಾರಾವಧಿಯ ಕೆಲವು ತುಣುಕುಗಳು ಟೀಸರ್‌ನಲ್ಲಿದೆ.
‘ಸ್ಕೈ ಫೋರ್ಸ್’ ಟೀಸರ್ ಔಟ್
ʻʻಈ ಚಲನಚಿತ್ರವು ನೈಜ ಕಥೆಯಾಗಿದೆ. ಈ ನಂಬಲಾಗದ ಕಥೆಯನ್ನು ಪ್ರಕಟಿಸಲು ಇಂದಿನ ದಿನಕ್ಕಿಂತ ಉತ್ತಮ ದಿನವಿಲ್ಲ. ಭಾರತದ ಮೊದಲ ಮತ್ತು ಭೀಕರ ವಾಯುದಾಳಿಯ ಕಥೆ. ಜೈ ಹಿಂದ್, ಜೈ ಭಾರತ್. ಜಿಯೋ ಸ್ಟುಡಿಯೋಸ್ ಮತ್ತು ದಿನೇಶ್ ವಿಜನ್, ಸ್ಕೈ ಪ್ರಸ್ತುತಪಡಿಸಿದ್ದಾರೆ. 2024ರ 2ನೇ ಅಕ್ಟೋಬರ್‌ದಂದು ಚಿತ್ರಮಂದಿರಗಳಲ್ಲಿ ಫೋರ್ಸ್ ಹಾರಾಟ ನಡೆಸುತ್ತದೆ.” ಎಂದು ಚಿತ್ರತಂಡ ಪೋಸ್ಟ್ ಹಂಚಿಕೊಂಡು ಟೀಸರ್ ರಿಲೀಸ್ ಮಾಡಿದೆ.
ಆ ಕಾಲದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾಷಣದ ಕ್ಲಿಪ್ ಕೂಡ ಇದೆ. ಅಕ್ಷಯ್ ಕುಮಾರ್ ಕಳೆದ ಕೆಲವು ವಾರಗಳಿಂದ ಚಿತ್ರದ ಶೂಟಿಂಗ್‌ನಲ್ಲಿ ಇದ್ದರು. ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಕೂಡ ಚಿತ್ರದ ಭಾಗವಾಗಿದ್ದಾರೆ ಎಂದು ವರದಿಯಾಗಿದೆ. ಸಂದೀಪ್ ಕೆಲ್ವಾನಿ ಮತ್ತು ಅಭಿಷೇಕ್ ಕಪೂರ್ ಸಹ-ನಿರ್ದೇಶನ, ಅಮರ್ ಕೌಶಿಕ್ ಅವರನಿರ್ಮಾಣದೊಂದಿಗೆ, ಸ್ಕೈ ಫೋರ್ಸ್ ಅನ್ನು ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ.
ʻಮಿಷನ್ ರಾಣಿಗಂಜ್ʼ ಮೋಷನ್ ಪೋಸ್ಟರ್
ಅಕ್ಷಯ್ ಕುಮಾರ್ (Akshay Kumar) ಕೆಲವು ದಿನಗಳ ಹಿಂದೆ ʻಮಿಷನ್ ರಾಣಿಗಂಜ್ʼ (Mission Raniganj) ಸಿನಿಮಾದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದರು. ‘ಮಿಷನ್ ರಾಣಿಗಂಜ್’ (Mission Raniganj Movie) ಚಿತ್ರ ಅಕ್ಟೋಬರ್ 6ರಂದು ರಿಲೀಸ್ ಆಗುತ್ತಿದೆ. ಈ ಮೊದಲು ಈ ಸಿನಿಮಾಗೆ ʻದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ ʼಎಂಬ ಟೈಟಲ್ ಫಿಕ್ಸ್ ಆಗಿತ್ತು. ʻಭಾರತʼ ಎಂದು ಬದಲಾಯಿಸುವ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿರುವುದರಿಂದ ಈ ಸಿನಿಮಾಗೆ ʻಮಿಷನ್ ರಾಣಿಗಂಜ್ʼ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಸಿನಿಮಾದ ಫಸ್ಟ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಬ್ಯಾಕ್ ಟು ಬ್ಯಾಕ್ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಸೋತಿದ್ದು ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ: Akshay Kumar: ʻಇಂಡಿಯಾʼ ಹೆಸರು ಬದಲಿಸಿ, ಮೋಷನ್ ಪೋಸ್ಟರ್ ರಿಲೀಸ್ ಮಾಡಿದ ಅಕ್ಷಯ್ ಕುಮಾರ್!
ದಿ ಗ್ರೇಟ್ ಭಾರತ್ ರೆಸ್ಕ್ಯೂ!
ಇಂಡಿಯಾ ಹೆಸರಿನ ಬದಲಿಗೆ ಭಾರತ ಎಂದು ಬದಲಾಯಿಸುವ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿದೆ. ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ‘ಇಂಡಿಯಾ’ ಎಂದು (The Great ‘Bharat’ Rescue) ಬಳಸುವುದನ್ನೇ ನಿಲ್ಲಿಸಿದ್ದಾರೆ. ಈ ನಡುವೆ ತಮ್ಮ ಸಿನಿಮಾದಲ್ಲಿ ‘ಇಂಡಿಯಾ’ ಎಂದು ಹೆಸರಿದ್ದ ಕಾರಣ ಸಿನಿಮಾದ ಹೆಸರನ್ನು ನಟ ಅಕ್ಷಯ್ ಕುಮಾರ್ ಕೂಡ ಬದಲಾಯಿಸಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ (The Great Indian Rescue) ಹೆಸರನ್ನು ಬದಲಿಸಿ ‘ಮಿಷನ್ ರಾಣಿಗಂಜ್’ ಎಂದು ಹೆಸರಿಡಲಾಗಿದೆ.